
Chitradurga news|nammajana.com|27-04-2025
ನಮ್ಮಜನ.ಕಾಂ, ಚಿತ್ರದುರ್ಗ: ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಬೀಸಿದ ಬಲೆಗೆ ಸಿಲುಕಿ ನ್ಯಾಯಾಂಗ (Hosadurga) ಬಂಧನದ ಲ್ಲಿದ್ದ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು (40) ಶನಿವಾರ ಮುಂಜಾನೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ನಾಲ್ಕು ದಿನದ ಹಿಂದೆ ಏ.20 ರಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಿಮ್ಮರಾಜು ಚಿತ್ರದುರ್ಗ ಬಂಧಿಖಾನೆಯಲ್ಲಿ ನ್ಯಾಯಾಂಗದ ವಶದಲ್ಲಿದ್ದರು. ಶನಿವಾರ ಮುಂಜಾನೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಬೀಸಿದ ಬಲೆಗೆ ಸಿಲುಕಿ ನ್ಯಾಯಾಂಗ ಬಂಧನದ ಲ್ಲಿದ್ದ ಹೊಸದುರ್ಗ ಪುರಸಭೆ (Hosadurga) ಮುಖ್ಯಾಧಿಕಾರಿ ತಿಮ್ಮರಾಜು (40) ಶನಿವಾರ ಮುಂಜಾನೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ನಾಲ್ಕು ದಿನದ ಹಿಂದೆ ಏ.20 ರಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಿಮ್ಮರಾಜು ಚಿತ್ರದುರ್ಗ ಬಂಧಿಖಾನೆಯಲ್ಲಿ ನ್ಯಾಯಾಂಗದ ವಶದಲ್ಲಿದ್ದರು. ಶನಿವಾರ ಮುಂಜಾನೆ ಕಾರಾಗೃಹದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇ-ಖಾತೆ ಮಾಡಿಕೊಡಲು 50 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಖ್ಯಾಧಿಕಾರಿ ತಿಮ್ಮರಾಜು ಪುರಸಭೆ
ಸದಸ್ಯ ಎನ್ ಶಂಕ್ರಪ್ಪ ಬಳಿ 25 ಸಾವಿರ ರು. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ತಂಡಕ್ಕೆ ಸಿಕ್ಕಿ ಬಿದ್ದಿದ್ದರು.
ಶಂಕ್ರಪ್ಪನಿಂದ ನಿತ್ಯ ಕಿರುಕುಳ: ಪುರಸಭೆ
ಮುಖ್ಯಾಧಿಕಾರಿ ತಿಮ್ಮರಾಜು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪತ್ನಿ ಕಾವ್ಯ, ಪುರಸಭೆ ಸದಸ್ಯ ಶಂಕ್ರಪ್ಪ ಕಳೆದ ಒಂದು ತಿಂಗಳಿನಿಂದ ನನ್ನ ಗಂಡನಿಗೆ ಮೊಬೈಲ್ ಕರೆ ಮಾಡಿ ತುಂಬಾ ಕಿರುಕುಳ (Hosadurga) ನೀಡುತ್ತಿದ್ದರು. ನನ್ನ ಗಂಡ ಪ್ರಾಮಾಣಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಶಂಕ್ರಪ್ಪ ಲೋಕಾಯುಕ್ತ ಬಂಧನಕ್ಕೂ ಮುನ್ನ ತುಂಬಾ ಟಾರ್ಚ‌್ರಕೊಡುತ್ತಿದ್ದ. ಅಂದು ಆಫೀಸ್‌ಗೆ ಬಂದು ಲಂಚ ಕೊಡಲು ಪ್ರಯತ್ನ
ಮಾಡಿದ್ದಾನೆ. ನಮ್ಮ ಮನೆಯವರು ಹಣ ಸ್ವೀಕರಿಸದೇ ಹಿಂದೇಟು ಹಾಕಿದ್ದಾರೆ. ಆದರೂ ಬೆಂಬಿಡದೇ ಪಟ್ಟಣದ ದುರ್ಗಮ್ಮ ಜಾತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಗೊತ್ತಾಗದಂತೆ ಜೇಬಲ್ಲಿ ಹಣ ಇಟ್ಟಿದ್ದಾನೆ ಎಂದು ಆರೋಪಿಸಿದರು.
ಇದು ಪೂರ್ವ ನಿಯೋಜಿತವಾಗಿ ಮಾಡಿರುವ ಕೃತ್ಯವಾಗಿದ್ದು ಈ ಘಟನೆ ಹಿಂದೆ ಸದಸ್ಯ ಶಂಕ್ರಪ್ಪ, ಮಾಜಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಹಲವರ ಕೈವಾಡವಿದೆ.ಹಿಂದಿರುವ ಎಲ್ಲರಿಗೂಶಿಕ್ಷೆ ಆಗಲೇಬೇಕು. ನನ್ನ ಗಂಡನ ಸಾವಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡ್ತೀವಿ. ನಿನ್ನೆ ತಾನೇ ಜೈಲಿಗೆ ಹೋಗಿ (Hosadurga) ಮಾತನಾಡಿಸಿಕೊಂಡು ಬಂದಿದ್ದೆ. ಮಾನಸಿಕ ಖಿನ್ನತೆಗೆ ಒಳಗಾಗಿ ನನ್ನ ಗಂಡನಿಗೆ ಈ ಸ್ಥಿತಿ ಬಂದಿದೆ. ಮಂಗಳವಾರ ಬೇಲ್ ಸಿಗುವ ನಿರೀಕ್ಷೆಯಿದೆ ಎಂದು ಹೇಳಿ ಬಂದಿದ್ದೆ ಎಂದು ಕಣ್ಣೀರಿಟ್ಟರು.
ಕಾರಾಗೃಹದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ
ಇ-ಖಾತೆ ಮಾಡಿಕೊಡಲು 50 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಖ್ಯಾಧಿಕಾರಿ ತಿಮ್ಮರಾಜು ಪುರಸಭೆ ಸದಸ್ಯ ಎನ್ ಶಂಕ್ರಪ್ಪ ಬಳಿ 25 ಸಾವಿರ ರು. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ತಂಡಕ್ಕೆ ಸಿಕ್ಕಿ ಬಿದ್ದಿದ್ದರು.
