Chitradurga news|Nammajana.com|22-7-2025
ನಮ್ಮಜನ.ಕಾಂ, ಹೊಳಲ್ಕೆರೆ: ಯುವಕನೊಂದಿಗೆ ಓಡಿ ಹೋದ (Holalkere) ಪುತ್ರಿಯನ್ನು ಹುಡುಕಿಕೊಡುವಂತೆ ದೂರು ನೀಡಲು ಹೋದಾಗ ಪೊಲೀಸರು ನಿರ್ಲಕ್ಷ್ಯ ವಹಿಸಿದರು ಎಂದು ಮನನೊಂದು ವ್ಯಕ್ತಿಯೊಬ್ಬ ಹೊಳಲ್ಕೆರೆ ಠಾಣೆ ಎದುರು ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದು, ಶವವನ್ನು ಠಾಣೆ ಎದುರು ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಮೃತ ವ್ಯಕ್ತಿಯು ಗಿಲ್ಕೆನಹಳ್ಳಿಯ ಅಜ್ಜಯ್ಯ (45) ಎನ್ನಲಾಗಿದ್ದು ಪೊಲೀಸರು ದೂರು ಪಡೆಯಲಿಲ್ಲ ಎಂದು ಭಾನುವಾರ ಠಾಣೆ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಆತನನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ (Holalkere) ನಡೆಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಜ್ಜಯ್ಯ ಮೃತಪಟ್ಟ ಹಿನ್ನೆಲೆ ಸೋಮವಾರ ಮೃತನ ಸಂಬಂಧಿಕರು ಶವವನ್ನು ಠಾಣೆ ಎದುರುಶವತಂದುಪ್ರತಿಭಟಿಸಲುಮುಂದಾದಾಗಪೊಲೀಸರು ತಾಲೂಕಿನ ಕಣಿವೆ ಬಳಿಯಲ್ಲಿಯೇ ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಮೃತನ ಸಂಬಂಧಿಕರ ನಡುವೆ ವಾಗ್ವಾದ ನಡೆಯಿತು.
ಪೊಲೀಸರ ನಿರ್ಲಕ್ಷದಿಂದಲೇ ಅಜ್ಜಯ್ಯ ಸಾವನ್ನಪ್ಪಿದ್ದು ಎಂದು ಆಕ್ರೋಶವ್ಯಕ್ತಪಡಿಸಿದರು. ಈ ವೇಳೆ ಕಣಿವೆ ಬಳಿ ಸಂಚಾರ ಅಸ್ತವ್ಯಸ್ತವಾಯಿತು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | ವ್ಯಾಪಾರದಲ್ಲಿ ಲಾಭ, ಆರೋಗ್ಯ ಸುಧಾರಣೆ, ಮನಶಾಂತಿ
ಕೊನೆಗೆ ಮೃತನ ಕಡೆಯವರು ಶವವನ್ನು ಠಾಣೆ ಎದಿರು ಆಂಬುಲೆನ್ಸ್‌ನಿಂದ ಕೆಳಗಿಳಿಸಿ ಪೋಲೀಸರ ವಿರುದ್ಧ ಪ್ರತಿಭಟನೆ ಶುರು ಮಾಡಿದರು. ಈ ವೇಳೆ ಹೊಳಲ್ಕೆರೆಪೊಲೀಸ್ ಠಾಣೆಸಿಪಿಐಚಿಕ್ಕಣ್ಣವರ್, ಪಿಎಸ್‌ಐಸಚಿನ್ (Holalkere) ವಿರುದ್ಧಮೃತನಕಡೆಯವರು ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಹೊಳಲ್ಕೆರೆ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಲಾಠಿ ಚಾರ್ಜರ್ ನಡೆಸಿದರು.
