Chitradurga news|nammajana.com|02-08-2024
ನಮ್ಮಜನ.ಕಾಂ, ಹೊಸದುರ್ಗ: ಪಟ್ಟಣದ ತಾ.ಪಂ. ಕಚೇರಿಯ ಆವರಣದಲ್ಲಿರುವ ಅಕ್ಷರ ದಾಸೋಹದ ಸಭಾಂಗಣದಲ್ಲಿ ಈ ಹಿಂದೆ ತಾಲೂಕು ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಪರಮೇಶ್ವರಪ್ಪ ಬೇರೆಡೆಗೆ ವರ್ಗಾವಣೆಗೊಂಡ ಹಿನ್ನೆಲೆ, (HOSADURGA) ಗುರುವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್ ಹಾಗೂ ಇತರರ ಸಮ್ಮುಖದಲ್ಲಿ ತಾಲೂಕು ಅಕ್ಷರ ದಾಸೋಹದ ನೂತನ ಸಹಾಯಕ ನಿರ್ದೇಶಕರಾಗಿ ಆರ್. ಶಾಂತಪ್ಪ ಅಧಿಕಾರ ವಹಿಸಿಕೊಂಡರು.
ನೂತನ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆರ್. ಶಾಂತಪ್ಪ ಮಾತನಾಡಿ, ನಾನು ಜನಿಸಿದ (HOSADURGA) ತಾಲ್ಲೂಕಿನಲ್ಲಿಯೇ ಮಹತ್ವದ ಇಲಾಖೆಯ ಜವಾಬ್ದಾರಿ ಹೊತ್ತು, ಸೇವೆ ಮಾಡುವ ಅವಕಾಶ ದೊರೆತಿರುವುದು ಸಂತಸ ತಂದಿದೆ.

ತಾಲೂಕಿನಲ್ಲಿ ಒಳ್ಳೆಯ ಶಾಸಕರು, ಬಿಇಓ, ಬಿಆರ್ ಸಿ ಮತ್ತು ಶಿಕ್ಷಕರಿದ್ದು, ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡಲು ಬಯಸಿದ್ದೇನೆ.
8 ವರ್ಷಗಳ ಕಾಲ ಪ್ರೌಢಶಾಲಾ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಬಳಿಕ, ಪ್ರಧಾನ್ ಮಂತ್ರಿ ಪೋಷಣ್ ಅಭಿಯಾನ (HOSADURGA) ಯೋಜನೆಯಡಿ ನಡೆಸುವ ಪರೀಕ್ಷೆ ಎದುರಿಸಿ, ತೇರ್ಗಡೆ ಹೊಂದಿ ನೇರವಾಗಿ ಹೊಸದುರ್ಗಕ್ಕೆ ನೇಮಕವಾಗಿದ್ದೇನೆ.
ನಾನು ಜವಾಬ್ದಾರಿ ವಹಿಸಿಕೊಂಡಿರುವ ಇಲಾಖೆಯ ಕಾರ್ಯವ್ಯಾಪ್ತಿ ಬಹಳ ಮಹತ್ವದ್ದಾಗಿದ್ದು, ಜವಾಬ್ದಾರಿಯುತವಾಗಿ ನಿರ್ವಹಿಸಿ, ಇಲಾಖೆಗೆ ಒಳ್ಳೆಯ ಹೆಸರು ತರಲು ಶ್ರಮಿಸುವೆ ಎಂದರು.
ಇದನ್ನೂ ಓದಿ: VV Sagara water level: ವಾಣಿವಿಲಾಸ ಜಲಾಶಯದ ಇಂದಿನ ನೀರಿನ ಮಟ್ಟ | 2 ಆಗಸ್ಟ್ 2024
ಈ ವೇಳೆ ಕ್ಷೇತ್ರ ತಾ.ಪಂ.ಇಓ ಸುನಿಲ್ ಕುಮಾರ್, ಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್ ಮತ್ತು ಸಹಾಯಕ ಕ್ರೀಡಾಧಿಕಾರಿ ಮಹಾಂತೇಶ್ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಹಾಗೂ ಹಲವು ಶಿಕ್ಷಕರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252