Chitradurga news|nammajana.com|18-10-2024
ವರದಿ: ರಾಜ ಸಿರಿಗೆರೆ
ನಮ್ಮಜನ.ಕಾಂ, ಸಿರಿಗೆರೆ: ಇಲ್ಲಿನ ಹೊಸ ಕೆರೆ ಭರ್ತಿಯಾಗಿ ಎರಡು ದಿನಗಳ ಹಿಂದೆಯೇ ಕೋಡಿ ಬಿದ್ದಿತ್ತು. ಈ ದಿನ (Hosa kere) ಮೆದಿಕೇರಿಪುರ, ದೊಡ್ಡಿಗನಾಳ್ ಹಾಗೂ ಜಮ್ಮೇನಹಳ್ಳಿ ಹಳ್ಳಗಳ ಮೂಲಕ ಬಹಳಷ್ಟು ನೀರು ಹರಿದು ಬಂದಿದ್ದರಿಂದ ಕೆರೆಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಯಿತು.
ಪರಿಣಾಮವಾಗಿ ಅಳಗವಾಡಿ-ಸಿರಿಗೆರೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ನಿರೀಕ್ಷೆ ಮೀರಿ ನೀರು ಹರಿದದ್ದರಿಂದ ಅಳಗವಾಡಿ, ಓಬಳಾಪುರ, ಬಾವಿಹಾಳ್ ಕಡೆ ಹೋಗುವ ರಸ್ತೆಯ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಕೆಲವು ಗ್ರಾಮಗಳಿಗೆ ಹೋಗುವ ಜನರಿಗೆ ತೊಂದರೆ ಉಂಟಾಗಿತ್ತು.
ಕೋಡಿಯ ವಿಹಂಗಮ ದೃಶ್ಯವನ್ನು ಕಣ್ಣಾರೆ ಕಾಣಲು ಬಹಳಷ್ಟು ಜನರು ಸೇರಿದ್ದರು. ಸೆಲ್ಫಿ ಗೀಳಿನ ಜನರು ಫೋಟೋಗಳನ್ನು ಕ್ಲಿಕ್ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೋಡಿ ನೋಡಲು ಬರುವ ಕೆಲವರು ಮೊದಲೇ ಮೀನಿನ ಬಲೆಗಳನ್ನು (Hosa kere) ಸಿದ್ದಗೊಳಿಸಿಕೊಂಡು ಬಂದಿದ್ದರು. ಕೆರೆಯಿಂದ ಹರಿಯುವ ನೀರಿನಲ್ಲಿ ಬಲೆಗಳನ್ನು ಹರಡಿ ಮೀನು ಹಿಡಿಯುವ ಕೆಲಸದಲ್ಲಿ ತಲ್ಲೀನರಾಗಿದ್ದರು.
ಇದನ್ನೂ ಓದಿ: ಶಾಸಕ ಟಿ.ರಘುಮೂರ್ತಿ ಪುತ್ರಿ ವಿವಾಹ ಸ್ಥಳ ಪರಿಶೀಲಿಸಿದ ಡಿಸಿ,ಪೂರ್ವವಲಯ ಐಜಿಪಿ | Daughter marriage
ಕೋಡಿಯಲ್ಲಿ ಪುಟಾಣಿ ಮಕ್ಕಳು ಹಿಂಜರಿಕೆ ಇಲ್ಲದೆ (Hosa kere) ಆಟವಾಡುತ್ತಿದ್ದ ದೃಶ್ಯ ಅಪರೂಪವಾಗಿತ್ತು. ಸಂಜೆಯವರೆಗೂ ಅಳಗವಾಡಿ-ಸಿರಿಗೆರೆ ಸಂಪರ್ಕ ರಸ್ತೆಯಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ.