Chitradurga news|nammajana.com|19-9-2024
ನಮ್ಮಜನ.ಕಾಂ, ಹೊಸದುರ್ಗ: ಪಟ್ಟಣದ ಅಂಬೇಡ್ಕರ್ ಸರ್ಕಲ್ ಸಮೀಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ 11 ನೇ ವರ್ಷದ ಬೃಹತ್ (Hosdurga Shobhayatra) ಶೋಭಾಯಾತ್ರೆ ಗುರುವಾರ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಿಜೃಂಭಣೆಯಿಂದ ಜರುಗಿತು.
ವಿಶೇಷ ಅಲಂಕೃತ ವಾಹನದಲ್ಲಿ ಸ್ವಾಮಿಯನ್ನು ಕೂರಿಸಿ, ರಾಜಬೀದಿ ಉತ್ಸವ ನಡೆಸಿದ್ದು, ಈ ಬಾರಿಯ ವಿಶೇಷವಾಗಿತ್ತು. ಶೋಭಾಯಾತ್ರೆ ಸಾಗುವ ಮುಖ್ಯ ರಸ್ತೆಗಳನ್ನು ಕೇಸರಿ ಬಣ್ಣದ (Hosdurga Shobhayatra) ಬಟ್ಟೆಗಳು ಹಾಗೂ ಬಾವುಟಗಳಿಂದ ಸಿಂಗಾರ ಗೊಳಿಸಲಾಗಿತ್ತು.
ರಾಜಕೀಯ ನಾಯಕರು, ಸಮಾಜ ಸೇವಕರು, ಗಣಪತಿ ಸೇವಾ ಸಮಿತಿಯ ಸದಸ್ಯರ ಪ್ಲೆಕ್ಸ್ ಗಳಂತೂ ರಸ್ತೆಯೂದ್ದಕ್ಕೂ ರಾರಾಜಿಸುತ್ತಿದ್ದವು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೃಹತ್ ಶೋಭಾಯಾತ್ರೆಗೆ ಬೆಲಗೂರು ಮಾರುತಿ ಗುರುಪೀಠದ ಶ್ರೀ ಬಿಂಧು ಮಾಧವ ಶರ್ಮ ಸ್ವಾಮೀಜಿ ಚಾಲನೆ ನೀಡಿದರು. ಗಣಪತಿ ಮಂಟಪದಿಂದ ಹೊರಟ ಮೆರವಣಿಗೆ ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ಮದಕರಿ ಸರ್ಕಲ್, ವೀರಭದ್ರೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಮೂಲಕ ಮಠದ ಬಾವಿ ಹತ್ತಿರ ತಲುಪಿತು. ನಂತರ ಸ್ವಾಮಿಗೆ ಪೂಜೆ ಸಲ್ಲಿಸಿ, ವಿಸರ್ಜನೆ ಮಾಡಲಾಯಿತು.
*ಬಿಗಿ ಪೊಲೀಸ್ ಬಂದೋ ಬಸ್ತ್*
ಶೋಭಾಯಾತ್ರೆಯ ವಿಶೇಷವಾಗಿ ಒಬ್ಬರು ಅಡಿಷನಲ್ ಎಸ್ಪಿ, ಒಬ್ಬರು ಡಿವೈಎಸ್ಪಿ, 4 ಸಿಪಿಐ, 12 ಪಿಎಸ್ಐ, 250 ಪೊಲೀಸ್ (Hosdurga Shobhayatra) ಸಿಬ್ಬಂದಿ, ಒಂದು ಕೆ ಎಸ್ ಆರ್ ಪಿ, 4 ವಿಶೇಷ ಪೊಲೀಸ್ ( ಪಡೆಗಳನ್ನು ನಿಯೋಜನೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.
*ಕುಣಿದು ಕುಪ್ಪಳಿಸಿದ ಯುವಕರು:*
ಮೆರವಣಿಗೆಯೂದ್ಧಕ್ಕೂ ಸಾವಿರಾರು ಯುವಕರು ಮತ್ತು ಯುವತಿಯರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಭಗವಧ್ವಜ, ಶ್ರೀರಾಮ, ಹನುಮಂತ, ಶಿವಾಜಿ ಇನ್ನಿತರ ಮಹಾನ್ ನಾಯಕರ ಬಾವುಟಗಳನ್ನು ಹಿಡಿದಿದ್ದ ಯುವಕರು ಅತ್ತಿಂದಿತ್ತ ತಿರುಗಿಸುತ್ತ ಕುಣಿದರು. ಬಹುತೇಕರು ಕೇಸರಿ ಶಾಲು, ರುಮಾಲು ಧರಿಸಿ ಗಮನ ಸೆಳೆದರು. ಒಬ್ಬರನ್ನೊಬ್ಬರು ಕೈಗಳನ್ನು ಹಿಡಿಯುತ್ತಾ ‘ಕುಚಿಕು ಕುಚಿಕು’ ಹಾಗೂ ಇನ್ನಿತರ ಡಿಜೆ ಹಾಡುಗಳಿಗೆ ಒಂದಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು.
*ಮೆರವಣಿಗೆಯುದ್ದಕ್ಕೂ ತಿಂಡಿ, ನೀರಿನ ವ್ಯವಸ್ಥೆ:*
ಮೆರವಣಿಗೆ ಸಾಗಿ ಬಂದ ದಾರಿಯುದ್ದಕ್ಕೂ ವಿವಿಧ ಸಂಘ-ಸಂಸ್ಥೆ, ರೇಷನ್ ಅಂಗಡಿಯವರು, ಹೋಟೆಲ್ ಮಾಲೀಕರು, ಬಸ್ ಏಜೆಂಟ್ ಸಂಘ ಹಲವರು ಪಲಾವ್, ಮೊಸರನ್ನ, ಚಿತ್ರಾನ್ನ (Hosdurga Shobhayatra) ಇನ್ನಿತರ ತಿಂಡಿಗಳನ್ನು ನೀಡಿದರು. ನೀರು ಮತ್ತು ಮಜ್ಜಿಗೆಯನ್ನು ದಾರಿ ಉದ್ದಕ್ಕೂ ವಿತರಿಸಲಾಯಿತು.
ಇದನ್ನೂ ಓದಿ: ಅಪಘಾತ | ಅಂಗನವಾಡಿ ಕಾರ್ಯಕರ್ತೆಯರ ಕ್ರೂಸರ್ ವಾಹನ ಪಲ್ಟಿ | Accident Challakere
ನಟರ ಭಾವಚಿತ್ರ ಪ್ರದರ್ಶನ
ಸುದೀಪ್, ದರ್ಶನ್, ಪುನೀತ್ ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಇನ್ನಿತರ ನಟರ ಭಾವಚಿತ್ರವುಳ್ಳ ಬಾವುಟಗಳು ಮೆರವಣಿಗೆಯುದ್ದಕ್ಕೂ ರಾರಾಜಿಸಿ, ಗಮನ ಸೆಳೆದವು.