Chitradurga News | Nammajana.com | 21-09-2025
ನಮ್ಮಜನ ನ್ಯೂಸ್ ಕಾಂ,ಹೊಳಲ್ಕೆರೆ: ಸರ್ಕಾರ(Sirigere shri) ಸಾಮಾಜಿಕ ಮತ್ತು ಸಮೀಕ್ಷೆ ಹೆಸರಿನಲ್ಲಿ ಜಾತಿ ಗಣತಿ ಮಾಡದೆ ಈಗ ಪ್ರಕಟಿಸಿರುವಂತೆ ಜಾತಿಗಳ ಪಟ್ಟಿಯಲ್ಲಿರುವ ದೋಷವನ್ನು ಸರಿಪಡಿಸಿ ಸಮೀಕ್ಷೆ ಮಾಡಬೇಕು, ಹಾಗಾಗಿ ತಾತ್ಕಾಲಿಕವಾಗಿ ಸಮೀಕ್ಷೆಯನ್ನು ಮುಂದೂಡಿ ಎಂದು ಸರ್ಕಾರಕ್ಕೆ ನಮ್ಮ ಆಗ್ರಹ ಇದೆ ಎಂದು ಸಿರಿಗೆರೆ ತರಳುಬಾಳು ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ರೈತರಿಗೆ ಜಮೀನುಗಳಿಗೆ ಕಾಲುದಾರಿ ಮತ್ತು ಬಂಡಿದಾರಿ ಸಮಸ್ಯೆಗೆ ಸರ್ಕಾರದಿಂದ ಮಹತ್ವದ ಆದೇಶ
ಅವರು ಹೊಳಲ್ಕೆರೆ ಪಟ್ಟಣದ ಸಂವಿಧಾನ ಸೌಧದಲ್ಲಿ ಶನಿವಾರ ಸಂಜೆ ತಾಲೂಕು ಸಾದು ಸರ್ದ್ಧಮ ಸಮಾಜ ಕೈಗೊಂಡಿದ್ದ ಭಕ್ತಿ ಸಮರ್ಪಣಾ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದರು.
ಸರಕಾರ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮಾಡುವುದು ಸರಿ, ಇದರ ಹೆಸರಿನಲ್ಲಿ ಇಲ್ಲದ ಜಾತಿಗಳನ್ನು ಸೃಷ್ಟಿಸಿ ಸಮೀಕ್ಷೆ ಸರ್ಕಾರದ ಕ್ರಮ ಸರಿಯಲ್ಲ. ಸರ್ಕಾರ ತಕ್ಷಣವೇ ಸಮೀಕ್ಷೆಯನ್ನು ಮುಂದೂಡಬೇಕು. ಸರ್ಕಾರದ ಶಾಶ್ವತ ಹಿಂದುಳಿದ ಆಯೋಗ ಪ್ರಕಟಿಸಿರುವ ಜಾತಿ ಪಟ್ಟಿಗಳಲ್ಲಿ ಸಾಕೊಷ್ಟು ಗೊಂದಲಮಯವಿದೆ. ಇದರಿಂದ ಜನರಿಗೆ ಯಾವ ಜಾತಿಯಲ್ಲಿ ಇದ್ದೇವೆ ಎನ್ನುವುದೇ ಸಮಸ್ಯೆಯಾಗಿದೆ.
