Chitradurga News | Nammajana.com |13-09-2025
ನಮ್ಮಜನ ನ್ಯೂಸ್ ಕಾಂ,ಹಿರಿಯೂರು: ಹಿರಿಯೂರು (HIRIYUR) ತಾಲೂಕಿನಲ್ಲಿ ಅಗತ್ಯಕ್ಕೆ ತಕ್ಕಂತೆ ಪಶು ಆಸ್ಪತ್ರೆಗಳಿವೆ, ಆದರೆ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದ್ದರಿಂದ ಪಶುಪಾಲನೆ ವೃತ್ತಿ ನಂಬಿಕೊಂಡ ಜೀವನ ಸಾಗಿಸುತ್ತಿರುವ ರೈತರ ಪಾಡು ಹೇಳತೀರದಾಗಿದೆ.

ಇದನ್ನೂ ಓದಿ: Chitradurga today Gold Rate | ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ಯಲ್ಲದಕೆರೆ, ದಿಂಡಾವರ, ಕೆ.ಆರ್.ಹಳ್ಳಿ. ಹೂವಿನಹೊಳೆ, ಐಮಂಗಳ ಸೇರಿದಂತೆ ನಾನಾ ಕಡೆ ಜಾನುವಾರು ಆರೋಗ್ಯ ರಕ್ಷಣೆಗಿರುವ ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ರೈತರು ಪರದಾಡುವ ಸ್ಥಿತಿ ಇದೆ.
ಕಲ್ಲಲ್ಲಿ ಭಾಗದ ಕುರಿಗಾಯಿಗಳು ಬೇಸಿಗೆ ಆರಂಭದ ಸಮಯದಲ್ಲಿ ಮೇವಿಗಾಗಿ ನಾನಾ ಪ್ರದೇಶದ ಕಡೆಗೆ ವಲಸೆ ಹೋಗುತ್ತಾರೆ. ಅಲ್ಲಿ ಮಳೆಗಾಲ ಆರಂಭವಾದ ಕೂಡಲೇ ಮರಳಿ ತಮ್ಮ ಊರುಗಳಿಗೆ ಬರುತ್ತಾರೆ. ಈ ವೇಳೆ ಕುರಿಗಳಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೆ ಸೂಕ್ತ ಚಿಕಿತ್ಸೆಗೆ ಪಶು ಆಸ್ಪತ್ರೆ ಅಗತ್ಯವಾಗಿದೆ.
ತಾಲೂಕಿನಲ್ಲಿ 20ನೇ ಜಾನುವಾರು ಗಣತಿಯಂತೆ ಧನ 25,408, ಎಮ್ಮೆ 10,210, ಕುರಿ 4,05,437, ಮೇಕೆ 99,212, ಹಂದಿ 133, ನಾಯಿ 2 8278, ಕುದುರೆ 12, 813 ಕತ್ತೆಗಳಿದ್ದು, ಅದಕ್ಕೆ ತಕ್ಕಂತೆ ಪಶು ಆಸ್ಪತ್ರೆಗಳಿದ್ದರೂ ವೈದ್ಯರು ಹಾಗೂ ಸಿಬ್ಬಂದಿ ಬೇಕಿದೆ.
ನಗರದಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ, ಸಂಚಾರಿ ಪಶು ಚಿಕಿತ್ಸಾಲಯ, ಹೋಬಳಿ ಮಟ್ಟದಲ್ಲಿ ಜೆಜೆಹಳ್ಳಿ, ಐಮಂಗಲ, ಧರ್ಮಪುರ ಪಶು ಆಸ್ಪತ್ರೆಗಳು, ತಾಲೂಕಿನಲ್ಲಿ 15 ಪಶು ಚಿಕಿತ್ಸಾಲಯ ಮತ್ತು 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿದ್ದು,
ಇದರಲ್ಲಿ ಕಾರ್ಯನಿರ್ವಹಿಸಲು ಒಟ್ಟು 110 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 30 ಖಾಯಂ ಹುದ್ದೆಗಳ ಭರ್ತಿ ಹಾಗೂ 29 ಗುತ್ತಿಗೆ ನೇಮಕ ಆಧಾರದ ಮೇಲೆ ಭರ್ತಿಯಾಗಿದ್ದು, ಇನ್ನೂ 51 ಹುದ್ದೆಗಳು ಖಾಲಿ ಇವೆ. ಮುಖ್ಯವಾಗಿ ಕೆ.ಆರ್.ಹಳ್ಳಿ ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿ, ಪರೀಕ್ಷಕ ಹಾಗೂ ಡಿ ಗ್ರೂಪ್ ಹುದ್ದೆಗಳು ಖಾಲಿಯಿದ್ದು, ಯಾವುದೇ ಹುದ್ದೆ ಮಂಜೂರಾಗಿಲ್ಲ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಯಾತ್ರೆ | ಬಾಕ್ಸ್ ಅವಳವಡಿಕೆ ಎಲ್ಲೆಲ್ಲಿ .. ಇಲ್ಲಿದೆ ಮಾಹಿತಿ
ಪ್ರಭಾರಿಯಾಗಿ ಕಾರ್ಯ(HIRIYUR) ನಿರ್ವಹಿಸುತ್ತಿದ್ದಾರೆ. ಮಸ್ಕಲ್ ಹಾಗೂ ಬೇತೂರಿನಲ್ಲಿನ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಒಟ್ಟಿನಲ್ಲಿ ತಾಲೂಕಿನ ಯಾವುದೇ ಪಶು ಆಸ್ಪತ್ರೆ ಪರಿಪೂರ್ಣ ಸಿಬ್ಬಂದಿ ಹೊಂದಿಲ್ಲ. ಈ ನೇಮಕಾತಿ ಸರಕಾರದ ಹಂತದಲ್ಲಿಯೇ ನಡೆಯಬೇಕಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಕ್ರಮ ವಹಿಸಿ ಎಲ್ಲ ಹುದ್ದೆಗಳು ಭರ್ತಿಯಾದರೆ ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆಸಿಗಲಿದೆ ಎನ್ನತ್ತಾರೆ ರೈತರು.
