Chitradurga news | nammajana.com | 22-8-2024
ನಮ್ಮಜನ.ಕಾಂ, ಹೊಳಲ್ಕೆರೆ: ಪಟ್ಟಣದ ವಸತಿ ಶಾಲೆಯಲ್ಲಿ ಹತ್ತನೆ ತರಗತಿ ಅಧ್ಯಯನ ಮಾಡುತ್ತಿದ್ದ 6 ವಿದ್ಯಾರ್ಥಿಗಳು ವಸತಿ ನಿಲಯದಿಂದ ನಾಪತ್ತೆಯಾಗಿರುವ ಘಟನೆ ಬುಧವಾರ ಬೆಳಿಗ್ಗೆ (Holalkere School) ಬೆಳಕಿಗೆ ಬಂದಿದ್ದು, ಸಂಜೆ ವೇಳೆಗೆ ಪ್ರಕರಣ ಸಖಾಂತ್ಯ ಕಂಡಿದ್ದು, ಎಲ್ಲಾ ಆರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕುಕ್ವಡೇಶ್ವರಿ ದೇವಸ್ಥಾನದ ಮುಂದಿನ ಡ್ರೀಮ್ ವರ್ಲ್ಡ್ ಖಾಸಗಿ ವಸತಿ ಶಾಲೆಯಲ್ಲಿ (Holalkere School) ಅಧ್ಯಯನ ಮಾಡುತ್ತಿದ್ದ ಹತ್ತನೆ ತರಗತಿ ವಿದ್ಯಾರ್ಥಿಗಳೂ ಅಗಸ್ಟ್ 21 ರಂದು ಮುಂಜಾನೆ ಇದ್ದಕ್ಕಿಂದ್ದಂತೆ ಶಾಲೆ ಕಾಪೌಂಡ್ ದಾಟಿ ಹೊರಟಿದ್ದ 9 ವಿದ್ಯಾರ್ಥಿಗಳಲ್ಲಿ ಮೂವರು ವಾಪಾಸಾಗಿ, 6 ವಿದ್ಯಾರ್ಥಿಗಳು ನಾಪತ್ತೆಯಾಗಿ ತಾಲೂಕಿನಲ್ಲಿ ಆತಂಕ ಸೃಷ್ಟಿಸಿದ್ದರು.
ಶಾಲೆಯಿಂದ ಆರು ವಿದ್ಯಾರ್ಥಿಗಳು ದೀಡಿರ್ ನಾಪತ್ತೆ ಪ್ರಕರಣ ತಾಲೂಕಿನಲ್ಲಿ ಮಿಂಚಿನ ಸಂಚಾರ ಮೂಡಿಸಿದ್ದು, ಸ್ಥಳಕ್ಕೆ (Holalkere School) ಪೋಲಿಸ್ ಪಡೆ ಅಗಮಿಸಿ ಸಮಗ್ರ ತನಿಖೆ ಕೈಗೊಂಡಿತ್ತು. ಇನ್ನು ಪೋಷಕರು ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಅತಂಕದ ಮಧ್ಯ ದಿನ ದೂಡುವಂತಾಗಿತ್ತು.
ನಾಪತ್ತೆಯಾದ ಮಕ್ಕಳು ಯಾವ ಊರಿನವರು: (Holalkere School)
ನಾಪತ್ತೆಯಾಗಿದ್ದ ವಿದ್ಯಾರ್ಥಿಗಳಾದ ಶ್ರೇಯಸ್ ಎಮ್ಮಿಗನೂರು, ಧನುಷ್ ಎಂ.ಡಿ., ನಂದನಹೋಸೂರು, ಮನು ಜಿ.ವಿ. ಕಸವನಹಳ್ಳಿ, ಆರ್.ತರುಣ್ ಹಾಲೇನಹಳ್ಳಿ, ಸಿದ್ದೇಶ್ (Holalkere School) ಸಂಗೇನಹಳ್ಳಿ, ಯಶಸ್ ಪಾಡಿಗಟ್ಟೆ ಎನ್ನಲಾಗಿದೆ.
ನಾಪತ್ತೆಯಾಗಿದ್ದ ಎಮ್ಮಿಗನೂರು ಶ್ರೇಯಸ್ ಜತೆ ಎಲ್ಲಾರು ಬೆಂಗಳೂರಿನಲ್ಲಿರುವ ಶ್ರೇಯಸ್ ಅತ್ತೆ ಶ್ವೇತಾ ಮನೆಯಲ್ಲಿ ಪತ್ತೆಯಾಗಿ ಪೋಲಿಸ್ ಮತ್ತು ತಹಸೀಲ್ದಾರ್ ವಿದ್ಯಾರ್ಥಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಶಾಲೆ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪೋಷಕರು, ಸಾಕಷ್ಟು ಶುಲ್ಕ ಪಡೆದು ವಸತಿಯುತ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಿಲ್ಲ. ಸಿಸಿ ಕ್ಯಾಮರ್ ಇವೆ.
ಅವುಗಳಿಗೆ ವೈರ ಸಂಪರ್ಕ ಇಲ್ಲ. ವಸತಿ ನಿಲಯದಲ್ಲಿ (Holalkere School) ಗುಣಮಟ್ಟದ ಆಹಾರದ ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಕಿರುಕುಳ ಹೆಚ್ಚಾಗಿ ಪೋಷಕರಿಗೆ ಹೇಳಿಕೊಳ್ಳಲು ಸಾಧ್ಯವಾಗದೆ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಸಿಲುಕಿ ನಿಲಯ ಬಿಟ್ಟು ಹೊಗಿದ್ದಾರೆಂದು ಅತಂಕ ವ್ಯಕ್ತಪಡಿಸಿದರು.
ಬಾಕ್ಸ್ :
ಶಾಲೆ ಅಡಳಿತ ಮಂಡಳಿ ಸರಕಾರದ ಪರವಾನಿಗೆ ಇಲ್ಲದೆ ಅನಾಧಿಕೃತವಾಗಿ ಹಾಸ್ಟಲ್ ನಡೆಸುತ್ತದೆ. ಹಾಸ್ಟಲ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಾಯನಕ್ಕೆ ನಿತ್ಯ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿಗಳು ಒತ್ತಡ ಸಹಿಸಿಕೊಳ್ಳಲು (Holalkere School) ಸಾಧ್ಯವಿಲ್ಲದೆ ರಾತ್ರೋರಾತ್ರಿ ಹಾಸ್ಟಲ್ ತೊರೆದಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಹಾಸ್ಟಲ್‌ನಲ್ಲಿ ಇರಲು ವಿದ್ಯಾರ್ಥಿಗಳು ಒಪ್ಪುತ್ತಿಲ್ಲ. ನಾನು ವಿಡೀಯೋ ಕಾಲ್ ನಲ್ಲಿ ಮಾತನಾಡಿದ್ದೇನೆ.