Chitradurga news|Nammajana.com|22-8-2025
ನಮ್ಮಜನ.ಕಾಂ, ಚಿತ್ರದುರ್ಗ: ಒಳ ಮೀಸಲಾತಿಗೆ ಅನೇಕ ಜನರು ತ್ಯಾಗ, ಬಲಿದಾನ ಮತ್ತು ಒಳ ಮೀಸಲಾತಿಗೆ ತನ್ನ (Internal reservation) ಬದುಕನ್ನು ಮೀಸಲಿಟ್ಟಿದ್ದಾರೆ ಎಂದು ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಒಳಮೀಸಲಾತಿ ವಿಚಾರದಲ್ಲಿ ಎಸ್ ಎಂ ಕೃಷ್ಣ, ಧರ್ಮಸಿಂಗ್ ಮತ್ತು ಯಡಿಯೂರಪ್ಪ ಅವರು ಸಮಿತಿ ರಚಿಸಲು ಹಣವನ್ನು ಬಿಡುಗಡೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾದಿಗರಿಗೆ ನ್ಯಾಯ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಬಸವರಾಜ್ (Internal reservation) ಬೊಮ್ಮಾಯಿ ಅವರು ಮಾದುಸ್ವಾಮಿ ವರದಿ ಪಡೆದುಕೊಂಡು ಎಲ್ಲಾ ಜಾತಿಗಳಿಗೆ ಮೀಸಲಾತಿ ಜಾರಿಗೊಳಿಸಿದರು. ಶ್ರೀಮಠಕ್ಕೆ ಬಂದಾಗ ಮೋಹನ್ ಭಗವತ್ ಅವರಿಗೆ ಒಳಮೀಸಲಾತಿಯ ಬಗ್ಗೆ ಎಳೆ ಎಳೆಯಾಗಿ ಮನವರಿಕೆ ಮಾಡಿಕೊಟ್ಟೆವು ಎಂದರು.
ಸದಾಶಿವ ಆಯೋಗದ ವರದಿ ದತ್ತಾಂಶಗಳಿಗೆ ತನ್ನ ದತ್ತಾಂಶಗಳನ್ನು ಸೇರಿಸಿದ್ದ ಮಾಧುಸ್ವಾಮಿ ಸಮಿತಿಯು, ಪರಿಶಿಷ್ಟ ಜಾತಿಗಳ ಮಿಸಲಾತಿಯನ್ನು ಶೇ17 ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 7ಕ್ಕೆ ಏರಿಸಬೇಕು ಎಂದು ಶಿಫಾರಸು ಮಾಡಿತ್ತು. ‘ಮಾದಿಗ ಮತ್ತು ಅದರ ಉಪಜಾತಿಗಳಿಗೆ ಶೇ 6ರಷ್ಟು ಮೀಸಲಾತಿ ಒದಗಿಸಬಹುದು ಎಂದು ಹೇಳಿತ್ತು ಅದರ ಜೊತೆ ಸಿಎಂ ಸಹ ಒಳಮೀಸಲಾತಿ ಲೆಕ್ಕಚಾರ ಮಾಡಿ ಜಾರಿಗೆ ಸಿದ್ದತೆ ನಡೆಸಿ ಮತ್ತೆ ಏಕೆ ಬದಲಾವಣೆ ಮಾಡಿದರು ಎಂದು ನಮಗೆ ತಿಳಿಯಲಿಲ್ಲ ಆದರೆ ಒಳ ಮೀಸಲಾತಿಯನ್ನು ಸ್ವಾಗತಿಸುತ್ತೇವೆ ಎಂದರು.
ಒಳಮೀಸಲಾತಿ ಹಂಚಿಕೆಯ ಹೊಸ ಸೂತ್ರದಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಜಾತಿಗಳಿದ್ದ ಎ ಪ್ರವರ್ಗವನ್ನು ಕಡಿಮೆ ಹಿಂದುಳಿದಿರುವ ಡಿ ಪ್ರವರ್ಗದ ಜೊತೆ ಏಕಪಕ್ಷೀಯವಾಗಿ (Internal reservation) ಸೇರಿಸಲಾಗಿದೆ. ಈ ಸೇರ್ಪಡೆಯಲ್ಲಿ ಸುಪ್ರೀಂ ಕೋರ್ಟ್ ಆಶಯ ಕಾಣೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಡಿ ನಲ್ಲಿರುವ ಅಲೆಮಾರಿಗಳಿಗೆ ನ್ಯಾಯ ಒದಗಿಸಬೇಕು. ಜಾರಿಗೊಂಡಿರುವ ಒಳ ಮೀಸಲಾತಿ ಪಡೆಯಲು ನಾವು ಸಂತೋಷ ಆಗಬೇಕಾದರೆ ನಮಗಿಂತಲೂ ನೊಂದಿರುವ ಅಲೆಮಾರಿ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಶೀಘ್ರ ಮಾಡಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿಯ ಸೂತ್ರಕ್ಕೆ ಸಂಪುಟದ ಸಮ್ಮತಿ ಸಿಗುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ವಹಿಸಿದ ಮುತುವರ್ಜಿಯನ್ನು ಶ್ರೀ ಮಠ ಅಭಿನಂದಿಸುತ್ತದೆ. ಒಳ ಮೀಸಲಾತಿಯ ಸರ್ಕಾರದ ಸೂತ್ರದಲ್ಲಿನ ಗೊಂದಲಗಳ ಬಗ್ಗೆಯೂ ಶ್ರೀ ಮಠ (Internal reservation) ಮುಖ್ಯಮಂತ್ರಿಗಳ ಸ್ಪಷ್ಟನೆಯನ್ನು ಬಯಸುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
