
Chitradurga news | nammajana.com |5-9-2024
ನಮ್ಮಜನ.ಕಾಂ, ಚಳ್ಳಕೆರೆ: ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಯಾದ ಛಾಪನ್ನು ಮೂಡಿಸಿದ್ದು, ಇವರ ಪುತ್ರಿ ಕೆಸಿವಿ ಸರಸ್ವತಿ (Indian Book of Records 2024) (14) ತನ್ನ ತಂದೆಯಂತೆ ತಾನು ಸಹ ದಾಖಲೆ ಸ್ಥಾಪಿಸುವಲ್ಲಿ ಯಶಸ್ವಿಯ ಹೆಜ್ಜೆ ಇಟ್ಟಿದ್ದು, ಇವರ ಸಾಧನೆಗೆ ಎಲ್ಲೆಡೆ ಜನರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.
ಶಾಸಕ ವೀರೇಂದ್ರ (ಪಪ್ಪಿ)ಯವರ ಪುತ್ರಿ ಕೆಸಿವಿ ಸರಸ್ವತಿ ಅವರು ಚಿತ್ರದುರ್ಗದ ಡಾನ್‌ಬಾಸ್ಕೊ ಶಾಲೆಯಲ್ಲಿ ವಿದ್ಯಾಭ್ಯಾಸ (Indian Book of Records 2024) ಮಾಡುತ್ತಿದ್ದು, ಇತ್ತೀಚಿಗಷ್ಟೇ 2 ಗಂಟೆ 36 ಸೆಕೆಂಡ್‌ಗಳ ಕಾಲ ವಾಲ್‌ಸ್ಟಿಕ್ (ಗೋಡೆಗೆ ಒರಗಿ ಕುರ್ಚಿಯ ಮೇಲೆ ಕುಳಿತ ಭಂಗಿ) ಮಾಡುವ ಮೂಲಕ ಇಂಡಿಯಾನ್ ಬುಕ್ ಆಫ್ ರೇಕಾರ್ಡ್ -2024ನಲ್ಲಿ ಸ್ಥಾನ ಪಡೆದಿದ್ದಾಳೆ.

ಇದನ್ನೂ ಓದಿ: ಸಮೃದ್ಧಿ ಜೀವನ ಸೊಸೈಟಿಯಿಂದ ಹಣ ಡಬಲ್ ಹೆಸರಲ್ಲಿ ವಂಚನೆ | Samriddhi Jeevan Society
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಕೆಸಿವಿ ಸರಸ್ವತಿ, ಕೇರಳದ ಸಮದ್‌ರವರ ಮಾರ್ಗದರ್ಶನದಲ್ಲಿ ನಾನು ಈ (Indian Book of Records 2024) ಸಾಧನೆ ಮಾಡಲು ಸಾಧ್ಯ ವಾಗಿದೆ ಎಂದು ತಿಳಿಸಿದ ಅವರು, ತಂದೆ, ತಾಯಿ ಹಾಗೂ ಅಜ್ಜಿ ನನ್ನ ಸಾಧನೆಗೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದರು. 2ಗಂಟೆ 36 ಸೆಕೆಂಡ್ ನಾನು ವಾಲ್‌ಸ್ಟಿಕ್ ಕುಳಿತಿದ್ದು ಇದು ದಾಖಲೆಯಾಗಿದೆ. ನನಗೆ ಇದರಿಂದ ತುಂಬಾ ಸಂತೋಷ ಎನ್ನಿಸುತ್ತಿದೆ ಎಂದು ಹೇಳಿದರು.
