
Chitradurga news|nammajana.com|15-8-2024
ನಮ್ಮಜನ.ಕಾಂ, ಹಿರಿಯೂರು: ಬೆಂಗಳೂರುನಲ್ಲಿ ಬೈಕ್ ಹಾಗೂ ಕಾರಿನ ನಡುವಿನ ಅಪಘಾತದಲ್ಲಿ ತಾಲ್ಲೂಕಿನ ಗನ್ನಾಯಕನಹಳ್ಳಿ ನಿವಾಸಿ ಬಿ.ಲೋಕೇಶ್ ಇವರ ಮಗ ಎಲ್.ಲೇಪಾಕ್ಷಿ (Hiriyur) (24)ಯವರು ಮರಣ ಹೊಂದಿರುತ್ತಾರೆ.
ಮೃತರ ಕಣ್ಣುಗಳನ್ನು ಬೆಂಗಳೂರಿನ ಆರ್ ಆರ್ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಧಾನ ಮಾಡುವ ಮೂಲಕ ಇವರ ಕುಟುಂಬ ವರ್ಗದವರು ಮಾದರಿಯಾಗಿದ್ದಾರೆ.

ಮೃತ ಎಲ್ ಲೇಪಾಕ್ಷಿ ಅವರ ಜನ್ಮ ದಿನಾಂಕ ಆಗಸ್ಟ್ 12-08-2001 ಆಗಿದ್ದು, ಮರಣವು ಅದೇ ದಿನ ಆಗಸ್ಟ್ 12-08-2024 ರಂದು ಸಂಭವಿಸಿದೆ. ಅಂತ್ಯಕ್ರಿಯೆ ಯನ್ನು ಸೋಮವಾರ (Hiriyur) ಗನ್ನಾಯಕನ ಹಳ್ಳಿಯಲ್ಲಿ ನೇರವೆರಿಸಲಾಯಿತು ಎಂದು ಮೃತರ ತಂದೆ ಲೋಕೇಶ್ ತಿಳಿಸಿದರು.
ಇದನ್ನೂ ಓದಿ: ಹಾಗಲಕೆರೆ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿದ ಸದ್ಗುರು ಆಯುರ್ವೇದ ಸಂಸ್ಥೆ | SADGURU AYURVEDAAYURVEDA
ಇಂತಿ ದುಃಖ ತಪ್ತರು ಕುಟುಂಬಸ್ಥರು ಹಾಗೂ ಅಪಾರ ಸ್ನೇಹಿತರು ಹಾಗೂ ಬಂಧು ಮಿತ್ರರು