ಸರ್ಕಾರ ಈಗ ಕೈಗೊಂಡಿರುವ ಸಮೀಕ್ಷೆಯಿಂದ ರಾಜ್ಯದಲ್ಲಿ ಜಾತಿ ಸಂಘರ್ಷ ಉಂಟಾಗಲಿದೆ. ಮೊದಲು ಜಾತಿ ಪಟ್ಟಿಯಲ್ಲಿ ಇರುವ ದೋಷವನ್ನು ಸರಿಪಡಿಸಿಡಬೇಕು. ಸಾಮಾಜಿಕ ಶೈಕ್ಷಣಿಕ ಅರ್ಥಿಕ ಸಮೀಕ್ಷೆ ವಿಧವತ್ತಾಗಿ ಆಗಬೇಕು. ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಲು ಜಾತಿ ಕೇಳುವ ಅಗತ್ಯವೇ ಇಲ್ಲ. ಜಾತಿ ಕೇಳುವ ಸಭ್ಯತೆ ಭಾರತೀಯರಲ್ಲಿ ಬೆಳೆದು ಬಂದಿಲ್ಲ, ಸರಕಾರ ಜಾತಿಯ ಹೆಸರಲ್ಲಿ ಸಮೀಕ್ಷೆ ಮಾಡುವುದು ಸರಿಯಲ್ಲ.
ಎಲ್ಲಾ ಜಾತಿಯಲ್ಲಿ ಬಡವರಿದ್ದಾರೆ. ಈಗ ಜನರಲ್ಲಿ ಯಾವ ಜಾತಿ ಬೆರೆಸಿದರೇ ಸರಕಾರದ ಸೌಲಭ್ಯ ಸಿಕ್ಕುತ್ತದೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಜಾತಿಗಳ ಪಟ್ಟಿಯಲ್ಲಿ ಹಿಂದು ಲಿಂಗಾಯ್ತಿ, ವೀರಶೈವ ಲಿಂಗಾಯ್ತಿ, ಲಿಂಗಾಯ್ತಿ, ವೀರಶೈವ, ಒಂದೆ ಜಾತಿಗೆ ನಾನಾ ಜಾತಿಯ ಕಲಂ ನೀಡಿದ್ದಾರೆ. ಇದನೇಲ್ಲ ಸರಕಾರ ಸರಿಪಡಿಸಿ ಸಮೀಕ್ಷೆ ಮಾಡಬೇಕೆಂದು ನಮ್ಮ ಆಗ್ರಹವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ : ಎಂಡೊಸ್ಕೋಫಿ ಮತ್ತು ಕೊಲೋನೋಸ್ಕೋಪಿ ಸೇವೆ ಆರಂಭ
ರೈತರಿಗೆ ಸರ್ಕಾರದ ಪಿಎಮ್ ಫಸಲು ಭೀಮಾ ಯೋಜನೆಯಲ್ಲಿ ಪರಿಹಾರ ನೀಡುವಾಗ ಕೆಲವೊಂದು ದೋಷಗಳು ಕಾಣಿಸಿಕೊಂಡಿವೆ. ಪ್ರಧಾನಮಂತ್ರಿ ಫಸಲ್ ಯೋಜನೆ ವಿಮಾ ಕಂಪನಿ ಸಮೀಕ್ಷೆ ಕಾರ್ಯದಲ್ಲಿ ಪ್ರತಿ ರೈತನ ಜಮೀನು ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ಸರಾಸರಿ ಬೆಳೆ ಪರೀಕ್ಷೆ ಮಾಡಿ ಅದರ ಹಿನ್ನೆಲೆಯಲ್ಲಿ ವಿಮೆ ನೀಡುವುದರಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗಲಿದೆ.