35 ವರ್ಷಗಳ ಹೋರಾಟದ ಫಲ ಆದರು ಸಮಾಧಾನವಿಲ್ಲ: ಪ್ರಕಾಶ ಮೂರ್ತಿ
ಮಾಜಿ ಜಿ.ಪಂ ಸದಸ್ಯ ಪ್ರಕಾಶ ಮೂರ್ತಿ ಮಾತನಾಡಿ 1998 ರಲ್ಲಿ ಒಳಮೀಸಲಾತಿ ಅಗತ್ಯದೆ ಎಂದು ವಿಚಾರ ಸಂಕೀರ್ಣ ಮಾಡಲಾಗಿದೆ. ಅಂದು ಮಾದಿಗರಿಗೆ ಒಳ ಮೀಸಲಾತಿ ಅಗತ್ಯವಿದೆ ಎಂದು ನಮಗೆ ಬೆಂಬಲ ಕೊಟ್ಟವರು ಬಂಜಗೆರೆ ಜಯಪ್ರಕಾಶ್ ಮತ್ತು ಯಾದವರೆಡ್ಡಿ ಬೆಂಬಲ ಸೂಚಿಸಿದ್ದರು. ನಿರಂತರ 28 ವರ್ಷಗಳ ಶ್ರಮದಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟಕ್ಕೆ ಈ ವಿಚಾರ ಮುಟ್ಟುವ ಜೊತೆಗೆ ಇಂದು ನಮಗೆ ಒಳ ಮೀಸಲಾತಿ ಜಾರಿಯಾಗಿದೆ. ನಾವು ಈಗ ಒಳಮೀಸಲಾತಿ ಸರ್ವೋಚ್ಚ ನ್ಯಾಯಾಲಯದ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಹಂತದಲ್ಲಿ ಘೋಷಣೆ ಮಾಡಿ ಎಂದು ತಿಳಿಸಿದ್ದರು.
ಕೇಂದ್ರ ಸರ್ಕಾರದ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಮೋಹನ್ ಭಗವತ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಡಾ.ನಾಗಮೋಹನ್ ದಾಸ್ ಸಮಿತಿ ಮಾಡಿ ಒಳ ಮೀಸಲಾತಿ ಮಾಡುವಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಇಡೀ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಒಳ ಮೀಸಲಾತಿ ಜಾರಿಯಾಗಿರುವುದು ಒಂದು ಹಂತದಲ್ಲಿ ನಮಗೆ ಸೋಲು ಎಂದು ಪ್ರತಿಪಾದಿಸುತ್ತೇನೆ. ನಮ್ಮ ಜನಸಂಖ್ಯೆ ಅನುಗುಣವಾಗಿ ನಮಗೆ ಮೀಸಲಾತಿ ದೊರಕಿಲ್ಲ ಹಾಗಾಗಿ (Internal reservation) ಪೂರ್ಣವಾಗಿ ಒಳ ಮೀಸಲಾತಿ ಒಪ್ಪಿಕೊಳ್ಳುವುದಿಲ್ಲ ಎಂದರು.
ಇದನ್ನೂ ಓದಿ: Government school: ಸೌಲಭ್ಯಗಳಿಂದ ವಂಚಿತವಾದ ಸರ್ಕಾರಿ ಶಾಲೆ | ಮಕ್ಕಳಿಗೆ ಬಯಲಿನಲ್ಲೇ ಪಾಠ
ಅಲೆಮಾರಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು: ಮೋಹನ್
ಮಾದಿಗ ಸಮಾಜದ ಮುಖಂಡ ಮೋಹನ್ ಮಾತನಾಡಿ ಕಳೆದ 35 ವರ್ಷ ಹೋರಾಟದ ಮೂಲಕ ಒಳ ಮೀಸಲಾತಿ ಜಾರಿಗೆ ಬಂದಿರಲು ಹಲವರು ಶ್ರಮಿಸಿದ್ದಾರೆ. ಒಳ ಮೀಸಲಾತಿ ವಿಚಾರದಲ್ಲಿ ಮಾದಿಗ ಚನ್ನಯ್ಯ ಸ್ವಾಮೀಜಿ ಅವರು ಕ್ರೀಯಾಶೀಲವಾಗಿ ಕೆಲಸ ಮಾಡಿದ್ದಾರೆ.ಅಲೆಮಾರಿಗಳನ್ನು ಪ್ರತ್ಯೇಕ ಗುಂಪು ಮಾಡಿ ನ್ಯಾಯ ಒದಗಿಸಿಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹುಲ್ಲೂರು ಕುಮಾರಸ್ವಾಮಿ ಇದ್ದರು.
