Chitradurga news |nammajana.com | 28-5-2024
ನಮ್ಮಜನ.ಕಾಂ, ಚಿತ್ರದುರ್ಗ: ಸ್ವಸಹಾಯ ಸಂಘಗಳ ಸದಸ್ಯರ ಸಮೂಹ ಬಂಡವಾಳ ನಿಧಿ ಸಾಲದ ಮರುಪಾವತಿಯ ಲಕ್ಷ ಲಕ್ಷ ಹಣವನ್ನ ಬ್ಯಾಂಕ್ ಗೆ ಕಟ್ಟುವುದಾಗಿ ಹೇಳಿ ಒಕ್ಕೂಟದ LCRP ಪುಷ್ಪವತಿ ದೋಚಿ ವಂಚಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
50 ಜನರ ಸಾಲದ ಹಣ 8 ಲಕ್ಷ ವಂಚನೆ (Holalkere Fraud)
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ (Holalkere Fraud) ತಾಲ್ಲೂಕಿನ ತೊಡರನಾಳ್ ಗ್ರಾಮದ ಶ್ರೀ ಜ್ಞಾನೋದಯ ಸಂಜೀವಿನಿ ಗ್ರಾಮ ಪಂಚಾಯ್ತಿ ಒಕ್ಕೂಟದ LCRP ಪುಷ್ಪವತಿ ಎಂಬಾಕೆ ತಿರುಮಲಾಪುರ, ಲಿಂಗದಹಳ್ಳಿ, ತೊಡರನಾಳ್ ಗ್ರಾಮಗಳ 50 ಜನರ 8 ಲಕ್ಷಕ್ಕೂ ಹೆಚ್ಚು ಹಣವನ್ನ ದೋಚಿ ವಂಚಿಸಿದ್ದಾರೆ ಎಂದು ಸಂಘಗಳ ಸದಸ್ಯರು ಆರೋಪಿಸಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಪ್ರೇಮಾ ವಂಚನೆಯನ್ನ ಬಯಲು ಮಾಡಿದ್ದಾರೆ.
ಈ ಕುರಿತು LCRP ಪುಷ್ಪವತಿಯನ್ನ ಟಿ.ನುಲೇನೂರ ಗ್ರಾಮದಲ್ಲಿ ವಂಚನೆಗೊಳಗಾದ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದರು. ಇನ್ನೂ ಸರ್ಕಾರದಿಂದ ಸಂಘಗಳ ಸದಸ್ಯರಿಗೆ ಸಾಲ ನೀಡಿದ್ದು, ಪ್ರತಿ ವಾರ ಮರು ಪಾವತಿ ಮಾಡಿದ ಹಣವನ್ನ ಸಾಲ ಪಡೆದವರ ಹೆಸರಲ್ಲಿ ಮರು ಪಾವತಿ ಮಾಡುವುದಾಗಿ ಹೇಳಿ ತಾನೇ ಬಳಕೆ ಮಾಡಿ ಸಾಲದ ಖಾತೆಗೆ ಹಣ ಕಟ್ಟದೆ ವಂಚಿಸಿದ್ದಾರೆ (Holalkere Fraud) ಎನ್ನಲಾಗಿತ್ತು.
ಅಡಿಟ್ ನಲ್ಲಿ ಆರೋಪ ಸಾಬೀತು (Holalkere Fraud)
ಈ ಕುರಿತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬೋಜರಾಜ್, TPM ಮಂಜುನಾಥ್, ವಲಯ ಮೇಲ್ವಿಚಾರಕರಾದ ಹೇಮಂತ್, ಲಿಂಗರಾಜ್ ನೇತೃತ್ವದಲ್ಲಿ ಆಡಿಟ್ ಮಾಡಿದ್ದು ಸಂಘದ ಸದಸ್ಯರು ಮಾಡಿದ್ದ ಆರೋಪ ಸಾಬೀತಾಗಿದೆ.
ಇದನ್ನೂ ಓದಿ: Sanehalli: 2024-25 ನೇ ಸಾಲಿನ ಸಾಣೆಹಳ್ಳಿ ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ
ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಹಣ ಕಟ್ಟತ್ತೇನೆ ಎಂದ ಪುಷ್ಪವತಿ
ಈ ವೇಳೆ ವಂಚಕಿಯ ಆರೋಪ ಹೊತ್ತಿರುವ LCRP ಪುಷ್ಪವತಿ ವಿರುದ್ದ ಕಿಡಿಕಾರಿದ ಜನರು ಹಿಡಿ ಶಾಪ ಹಾಕಿದ್ರು ಬಳಿಕ ತಾನು ಬಳಸಿಕೊಂಡ ಹಣವನ್ನ ಮರಳಿ ಕಟ್ಟುವುದಾಗಿ ಪುಷ್ಪವತಿ ತಪ್ಪೊಪ್ಪಿಗೆ (Holalkere Fraud) ಪತ್ರ ಬರೆದುಕೊಟ್ಟಿದ್ದಾರೆ.