ಪಸಲು ಭೀಮಾ ಯೋಜನೆಯಲ್ಲಿ ಕೆಲವೊಂದಿಷ್ಟ್ಟು ದೊಷಗಳಿವೆ. ನಿಯಮಗಳನ್ನು ಬದಲಾಯಿಸಿ ರೈತರಿಗೆ ನಷ್ಟಕ್ಕೆ ತಕ್ಕಂತೆ ವಿಮೇ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ದೊಷಗಳನ್ನು ಸರಿಪಡಿಸಲು ನಮ್ಮ ರಾಜ್ಯದ ಸಂಸದರು ಕ್ರಮವಹಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
೧೯೪೦ ರಲ್ಲಿ ಹಿರಿಯ ಜಗದ್ಗುರು(Sirigere shri) ಲಿಂಗೈಕ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹೊಳಲ್ಕೆರೆಗೆ ಬಂದಾಗ ಇಲ್ಲಿನ ಭಕ್ತರ ಆಶಯದಂತೆ ಪಶು ವೈದ್ಯ ಶಾಲೆಯನ್ನು ೨೦೦೦ ಸಾವಿರ ಹಣಕೊಟ್ಟು ನಿರ್ಮಿಸಿ ಕೊಟ್ಟಿದ್ದರು. ಹಿರಿಯ ಗುರುಗಳು ಎಲ್ಲಾ ವರ್ಗದವರಿಗೂ ವ್ಯಾಪಕ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳನ್ನು ತೆರೆದು ಜಾತಿ ಮತ ಧರ್ಮ ಎನ್ನದೆ ಶೈಕ್ಷಣಿಕ ಕ್ರಾಂತಿಯನ್ನ ಸೃಷ್ಟ್ಟಿಸಿ ಸಮಾಜದ ಪರಿವರ್ತನೆಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಹೊಳಲ್ಕೆರೆಯ ಭಕ್ತರು ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ನೂರು ಕ್ವಿಂಟಲ್ ಬೆಳೆ ಕೊಡುತ್ತಿರುವುದು ಇಲ್ಲಿನ ಜನರ ಭಕ್ತಿಯನ್ನು ಪ್ರದರ್ಶಿಸುತ್ತದೆ. ನಮ್ಮ ಪಾರಂಪರಿಕ ಜಾನಪದ ಕಲೆಗಳ ಪ್ರದರ್ಶನ ಕೈಗೊಂಡು, ಜಾನಪದದ ಸಾಂಸ್ಕೃತಿಕ ಕೊಡುಗೆಯನ್ನು ಇಲ್ಲಿನ ಭಕ್ತರು ಅನಾವರಣ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ, ೧೨ನೇ ಶತಮಾನದಲ್ಲಿ ಲಿಂಗಬೇದ ಜಾತಿಭೇದ ಹೆಚ್ಚಾಗಿರುವ ಸಮಯದಲ್ಲಿ ಎಲ್ಲರನ್ನು ನಮ್ಮವರು ಎನ್ನುವ ಸಂದೇಶ ನೀಡಿದ ಬಸವಣ್ಣನ ಚಿಂತನೆಗಳನ್ನ ಸಾಕಾರಗೊಳಿಸಲು ಸಿರಿಗೆರೆ ಮಠ ಹಾಗೂ ಹಿರಿಯ ಜಗದ್ಗುರು ಶ್ರಮಿಸಿದ್ದಾರೆ. ಜಾತಿ ವ್ಯವಸ್ಥೆಗೆ ಮುಕ್ತಿ ನೀಡಲು ಎಲ್ಲರಿಗೂ ಅನ್ನ,ಅಕ್ಷರ, ಜ್ಞಾನ ದಾಸೋಹ ನೀಡಿ ಸಮಾಜದ ಉನ್ನತೀಕರಣಕ್ಕೆ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಸಿರಿಗೆರೆ ತರಳುಬಾಳು ಮಠ ಸಮಾಜದಲ್ಲಿರುವ ಕಟ್ಟಡ ಕಡೆಯ ಮನುಷ್ಯನಿಗೂ ಬದುಕು ಕಟ್ಟಿಕೊಳ್ಳುವ ದಾರಿ ತೋರಿಸುವ ಮಹಾನ್ ಶಕ್ತಿಯನ್ನು ಒಳಗೊಂಡಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸತ್ಕಾರ್ಯಗಳನ್ನ ಕೈಗೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಶಿವಕುಮಾರ ಮಹಾಸ್ವಾಮಿಗಳು ಕಲಿಸಿದ ಶಿಸ್ತು, ಕಾಯಕ ನೀತಿ, ಜಾತ್ಯಾತೀತ ಸಂದೇಶಗಳು ಎಂದಿಗೂ ನಮ್ಮನ್ನ ಮನುಷ್ಯರನ್ನಾಗಿ ಪರಿವರ್ತಿಸುತ್ತವೆ. ಸ್ವಾಮೀಜಿಗಳು ನೀಡಿದ ಚಿಂತನೆಗಳು ಸರ್ವಕಾಲಿಕ ಶ್ರೇಷ್ಠ್ಠವಾಗಿದ್ದು, ನಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕೆಂದು.
