Chitradurga News | Nammajana.com | 08-08-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ(Municipal Council) ನಗರಸಭೆಗೆ ವಿವಿಧ ಯೋಜನೆಗಳಡಿ ಖರೀದಿಸಿರುವ ವಾಹನಗಳ ಉದ್ಘಾಟನೆ ಹಾಗೂ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಇದೇ ಆಗಸ್ಟ್ 09ರಂದು ಬೆಳಿಗ್ಗೆ 11.30ಕ್ಕೆ ನಗರಸಭೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: MLA ಎನ್.ವೈ.ಗೋಪಾಲಕೃಷ್ಣ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿಲ್ಲ : ಕೆ.ಜೆ.ಜಯಲಕ್ಷ್ಮಿ ಸ್ಪಷ್ಟನೆ
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆಯಲ್ಲಿ ಹಾಗೂ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಅವರ ಉಪಸ್ಥಿತಿಯಲ್ಲಿ ವಾಹನಗಳ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ.
2023-24ನೇ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನ ರೂ. 100 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ದಿನನಿತ್ಯದ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಪ್ರತಿ ಮನೆಯ ಕಸ ಸಂಗ್ರಹಣೆಗಾಗಿ ಮಿನಿ ಟಿಪ್ಪರ್‍ಗಳು, ರೂ.29.16 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗ ನಗರಸಭೆ ಕಚೇರಿ ಹಿಂಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ವಾಹನಗಳನ್ನು ನಿಲುಗಡೆಗೆ ಶೆಡ್ ನಿರ್ಮಾಣ ಕಾಮಗಾರಿ, 2021-22ನೇ ಅನ್‍ಡಿಸ್ಟ್ರಿಬ್ಯೂಟ್ ಮಿಲಿಯನ್ ಪ್ಲಸ್ ಸಿಟಿ ಅನುದಾನ ರೂ.24 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗ ನಗರಸಭೆಗೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ವಹಣೆಗಾಗಿ ಮಿನಿ ಜಟ್ಟಿಂಗ್ ಯಂತ್ರ,
2022-23ನೇ 15ನೇ ಹಣಕಾಸು ಮೂಲ(Municipal Council) ಅನುದಾಬ ರೂ.18 ಲಕ್ಷ ವೆಚ್ಚದ ಚಿತ್ರದುರ್ಗ ನಗರಸಭೆ ವ್ಯಾಪ್ತಿಗೆ ಜೀಪ್ ಮೌಂಟೆಂಡ್ ಸಿಲ್ಟ್ ತೆಗೆಯುವ ವಾಹನ, ಎಸ್‍ಎಫ್‍ಸಿ ಮತ್ತು ನಗರಸಭೆ ನಿಧಿ ರೂ.24 ಲಕ್ಷ ವೆಚ್ಚದಲ್ಲಿ 2022-23, 2023-24 ಮತ್ತು 2024-25ನೇ ಸಾಲಿನ ಎಸ್‍ಎಫ್‍ಸಿ ಮತ್ತು ನಗರಸಭೆ ನಿಧಿಯಡಿಯಲ್ಲಿ ಶೇ.5ರ ಯೋಜನೆಯಡಿಯಲ್ಲಿ ವಿಕಲಚೇತನರಿಗೆ 15 ಮೂರು ಚಕ್ರದ ವಾಹನ, ಸಿಎಸ್‍ಆರ್ ಅನುದಾನದಲ್ಲಿ ಬಿಇಎಲ್ ಸಂಸ್ಥೆಯಿಂದ ಸಿ.ಎಸ್‍ಆರ್ ಅನುದಾನದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಗೆ ವಿದ್ಯುತ್ ಚಾಲಿತ 18 ಮೂರು ಚಕ್ರದ ಆಟೋ ವಾಹನಗಳನ್ನು ಹಾಗೂ 2 ಫಾಗಿಂಗ್ ವಾಹನಗಳ ಉದ್ಘಾಟನೆ ನಡೆಯಲಿದೆ.
