Chitradurga news |nammajana.com|2-6-2024
ನಮ್ಮಜನ.ಕಾಂ, ಚಿತ್ರದುರ್ಗ: ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ 2024ನೇ ಸಾಲಿಗೆ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಪ್ರವೇಶಗಳನ್ನು ಆನ್‍ಲೈನ್ ಮುಖಾಂತರ ನಡೆಸಲಾಗುತ್ತಿದ್ದು, ಎಸ್‍ಎಸ್‍ಎಲ್‍ಸಿ (Industry) ಉತ್ತೀರ್ಣರಾದ ಮತ್ತು ಅರ್ಹ ಆಸಕ್ತ ಅಭ್ಯರ್ಥಿಗಳು www.cite.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಜೂನ್ 09 ರವರೆಗೆ ವಿಸ್ತರಿಸಲಾಗಿದೆ.
ಚಿತ್ರದುರ್ಗದ ಸರ್ಕಾರಿ ಕೈಗಾರಿಕಾ (Industry) ತರಬೇತಿ ಸಂಸ್ಥೆ(ಮಹಿಳಾ) ಯಲ್ಲಿ ಒಂದು ವರ್ಷ ಅವಧಿಯ ಅಔPಂ, ಎರಡು ವರ್ಷದ ಅವಧಿಯ ELECTRONICS, ELECTRICIAN, FITTR, TPES, MECHANIC ELECTRIC VEHICLE, ADVANCED CNC MACHINING ವೃತ್ತಿಗಳು ಲಭ್ಯವಿವೆ. ಈ ಸಂಸ್ಥೆಯು ಮಹಿಳಾ ಸಂಸ್ಥೆ ಆಗಿರುವುದರಿಂದ ಎಲ್ಲಾ ಸೀಟುಗಳು ಮಹಿಳೆಯರಿಗೆ ಹಂಚಿಕೆಯಾಗುತ್ತಿದ್ದು, ಹಂಚಿಕೆಯಾಗದೆ ಉಳಿದ ಸೀಟುಗಳನ್ನು ಪುರುಷರಿಗೆ ಹಂಚಿಕೆ ಮಾಡಲಾಗುತ್ತದೆ. ಆದುದರಿಂದ ಮಹಿಳೆಯರು ಈ ಅವಕಾಶವನ್ನು ಉಪಯೋಗಿಸಿಕೊಳ್ಳು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಸರ್ಕಾರಿ ಕೈಗಾರಿಕಾ (Industry) ತರಬೇತಿ ಸಂಸ್ಥೆ (ಮಹಿಳಾ) ಪ್ರಾಚಾರ್ಯರು ಹಾಗೂ ದೂರವಾಣಿ ಸಂಖ್ಯೆ 08194-234515 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.