ಸಹಕಾರ ರತ್ನ ಎಸ್.ಆರ್ ಗಿರೀಶ್ ಮಾತನಾಡಿ, ಪರಮಪೂಜ್ಯರ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೊಳಲ್ಕೆರೆ ಭಕ್ತರಿಂದ ನೂರು ಕ್ವಿಂಟಾಲ್ ಬೆಳೆಯನ್ನ ಭಕ್ತಿ ಸಮರ್ಪಣೆ ಮೂಲಕ ಸಮರ್ಪಣೆ ಮಾಡುತ್ತಿದ್ದೇವೆ. ತಾಲೂಕಿನ ಪ್ರತಿಯೊಬ್ಬ ಭಕ್ತರು ಸ್ವ ಇಚ್ಛೆಯಿಂದ ಮಠಕ್ಕೆ ತನು ಮನ ಧನ ಸಮರ್ಪಸಿದ್ದಾರೆ.
ಇದನ್ನೂ ಓದಿ: Chitradurga Gold Rate | ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಈ ನಿಟ್ಟಿನಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ(Sirigere shri) ಸ್ವಾಮೀಜಿಗಳು ಇಲ್ಲಿಗೆ ಬಂದು ಭಕ್ತಿ ಸಮರ್ಪಣೆ ಸಾನಿಧ್ಯ ವಹಿಸಿ ಆಶೀರ್ವಚನದಲ್ಲಿ ಅಮೂಲ್ಯವಾದ ಸಂದೇಶಗಳನ್ನು ನೀಡಿ ಸಮೀಕ್ಷೆ ಮತ್ತು ಪಸುಲು ಭೀಮಾ ಯೋಜನೆಯ ದೋಷಗಳ ಚಿಂತನ ಮಂಥನ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಿ.ರಮೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಕೆ.ರುದ್ರಪ್ಪ, ದೀಶಾ ಸದಸ್ಯ ರಾಜಶೇಖರ್, ಕಲ್ಲನಾಗ್ತಿಹಳ್ಳಿಸುರೇಶ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೀಶ್ ನಾಡಿಗ್, ಕೆ.ಆರ್.ರಾಜಪ್ಪ, ಬಂಗಿಲೋಕೇಶ್,ತಾ.ಪ.ಮಾಜಿ ಸದಸ್ಯ ಓಂಕಾರಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಅ.ಭಾ.ವೀರಶೈವ ಲಿಂಗಾಯ್ತಿ ಮಾಹಾ ಸಭ ಅಧ್ಯಕ್ಷ ಮಾಲಿಗೆಪ್ರಭಕರ್, ಕಾರ್ಯದರ್ಶಿ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಉಮಾಪತಿ, ನಿದೇರ್ಶಕರಾದ ಕುಡಿನೀರುಕಟ್ಟೆ ವೀರಭದ್ರಪ್ಪ, ವಕೀಲ ಚಂದ್ರಶೇಖರ್, ಆಗ್ರಹಾರಬಸವರಾಜ್, ಕೆಂಗುಂಡೆ ಬಸವರಾಜ್,ಚಿಕ್ಕಎಮ್ಮಿಗನೂರು ಪ್ರಕಾಶ್ ಮತ್ತೀತರು ಇದ್ದರು.
ಸಿರಿಗೆರೆ ವಿದ್ಯಾರ್ಥಿಗಳ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನ ಕಾರ್ಯಕ್ರಮ ಕೈಗೊಳ್ಳಲಾಗಿತ್ತು.
