
Chitradurga news |nammajana.com|29-5-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ ದುರ್ಗದ ಸಿರಿ (Hotel Durgada siri) ಹೋಟೆಲ್ ನಲ್ಲಿ ಮೇ 27 ರಂದು ಇಸ್ಪೀಟ್ ಆಟವಾಡುತ್ತಿದ್ದವರ ಮೇಲೆ ನಗರ ಪೋಲಿಸ್ ಠಾಣೆ ಪೋಲಿಸರು ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: TODAY ADIKE RATE: ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ, ಎಷ್ಟಿದೆ ಇಂದಿನ ಅಡಿಕೆ ಬೆಲೆ

ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸುಮಾರು 32 ಜನರನ್ನು ವಶಕ್ಕೆ ಪಡೆದಿದ್ದಾರೆ. ಇವರು ದುರ್ಗದ ಸಿರಿ ಹೋಟೆಲ್ (Hotel Durgada siri) ನಲ್ಲಿ ಟೋಕನ್ ಕಟ್ಟಿ ಇಸ್ಪೀಟ್ ಆಟವಾಡುತ್ತಿದ್ದರು ಎಂದು ತಿಳಿದಿದ್ದು 22 ಸಾವಿರ ಮೌಲ್ಯದ ಟೋಕನ್ ವಶಕ್ಕೆ ಪಡೆದಿದ್ದು 32 ಜನಕ್ಕೆ ಸ್ಟೇಷನ್ ಬೇಲ್ ಮೇಲೆ ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದಾರೆ. ಈ ಪ್ರಕರಣ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.