Chitradurga News | Nammajana.com | 04-09-2025
ನಮ್ಮಜನ ನ್ಯೂಸ್ ಕಾಂ,ಹೊಸದುರ್ಗ: ಮನೆ(Hosadurga) ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಹೊಸದುರ್ಗ ಪೋಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿದ್ದು ಬಂದಿತರಿಂದ 3 ಲಕ್ಷ ರು. ಬೆಲೆಯ 30 ಗ್ರಾಂ ಚಿನ್ನದ ಒಡವೆ, 25 ಸಾವಿರ ಬೆಲೆಯ ಬೆಳ್ಳಿ ಒಡವೆ ಹಾಗೂ ಕೃತ್ಯಕ್ಕೆ ಬಳಸಿದ್ದ 60 ಸಾವಿರ ಬೆಲೆಯ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: SCP-TSP ಹಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆ
ಬಂದಿತರನ್ನು ಚನ್ನಗಿರಿ ತಾಲೂಕಿನ ಹೊಸೂರು ಗ್ರಾಮದ ರಾಜಾಸಾಬ್ (35) ಹಾಗೂ ಮಹಮದ್ ರಫೀಕ್ (30) ಎಂದು ಗುರುತಿಸಲಾಗಿದೆ. ಹೊಸದುರ್ಗ ಪೋಲೀಸರು ಈ ಕಾರ್ಯಕ್ಕೆ ಜಿಲ್ಲಾ ಎಸ್‌ಪಿ ರಂಜಿತ್ ಕುಮಾರು ಬಂಡಾರು ಶ್ಲಾಘಿಸಿದ್ದಾರೆ.