ಇದನ್ನೂ ಓದಿ: ಸರ್ಕಾರದಿಂದ ಭರ್ಜರಿ ಲೋನ್, ಯಾವ್ಯಾವ ನಿಗಮಗಳಿಂದ 5 ಲಕ್ಷ ಸಾಲ ಸೌಲಭ್ಯ ಮತ್ತು ಸಬ್ಸಿಡಿಗೆ ಅರ್ಜಿ | ಇಲ್ಲಿದೆ ಮಾಹಿತಿ
ಚಿತ್ರದುರ್ಗ ನಗರದ ಲಿಡ್ಕರ್ ಕಟ್ಟಡದ ಮುಂಭಾಗದಲ್ಲಿ ಮಧ್ಯಾಹ್ನ 12.40ಕ್ಕೆ 2025-26ನೇ ಸಾಲಿನ 15ನೇ ಹಣಕಾಸು ಅನುದಾನ ರೂ.25 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗ ನಗರದ ವಾರ್ಡ್ ನಂ.27ರಲ್ಲಿ ಲಿಡ್ಕರ್ ಪಕ್ಕದ ರಸ್ತೆ ಮತ್ತು ಏರೋಪ್ಲೇನ್ ಬಿಲ್ಡಿಂಗ್ ಹತ್ತಿರ ಸಿ.ಸಿ.ರಸ್ತೆ ನಿರ್ಮಾಣ ಹಾಗೂ ಯುಜಿಡಿ ಕಾಮಗಾರಿಗೆ ಚಾಲನೆ ನೀಡಲಾಗುವುದು.
ಚಿತ್ರದುರ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 1ಕ್ಕೆ ಉದ್ಯಮ ನಿಧಿ ಅನುದಾನ ರೂ.43 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನೆಲ ಹಾಗೂ ಮೊದಲ ಅಂತಸ್ತು ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿ ಚಾಲನೆ, ಚಿತ್ರದುರ್ಗ ನಗರದ ಮಾರುತಿ ನಗರದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ರೂ.30 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ.19ರ ಮೆದೇಹಳ್ಳಿ ರಸ್ತೆಯ ರೈಲ್ವೆ ಟ್ರಾಕ್ ಬಲಭಾಗ ಮಾರುತಿ ನಗರದಲ್ಲಿ ಸಿ.ಸಿ.ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು.
ಇದನ್ನೂ ಓದಿ: ಆಗಸ್ಟ್ 16 ರ ಒಳಗೆ ಒಳ ಮೀಸಲಾತಿ ಜಾರಿಗೆ ಆಗ್ರಹ: ಮೋಹನ್
ತುರುವನೂರು ರಸ್ತೆಯ ವಿ.ಆರ್‍ಎಸ್(Municipal Council) ಲೇಔಟ್‍ನಲ್ಲಿ ಮಧ್ಯಾಹ್ನ 1.40ಕ್ಕೆ ನಗರಸಭೆ ನಿಧಿ ಅನುದಾನ ರೂ.42.20 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗ ನಗರದ ತುರುವನೂರು ರಸ್ತೆಯ ವಿ.ಆರ್.ಎಸ್.ಲೇಔಟ್‍ನಲ್ಲಿ ಚರಂಡಿ ಮತ್ತು ಡೆಕ್‍ಸ್ಲಾಬ್ ನಿರ್ಮಾಣ ಕಾಮಗಾರಿ, ಮಧ್ಯಾಹ್ನ 2ಕ್ಕೆ 2021-22ನೇ ಸಾಲಿನ 15ನೇ ಹಣಕಾಸು ಅನುದಾನ ರೂ.32.58 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ.29ರ ಬ್ಯಾಂಕ್ ಕಾಲೋನಿ ರಾಮಚಂದ್ರಪ್ಪ ಮನೆಯಿಂದ ತಿಪ್ಪಾರೆಡ್ಡಿಯವರ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.
