Chitradurga News | Nammajana.com | 01-08-2025
ನಮ್ಮಜನ.ಕಾಂ,ಚಿತ್ರದುರ್ಗ: ಸೋಶಿಯಲ್ ಮೀಡಿಯಾ(H.ANJANEYA), ಫೇಸ್‌ಬುಕ್, ಕೆಲವು ದೃಶ್ಯ ಮಾಧ್ಯಮಗಳಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಅರವರನ್ನು ತೇಜೋವಧೆ ಮಾಡು ತ್ತಿರುವ ಭಾಸ್ಕರ್‌ಪ್ರಸಾದ್ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಮಾದಿಗ ಜಾಗೃತಿ ವೇದಿಕೆಯಿಂದ ಪೊಲೀಸ್ ಉಪಾಧೀಕ್ಷಕರಿಗೆ ಗುರುವಾರ ದೂರು ನೀಡಲಾಯಿತು.
ಇದನ್ನೂ ಓದಿ: ವೃತ್ತಿಪರ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಮಾದಿಗ ಜಾಗೃತಿ ವೇದಿಕೆ ಕಾರ್ಯಕರ್ತರು ಒನಕೆ ಒಬವ್ವ ವೃತ್ತದಲ್ಲಿ ಭಾಸ್ತರ್‌ಪ್ರಸಾದ್‌ರವರ ಫೋಟೋ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜಾತ್ಯತೀತ ನಾಯಕರಾಗಿರುವ ಎಚ್. ಆಂಜನೇಯ ಅವರು ಮಾದಿಗ ಸಮುದಾಯವಷ್ಟೆ ಅಲ್ಲ, ಎಲ್ಲಾ ಸಮಾಜದವರ ಜೊತೆ ಉತ್ತಮ ಒಡನಾಟವಿಟ್ಟುಕೊಂಡಿರುವುದನ್ನು ಸಹಿಸದ
ಭಾಸ್ಕರ್‌ಪ್ರಸಾದ್ ತಮ್ಮ(H.ANJANEYA) ಬೇಳೆಬೇಯಿಸಿಕೊಳ್ಳಲು ಎಚ್.ಆಂಜನೇಯರವರ ಹೆಸರನ್ನು ದುರಪಯ ಗಪಡಿಸಿಕೊಳ್ಳುತ್ತಿರುವುದು ಮಾದಿಗರಿಗೆ ಅತೀವ ನೋವುಂಟಾಗಿದೆ. ಒಳ ಮೀಸಲಾತಿ ಹೋರಾಟದಲ್ಲಿ ಇತ್ತೀಚೆಗೆಕಾಣಿಸಿಕೊಳ್ಳುತ್ತಿರುವ ಭಾರ್ಸ್ಕಪ್ರಸಾದ್ ಕಳೆದ ಮೂರು ನಾಲ್ಕು ದಶಕಗಳಿಂದ ಎಲ್ಲಿ ಹೋಗಿದ್ದರು. ಅವರು ಕೂಡಲೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಿಯಾದರೂ ಕಂಡರೆ ಫೇರಾವ್ ಹಾಕಲಾಗುವುದೆಂದು ಮಾದಿಗ ಜಾಗೃತಿ ವೇದಿಕೆ ಎಚ್ಚರಿಸಿದೆ.
ಇದನ್ನೂ ಓದಿ: ನೂತನ ಜಿಲ್ಲಾಧಿಕಾರಿ ಕಚೇರಿ ಮೆಡಿಕಲ್ ಕಾಲೇಜಿಗೆ ಹಸ್ತಾಂತರಕ್ಕೆ ಸಿಎಂಗೆ ಮನವಿ
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ. ಕುಮಾರಸ್ವಾಮಿ, ಅಣ್ಣಪ್ಪಮದಕರಿಪುರ, ಕಿರಣ್ ಕುಮಾರ್ ಕುರುಬರಹಳ್ಳಿ, ಎಚ್.ಮಂಜುನಾಥ್, ಗ್ರಾಪಂ ಸದಸ್ಯ ಶೇಖರಪ್ಪ, ರಾಮಣ್ಣ, ರಘು ಇಂಗಳದಾಳ್, ಅಂಜಿನಮೂರ್ತಿ ಮುಂತಾ ದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252