Chitradurga news |nammajana.com|9-11-2024
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಚಿತ್ರದುರ್ಗ ರಸ್ತೆಯ ಕುರುಬರ ಹಾಸ್ಟಲ್‌ನಲ್ಲಿರುವ ಡಿ.ದೇವರಾಜ ಅರಸು (Hostel warden) ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ಕುಡಿದು ಬಂದು ದುರ್ವನೆ ತೋರುತ್ತಾನೆಂದು ಆರೋಪಿಸಿ ತನ್ನ ಲಗೇಜುಗಳೊಂದಿಗೆ ಹಾಸ್ಟೆಲ್‌ನಿಂದ ಹೊರಗೆ ಬಂದು ಕೊರೆಯುವ ಚಳಿಯಲ್ಲೂ ವಾರ್ಡನ್ ವಿರುದ್ದ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಆರೋಪಿಸುವಂತೆ ಪ್ರತಿನಿತ್ಯ ಇತ್ತೀಚೆಗೆ ತಾನೇ ಇಲ್ಲಿನ ಪ್ರಭಾರ ವಾರ್ಡ್ನ್ನಾಗಿ ಕರ್ತವ್ಯಕ್ಕೆ ನಿಯುಕ್ತಿಗೊಂಡ ಚಂದ್ರಶೇಖರ್‌ನಾಯ್ಕ ಪ್ರತಿನಿತ್ಯ ರಾತ್ರಿವೇಳೆಯಲ್ಲಿ ಪಾನಮತ್ತನಾಗಿ ಹಾಸ್ಟಲ್‌ಗೆ ಆಗಮಿಸಿ ವಿದ್ಯಾರ್ಥಿಗಳನ್ನು ಮನಬಂದಂತೆ ವಾಮಾಗೋಚರವಾಗಿ ಮಾತನಾಡಿದ್ದಲ್ಲದೆ, ನಾನು ಹೇಳಿದಂತೆ ಎಲ್ಲರೂ ಕೇಳಬೇಕು.

ನಾನು ಯಾರಿಗೂ ಕೇರ್‌ಮಾಡಲ್ಲಾ, ನೀವು ಏನಾದರೂ ನನ್ನ ಮೇಲೆ ದೂರು ನೀಡಿದರೆ ಸರಿಯಾಗಿರುವುದಿಲ್ಲವೆಂದು (Hostel warden) ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಾರೆಂದು ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ಧಾರೆ. ರಾತ್ರಿ ಕತ್ತಲಾದ್ದರಿಂದ ಸ್ವಲ್ಪ ಹೊತ್ತು ಹೊರಗೆ ಇದ್ದು ವಿದ್ಯಾರ್ಥಿಗಳನ್ನು ಅಲ್ಲಿನ ಕೆಲವರು ಸಮದಾನಪಡಿಸಿ ಒಳಗೆ ಕಳಿಸಿದ್ಧಾರೆ.
ವಿದ್ಯಾರ್ಥಿಗಳು ಪತ್ರಿಕೆಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಹಾಸ್ಟಲ್‌ನಲ್ಲಿ ನಿಯಮದ ಪ್ರಕಾರ ನೀಡಬೇಕಾದ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಯಾವುದೇ ವಿದ್ಯಾರ್ಥಿ ಏನೇ ಕೇಳಿದರೂ ಅವನನ್ನು ವಾರ್ಡನ್ ಚಂದ್ರಶೇಖರನಾಯ್ಕ ಮನಬಂದಂತೆ ಬೈಯುತ್ತಾನೆ.
ನಾನು ಕೊಡುವುದನ್ನು ಮಾತ್ರ ತೆಗೆದುಕೊಳ್ಳಬೇಕು, ಬೇರೆ ಯಾವುದೇ ರೀತಿಯ ವರ್ತನೆಯನ್ನು ನಾನು ಸಹಿಸುವುದಿಲ್ಲ. (Hostel warden) ಮುಲಾಜಿಲ್ಲದೆ ನಿಮ್ಮನ್ನು ಹಾಸ್ಟಲ್‌ನಿಂದ ಹೊರಹಾಕುತ್ತೇನೆಂದು ಧಮ್ಕಿಹಾಕುತ್ತಾನೆಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Dina Bhavishya: ಇಂದಿನ ದಿನ ಭವಿಷ್ಯ | ಪರೀಕ್ಷೆಯಲ್ಲಿ ಯಶಸ್ಸು, ವ್ಯಾಪರ ಸಮಸ್ಯೆಗಳು ದೂರ
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ನಮ್ಮಜನ.ಕಾಂ, ಜೊತೆ ಮಾತನಾಡಿ ನಮ್ಮ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚಿಸಿದ್ದೇನೆ. ಪರಿಶೀಲನೆ ಮಾಡಿ ವರದಿ ಸಹ ಸಲ್ಲಿಸಲು ತಿಳಿಸಿದ್ದು ಶೀಘ್ರವಾಗಿ ಪೂರ್ಣ ಮಾಹಿತಿ ಪಡೆದು (Hostel warden) ಮುಂದೆ ಯಾವ ರೀತಿ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.
ನನ್ನ ಕ್ಷೇತ್ರದಲ್ಲಿ ಇಂತಹ ವಿಚಾರಗಳು ಮರು ಕಳಿಸಬಾರದು ಮತ್ತು ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಮಕ್ಕಳಿಗೆ ಶಿಕ್ಷಣ ನಮಗೆ ಮುಖ್ಯ ಎಂದು ತಿಳಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252