Chitradurga news|nammajana.com|22-6-2024
ನಮ್ಮಜನ.ಕಾಂ, ಹೊಸದುರ್ಗ: ನಾವು ನಮ್ಮ ಬದುಕಿನಲ್ಲಿ ಪ್ರತಿನಿತ್ಯ ತಿನ್ನುತ್ತಿರುವ ಆಹಾರದಲ್ಲಿ ವಿಷಪೂರಿತ ವಸ್ತುಗಳು ಸೇರ್ಪಡೆಯಾಗಿವೆ. ಸಿರಿಧಾನ್ಯಗಳು ಮತ್ತು ಸಾವಯವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಪ್ರತಿನಿತ್ಯ ಯೋಗ (Hosadurga yoga day) ಮಾಡುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ದುರ್ಗಾ ಐಟಿಐ ಉಪನ್ಯಾಸಕ ಧನಂಜಯ ತಿಳಿಸಿದರು.
ನಗರದ ಗೊರುವಿನಕಲ್ಲು ರಸ್ತೆಯ ಶ್ರೀ ದುರ್ಗಾ ಐಟಿಐ ಕಾಲೇಜಿನಲ್ಲಿ ನಡೆದ 10 ನೇ ವಿಶ್ವ ಯೋಗ (Hosadurga yoga day) ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸನಾತನ ಸಂಸ್ಕೃತಿಯ ತವರು ಭಾರತದ ಮುಖ್ಯ ಕ್ರೀಡೆಗಳಲ್ಲಿ ಯೋಗವು ಒಂದು, ಪತಂಜಲಿ ಮಹರ್ಷಿ ಯೋಗ ಪಿತಾಮಹರಾಗಿ ಪ್ರಪಂಚದ ಮನುಕುಲಕ್ಕೆ ಯೋಗವನ್ನು ಒಂದು ದೈವದತ್ತ ಆಚರಣೆ ಎಂದು ಸಾರಿ ಹೋಗಿದ್ದಾರೆ. ಶಾಲಾ ಕಾಲೇಜುಗಳ ಅಂತದಲ್ಲಿ ಮಕ್ಕಳು ಪ್ರತಿನಿತ್ಯ ಯೋಗ ಮಾಡುವುದರ ಮುಖಾಂತರ ಮಾನಸಿಕ ಮತ್ತು ದೈಹಿಕವಾಗಿ ಸದೃಢಗೊಳ್ಳಬಲ್ಲರು.
ಯೋಗ ಮಾಡಿದ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದೆ ಬಂದು ಅಗಾಧವಾದ ಸಾಧನೆಯನ್ನು ಮಾಡಬಲ್ಲರು. ಯೋಗ (Hosadurga yoga day) ಮಾಡುವವರು ಯೋಗಿಗಳು,ಸಾಧಕರು ಮತ್ತು ತ್ಯಾಗಿಗಳು ಆಗಬಲ್ಲರು ಯೋಗ ಮಾಡಲು ವಯಸ್ಸಿನ ಅಂತರವಿರುವುದಿಲ್ಲ ಎಲ್ಲಾ ವಯಸ್ಸಿನವರು ಯೋಗ ಮಾಡಬಹುದು ಯೋಗದಿಂದ ದೀರ್ಘಾಯುಷಿಯಾಗಿ ಬದುಕಬಹುದು , ವ್ಯಸನಮುಕ್ತ ಸಮಾಜ ನಮ್ಮ ಗುರಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಡಿ ಎಂ ಕುಮಾರ್ ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸಿದರು.
ಕಾರ್ಯಕ್ರಮದಲ್ಲಿ ದುರ್ಗಾ ಐಟಿಐ ಪ್ರಾಚಾರ್ಯ ಪುನೀತ್,ಉಪನ್ಯಾಸಕರಾದ ಡಿ ಎಂ ಕುಮಾರ್, ವೈ ಕುಮಾರಸ್ವಾಮಿ, ರಮೇಶ್, ಕೆ ಎಸ್ ನಟರಾಜ್, ಮಹೇಶ್, ಹರೀಶ್, ರಾಜು , ಬಸವರಾಜ್ ಹಾಗೂ ಮೂಡ್ಲಪ್ಪ ಮತ್ತು ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.