Chitradurga news|nammajana.com|21-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಳ್ಳಕೆರೆಯ ಸಹಕಾರಿ ಸೌಹಾರ್ಧ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ನಗರದ ಹೊಯ್ಸಳಕ್ರೆಡಿಟ್ ಸೌಹಾರ್ದ ,(Hoysala Credit Cooperative Bank) ಸಹಕಾರಿ ಸಂಘ ನಿರೀಕ್ಷೆಗೂ ಮೀರಿ ಉತ್ತಮ ಲಾಭವನ್ನು ಗಳಿಸಿದ್ದಲ್ಲದೆ, ಶೇರುದಾರರಿಗೂ ಸಮೃದ್ದ ಡಿವೈಡೆಂಡ್ ನೀಡಿ ತನ್ನ ವಹಿವಾಟನ್ನು ಶತಕೋಟಿಯತ್ತ ದಾಟಲು ಸಹಕರಿಸಿದ ಬ್ಯಾಂಕ್‌ನ ಎಲ್ಲಾ ಆಡಳಿತಮಂಡಳಿ ನಿರ್ದೇಶಕರು, ಸಿಬ್ಬಂದಿ ಹಾಗೂ ಶೇರುದಾರರನ್ನು ಅಭಿನಂದಿಸುವುದಾಗಿ ಹೊಯ್ಸಳ ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ, ಸಚಿವ ಡಿ.ಸುಧಾಕರ್ ತಿಳಿಸಿದರು.
ಅವರು, ಶನಿವಾರ ಬ್ಯಾಂಕ್‌ನ ಆವರಣದಲ್ಲಿ ಪ್ರಸ್ತುತ ವರ್ಷದ ಸರ್ವಸದಸ್ಯರ ಮಹಾಸಭೆಯ ನಂತರ ಪತ್ರಿಕೆಯೊಂದಿಗೆ ಮಾತನಾಡಿದರು.

ಶತಕೋಟಿ ವ್ತವಹಾರಕ್ಕೆ ತಲುಪಿದ ಬ್ಯಾಂಕ್, ನೌಕರರಿಗೆ ಅಭಿನಂದನೆ
ಕಳೆದ ೨೦೦೩ರಲ್ಲಿ ಆರಂಭವಾದ ನಮ್ಮ ಬ್ಯಾಂಕ್ ತನ್ನ ೨೧ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಕೇವಲ ಕೆಲವೇ (Hoysala Credit Cooperative Bank) ಲಕ್ಷಗಳಲ್ಲಿ ತನ್ನ ವಹಿವಾಟು ಆರಂಭಿಸಿದ ಬ್ಯಾಂಕ್ ಇಂದು ೧೦೦ ಕೋಟಿ ವ್ಯವಹಾರವನ್ನು ದಾಖಲಿಸಿದೆ. ಮುಂದಿನ ವರ್ಷ ೧೫೦ ಕೋಟಿ ವ್ಯವಹಾರ ಮಾಡುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ. ಚಿತ್ರದುರ್ಗ ಜಿಲ್ಲೆಯಷ್ಟೇಯಲ್ಲ, ರಾಜ್ಯದ ಸೌಹಾರ್ಧ ಸಹಕಾರಿ ಸಂಘದ ವ್ಯವಹಾರಗಳನ್ನು ಅವಲೋಕಿಸಿದಾಗ ಹೊಯ್ಸಳ ಕ್ರೆಡಿಟ್ ಸೌಹಾರ್ಧಬ್ಯಾಂಕ್‌ನ ವಹಿವಾಟು ಗುಣಾತ್ಮಕವಾಗಿದೆ ಎಂದರು.
ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಎಸ್.ಕೆ.ಮರಳಿ ಮಾಹಿತಿ ನೀಡಿ, ಪ್ರಸ್ತುತ ೨೦೨೩-೨೪ನೇ ಅವಧಿಯಲ್ಲಿ ನಮ್ಮ ಬ್ಯಾಂಕ್ ೫.೫೪ ಕೋಟಿ ಲಾಭವನ್ನು ಗಳಿಸಿದೆ. ಕಳೆದ ಸಾಲಿನಲ್ಲಿ ೪.೫೦ ಕೋಟಿ ಲಾಭವನ್ನು ಗಳಿಸಿತ್ತು. ಅಧ್ಯಕ್ಷರ ಸೂಚನೆಯಂತೆ (Hoysala Credit Cooperative Bank) ೨೦೨೪-೨೫ನೇ ಸಾಲಿನಲ್ಲಿ ೧೫೦ ಕೋಟಿ ವ್ಯವಹಾರವನ್ನು ನಮ್ಮ ಬ್ಯಾಂಕ್ ಮಾಡಲಿದೆ. ಸಮಾಜದ ಎಲ್ಲಾ ವರ್ಗಗಳಿಗೂ ಸಮಾನರೀತಿಯಲ್ಲಿ ಸೌಲಭ್ಯಗಳನ್ನು ವಿತರಿಸುತ್ತಾ ಬಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಆರ್‌ಟಿಜಿಎಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ, ಸೇಫ್‌ಡಿಪಾಜಿಟ್ ಲಾಕರ್ ಸೌಲಭ್ಯವಿದೆ, ಕೃಷಿ ವಲಯವೂ ಸೇರಿದಂತೆ ವಿವಿಧ ವ್ಯಾಪಾರಸ್ಥರಿಗೆ ಸಾಲವನ್ನು ನೀಡುವುದಲ್ಲದೆ, ಕರಾರೂಒಕ್ಕಾಗಿ ಸಾಲವಸೂಲಿ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: wall collapsed: ಗೋಡೆ ಕುಸಿದು ವ್ಯಕ್ತಿ ಸಾವು
ಉಪಾಧ್ಯಕ್ಷ ಕೆ.ಅಶ್ವತ್ಥನಾರಾಯಣ, ನಿರ್ದೇಶಕರಾದ ಎಸ್.ವಿ.ಪ್ರಹ್ಲಾದ್, ಎಸ್.ಎಂ.ರವಿ, ಸಿ.ಸಿದ್ದಾರ್ಥ, (Hoysala Credit Cooperative Bank) ಜಿ.ಪದ್ಮಗೋವಿಂದರಾಜು, ಲೆಕ್ಕಪರಿಶೋಧಕ ಕೆ.ಸುಹಾಸ್, ವಾಣಿಜ್ಯೋದ್ಯಮಿ ಎಸ್.ರುದ್ರಮುನಿಯಪ್ಪ, ಗಂಗೋತ್ರಿಬ್ಯಾಂಕ್ ಅಧ್ಯಕ್ಷ ಎನ್.ನಾಗಭೂಷಣ್, ಚಿಂದನೂರು ಬ್ಯಾಂಕ್ ಅಧ್ಯಕ್ಷ ಸಿ.ಎಸ್.ಪ್ರಸಾದ್, ಡಿ.ಎಸ್.ಗೋವಿಂದರಾಜ್, ಸಿಬ್ಬಂದಿಯಾದ ಮಹಮ್ಮದ್‌ಮಜಾರ್‌ಆಲಿ, ಎಂ.ಲಕ್ಷ್ಮಿದೇವಿ, ಡಿ.ಎ.ಸವಿತಾ, ಪಿ.ಸೋಮಶೇಖರ್, ಕೆ.ಬಿಂದು, ಪಿಗ್ನಿ ಸಂಗ್ರಹಕಾರ ಜಿ.ಆಂಜನೇಯಲು, ಚೇತನ್‌ಕುಮಾರ್, ನಾಗಭೂಷಣ್‌ರಾವ್, ಕೊಟ್ರೇಶ್ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252