Chitradurga news|Nammajana.com|25-8-2025
ನಮ್ಮಜನ.ಕಾಂ, ಚಿತ್ರದುರ್ಗ: ಗೌರಿ– ಹಿಂದೂ ಮಹಾಗಣಪತಿ, ಗಣೇಶ ಹಬ್ಬ, ಈದ್ ಮಿಲಾದ್ ಮೆರವಣಿಗೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಡಿಜೆ (DJ) ಹಾಗೂ ಸೌಂಡ್ ಸಿಸ್ಟಂ ಬಳಕೆ ನಿರ್ಬಂಧಿಸಿ ಆದೇಶ ಹಿನ್ನೆಲೆ ಈ ಬಾರಿ ಐತಿಹಾಸಿ ಹಿಂದೂ ಮಹಾಗಣಪತಿ ಶೋಭಯಾತ್ರೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ, ವಿಸರ್ಜನಾ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಗೆ ಡಿ.ಜೆ. ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದುರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಬ್ಬಗಳ ಆಚರಣೆ ಕುರಿತು ಪೊಲೀಸ್ ಇಲಾಖೆ ಚಿತ್ರದುರ್ಗ ಭಾನುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು
ಮೆರವಣಿಗೆಯಲ್ಲಿ ನಿಗದಿತ ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿವರ್ಧಕ ಸೇರಿ ಶಬ್ದಮಾಲಿನ್ಯ ಉಂಟಾಗುವ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಬಳಸುವಂತಿಲ್ಲ. ಅಲ್ಲದೆ, ದ್ವಿಚಕ್ರ ವಾಹನಗಳಲ್ಲಿ ಬೃಹತ್ ಬಾವುಟ ಪ್ರದರ್ಶಿಸಲು ಮುಂದಾಗಿ ಮನ ಬಂದಂತೆ ವಾಹನ ಚಲಾಯಿಸುವಂತಿಲ್ಲ. ಅನ್ಯ ಧರ್ಮವನ್ನು ಅವಮಾನಿಸು ವಂತಿಲ್ಲ. ಈ ಬಗ್ಗೆ ಸಮುದಾಯಗಳ ಮುಖಂಡರು ಎಚ್ಚರವಹಿಸಿ ಎಂದು ಸೂಚಿಸಿದರು.
ಜಿಲ್ಲಾದ್ಯಂತ ಗೌರಿ-ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಎರಡೂ ಧರ್ಮಿಯರೂ ಸೌಹಾರ್ದತೆಯಿಂದ ಆಚರಿಸಿ. ಪರಸ್ಪರ ಪಾಲ್ಗೊಳ್ಳುವ ಮೂಲಕ ಮತ್ತಷ್ಟು ಬಾಂಧವ್ಯ ವೃದ್ಧಿಸಿಕೊಳ್ಳಿ ಮೆರವಣಿಗೆ, ಶೋಭಾಯಾತ್ರೆಯಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಯಾರೂ ಮುಂದಾಗಬೇಡಿ. ಇದಕ್ಕೆ ಅಗತ್ಯ ಸಹಕಾರ ನೀಡುವ ಮೂಲಕ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಿ ಎಂದು ಹೇಳಿದರು.
ಈ ಬಾರಿ ಡಿಜೆ ಸದ್ದು ದುರ್ಗದಲ್ಲಿ ಡೌಟ್
ಕೋಟೆನಾಡು ಚಿತ್ರದುರ್ಗದ ಗಣೇಶೋತ್ಸವ ನಾಡಿನ ಗಮನ ಸೆಳೆದಿದೆ. ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ನೇತೃತ್ವದಲ್ಲಿ ನಡೆಯಲಿದ್ದು ಈ ಮೆರವಣಿಗೆಗೆ ಯುವಕ, ಯುವತಿಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಭವ್ಯ ಮೆರವಣಿಗೆಗೆ ಸಾಕ್ಷಿಯಾಗುತ್ತಿದ್ದರು.
ವಿಶೇಷವಾಗಿ ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭ ಯಾತ್ರೆ ಇತೀಚಿನ 5 ವರ್ಷಗಳಲ್ಲಿ ಭಾರೀ ಪ್ರಸಿದ್ದಿ ಜೊತೆಗೆ ದೇಶದಲ್ಲಿ ಹೆಸರುವಾಸಿಯಾಗಿತ್ತು. ಆದರೆ ಈ ಬಾರಿ ಡಿಜೆ ಬಳಕೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿರುವ ಇಲಾಖೆ ಯುವಕ, ಯುವತಿಯರಿಗೆ ನಿರಾಸೆಯಾಗಿರುವುದು ಅಂತೂ ಸತ್ಯ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಡಿಜೆ ಮೆರವಣಿಗೆಗೆ ಕುಣಿಯಲೇಂದು ತಯಾರಿ ನಡೆಸಿದ್ದ ಯುವಕರಿಗೆ ಗುಡ್ ನ್ಯೂಸ್ ಇಲ್ಲವಾದರೂ ಮುಂದೆ ಸಮಯವಿದ್ದು ಇಲಾಖೆ ಯಾವ ರೀತಿ ಅನುಮತಿ ನೀಡುತ್ತದೆ ಎಂದು ಕಾದು ನೋಡಬೇಕಿದೆ.
