Chitradurga news|Nammajana.com|6-9-2025
ನಮ್ಮಜನ.ಕಾಂ, ಹಿರಿಯೂರು: ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ 64 ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆ ನಡೆಸಿ ಸಹಕಾರಿ ಸಂಘಗಳಿಗೆ (Hiriyur farmer) ಸರ್ಕಾರದ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ ವತಿಯಿಂದ ದೊರೆಯುವ ಸರ್ಕಾರದ ಯೋಜನೆ, ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.

ಈ ವೇಳೆ ಕರಾಪಸಸನಿ ಜಿಲ್ಲಾ ನಿರ್ದೇಶಕ ಹಾಗೂ ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕ ಕಂದಿಕೆರೆ ಜಗದೀಶ್ ಮಾತನಾಡಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ಅವರ ಸಹಕಾರದಿಂದ (Hiriyur farmer) ರಾಷ್ಟ್ರೀಯ ಸುಸ್ಥಿರ ಅಭಿಯಾನ ಯೋಜನೆಯಲ್ಲಿ ಹಿರಿಯೂರು ತಾಲೂಕಿನ 1000 ರೈತರಿಗೆ 2.50 ಕೋಟಿ ಸಹಾಯಧನ ಮುಂಜೂರು ಮಾಡಲಾಗಿದೆ.
ತಾಲೂಕಿನ ಸಾವಿರ ರೈತರ ಬದುಕಿಗೆ ಇದು ಆಧಾರವಾಗಲಿದ್ದು ಅರ್ಹ ಮತ್ತು ಅವಶ್ಯಕತೆ ಇರುವ ರೈತರು ಈ ಯೋಜನೆಯ ಲಾಭ ಪಡೆಯಬೇಕು. ಎಲ್ಲಾ ಸಹಕಾರಿ ಸಂಘಗಳ ಪದಾಧಿಕಾರಿಗಳು ಈ ಯೋಜನೆಯ ಯಶಸ್ಸಿಗೆ ಶ್ರಮಿಸಬೇಕು.
ಆಸಕ್ತ ಸಹಕಾರಿಗಳು ಛಾಪಾಕಾಗದ ವಿತರಣೆ, ಆಹಾರ ಸಂಸ್ಕರಣ ಕೇಂದ್ರಗಳು, ಗೊಬ್ಬರ ಬೀಜ ಕೇಟದ್ರ ಗಳನ್ನು ತೆರೆಯಲು ಅನುಮತಿ ಪಡೆದು ಸಹಾಯಧನ ಪಡೆಯಲು ಆಸಕ್ತಿ ವಹಿಸಬೇಕು. ರೈತರು ಹಾವುಕಡಿತ, ಆತ್ಮಹತ್ಯೆ, ಆಕಸ್ಮಿಕ ಮರಣಗಳಂತಹ ಅವಘಡಗಳಿಗೆ ತುತ್ತಾದಾಗ (Hiriyur farmer) ಸರ್ಕಾರದಸೌಲಭ್ಯವನ್ನು ಪಡೆಯಬೇಕು ಎಂದರು.
ಇದನ್ನೂ ಓದಿ: B.Y. Vijayendra: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುತಂತ್ರದಿಂದ ಕ್ಲೀನ್ ಚಿಟ್ ಪಡೆದಿದ್ದಾರೆ | ವಿಜಯೇಂದ್ರ ಆರೋಪ
ಈ ಸಂದರ್ಭದಲ್ಲಿ ಉಪನಿರ್ದೇಶಕರಾದ ಕುಮಾರ್,ತಿಪ್ಪೇಸ್ವಾಮಿ, ನಾಗರಾಜ್, ಕಿರಣ್, ಕೃಷ್ಣಕುಮಾರ್ ಇದ್ದರು.
