Chitradurga news | nammajana.com | 17-5-2024
ನಮ್ಮಜನ.ಕಾಂ, ಚಿತ್ರದುರ್ಗ: ಲೇವಾದೇವಿ ಗಿರವಿ (moneylender)ಹಾಗೂ ಹಣಕಾಸು ಸಂಸ್ಥೆಗಳು ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961ರ ಪ್ರಕರಣ 28ರಡಿ ಸರ್ಕಾರವು ಬಡ್ಡಿದರ ನಿಗಧಿಪಡಿಸಿದೆ.

ಈ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಲೈಸನ್ಸ್ ಪಡೆದ ಲೇವಾದೇವಿ (moneylender) ಹಾಗೂ ಗಿರವಿದಾರರ ಅಂಗಡಿಯಲ್ಲಿ, ಸಾರ್ವಜನಿಕರ ಹಿತದೃಷ್ಟಿಗೆ ಸುಲಭವಾಗಿ ಕಾಣುವಂತೆ ಬಡ್ಡಿದರ ವಿಧಿಸುವ ನಾಮಫಲಕಗಳನ್ನು (Nameplate)ನಗದು ಕೌಂಟರ್ ಹತ್ತಿರ ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ಪ್ರದರ್ಶಿಸಬೇಕು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಮಳೆ ವಿವರ | ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ
ಲೇವಾದೇವಿ ಹಾಗೂ ಗಿರವಿದಾರರು ಭದ್ರತೆ ಇರುವ ಸಾಲಗಳಿಗೆ ಗರಿಷ್ಟ ವಾರ್ಷಿಕ ಶೇ.14 ಮತ್ತು ಭದ್ರತೆ ಇಲ್ಲದ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ.16 ರಷ್ಟು ಮಾತ್ರ ಬಡ್ಡಿ ವಿಧಿಸಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
