Chitradurga news|nammajana.com|12-7-2024
ನಮ್ಮಜನ.ಕಾಂ, ಹಿರಿಯೂರು: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯು ಮಹಿಳೆಯ ಪತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ (Husband killed along with lover) ಘಟನೆ ತಾಲೂಕಿನ ಹುಲಗಲಕುಂಟೆ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ.
ಮೃತ ವ್ಯಕ್ತಿಯನ್ನು ರವಿ (35) ಎಂದು ಗುರುತಿಸಲಾಗಿದೆ. ಮೃತ ರವಿಯು 16 ವರ್ಷಗಳ ಹಿಂದೆ ರೇಖಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ದಂಪತಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ (Husband killed along with lover) ಮಾಡಿಕೊಂಡಿದ್ದರು. ರವಿಯ ಸ್ನೇಹಿತ ಹುಲಗಲಕುಂಟೆ ಗ್ರಾಮದ ಸುನೀಲ್, ರವಿಯ ಮನೆಗೆ ಆಗಾಗ ಹೋಗಿ ರವಿ ಪತ್ನಿಯ ಸ್ನೇಹ ಬೆಳೆಸಿಕೊಂಡು ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಇದು ಮೃತ ರವಿಗೆ ತಿಳಿದು ಸುನೀಲ್ ನೊಂದಿಗೆ ಜಗಳ ಮಾಡಿಕೊಂಡಿದ್ದನು.

ಪ್ರಿಯಕರನ ಜೊತೆ ಸಂಬಂಧ ಮುಂದುವರಿಸಿದ ರೇಖಾ, ಪತಿಯು ನನಗೆ ತೊಂದರೆ ನೀಡುತ್ತಾನೆಂದು ಪೊಲೀಸರಿಗೆ ಈಗಾಗಲೇ ಮೂರು ಬಾರಿ ದೂರುನೀಡಿದ್ದಳು. ಬಳಿಕ (Husband killed along with lover) ಪೊಲೀಸರು ರವಿಯನ್ನು ಕರೆಸಿಕೊಂಡು ಬುದ್ದಿ ಹೇಳಿ ಕಳುಹಿಸಿದ್ದರು. ಇತ್ತ ಮೃತನ ಪತ್ನಿ ರೇಖಾ, ಪ್ರಿಯಕರ ಸುನೀಲ್ ಹಾಗೂ ಮೂವರು ರವಿಗೆ ಈ ಹಿಂದೆಯೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ.
ಬುಧವಾರ ಜಮೀನಿನ ವಿಚಾರ ಮಾತನಾಡಲು ರವಿ ಊರಿಗೆ ಬಂದಿದ್ದು ರಾತ್ರಿ 9 ಗಂಟೆಗೆ ಊಟ ಮುಗಿಸಿ ಹೊಸ ಮನೆಯ ಮೇಲೆ ಮಲಗುತ್ತೇನೆ ಎಂದು ಹೋಗಿದ್ದಾನೆ. ರಾತ್ರಿ (Husband killed along with lover) ಹತ್ತರವರೆಗೂ ಫೋನಿನಲ್ಲಿ ಮಾತಾಡುತ್ತಿದ್ದ ಎನ್ನಲಾಗಿದೆ. ಆನಂತರ ಆತನ ಪತ್ನಿ ರೇಖಾ ಹಾಗೂ ಪರುವ ಸುನೀಲ್ ಗೆ ಹೇಳಿ ಕೊಲೆ ಮಾಡಿಸಿದ್ದಾರೆ ಎಂದು ಮೃತನ ತಾಯಿ ಪಾರ್ವತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವೃದ್ದೆಯ 40 ಗ್ರಾಂ ಚಿನ್ನದ ಸರ ಕದ್ದುಕೊಂಡು ಪರಾರಿ | Gold chain
ಕೊಲೆ ಆರೋಪಿಗಳಾದ ಸುನೀಲ್ ಮತ್ತು ರೇಖಾರನ್ನು ಸಿಪಿಐ ಕಾಳಿಕೃಷ್ಣ ನೇತೃತ್ವದಲ್ಲಿ ಪಿಎಸ್‌ಐ ಮಹೇಶ್ (Husband killed along with lover) ಗೌಡತಂಡಬಂಧಿಸಿದ್ದು ಮತ್ತೊಬ್ಬ ಆರೋಪಿಗೆ ಬಲೆ ಬೀಸಲಾಗಿದೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252