Chitradurga news | nammajana.com | 23-08-2025
ನಮ್ಮಜನ.ಕಾಂ,ಚಿತ್ರದುರ್ಗ: ಪರಿಶಿಷ್ಟ ಜಾತಿ(Internal Reservation) ಒಳಮೀಸಲಾತಿಯಲ್ಲಿನ ಸಿ ಗುಂಪಿಗೆ ಅಸಂವಿಧಾನಕ ಪದ ಸ್ಪೃಶ್ಯ ಜಾತಿ ಎಂಬುದನ್ನು ಕಡತದಿಂದ ತಗೆದು ವಿಮುಕ್ತ ಸಮುದಾಯಗಳೆಂದು ಗುರುತಿಸಲು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ರಾಜ್ಯಸರ್ಕಾರಕ್ಕೆ ಅಗ್ರಹಿಸಿದ್ದಾರೆ.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ

ಆಗಸ್ಟ್ 19 ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ಶಿಫಾರಸ್ಸುಗಳನ್ನು ಕೆಲವು ಮಾರ್ಪಾಟುಗಳೊಂದಿಗೆ ರಾಜಕೀಯ ಒತ್ತಡದಲ್ಲಿ ಅಂಗೀಕರಿಸಿದೆ.
ಪರಿಶಿಷ್ಟ ಜಾತಿಗಳಲ್ಲಿರುವ ಎಲ್ಲಾ 101 ಜಾತಿಗಳಿಗೆ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಇನ್ನಿತರೆ ವಿಷಯಗಳಲ್ಲಿ ಅವಕಾಶಗಳನ್ನು ಒದಗಿಸುವಲ್ಲಿ ಸಮಾನತೆ ಮತ್ತು ನ್ಯಾಯ ಸಮ್ಮತತೆಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸನ್ನು ಕೆಲವು ಮಾರ್ಪಡುಗಳೊಂದಿಗೆ ಸಚಿವ ಸಂಪುಟವು ಎ,ಬಿ,ಸಿ ಎಂದು ಮೂರು ಪ್ರವರ್ಗಗಳನ್ನಾಗಿ ವಿಭಾಗೀಕರಿಸಲು 6:6:5 ಅನುಪಾತದಲ್ಲಿ ಒಳಮೀಸಲಾತಿ ನೀಡಲು ತೀರ್ಮಾನಿಸಿದೆ.
ಸ್ವಾತಂತ್ರ್ಯ ನಂತರದಲ್ಲಿ 1952 ರ ಕೇಂದ್ರ ಸರ್ಕಾರದ ಅನಂತ ಶಯನಂ ಅಯ್ಯಂಗಾರ್ ಸಮಿತಿ ಶಿಫಾರಸ್ಸಿನಂತೆ ಕೊರಮ, ಕೊರಚ, ಭೋವಿ ಲಂಭಾಣಿ ಸಮುದಾಯಗಳನ್ನು ವಿಮುಕ್ತ ಸಮುದಾಯಗಳು ( de- notified communitys ( DNC) ಎಂದು ಭಾರತ ಸರ್ಕಾರ ಅಧಿಕೃತವಾಗಿ ಮತ್ತು ಕಾನೂನುಬದ್ದವಾಗಿ ಗುರುತಿಸಿದೆ.
ಇದನ್ನೂ ಓದಿ: ಸೃಜನಶೀಲ ಬರವಣಿಗೆಗೆ ಸಾಹಿತ್ಯ ಓದು ಅಗತ್ಯ | ದಿನೇಶ್ ಅಮಿನ್ ಮಟ್ಟು
ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಕೊರಮ,ಕೊರಚ, ಭೋವಿ( ವಡ್ಡ,ಒಡ್ಡ ) ಸಮುದಾಯಗಳು ಸ್ಪೃಶ್ಯರಲ್ಲ. ಇದು ಅಸಂವಿಧಾನಿಕ ಪದ ಪ್ರಯೋಗವಾಗಿದೆ. ಮೀಸಲಾತಿ ಉಪವರ್ಗೀಕರಣದ ಕಡತದಿಂದ ಸ್ಪೃಶ್ಯ ಎಂಬ ಪದ ತೆಗೆದು ವಿಮುಕ್ತ ಜಾತಿಗಳು ಅಥವಾ ವಿಮುಕ್ತ ಸಮುದಾಯಗಳು ಎಂಬ ಪದ ಸೇರಿಸಬೇಕು.
ಸಿ ಗುಂಪಿಗೆ 4% ನ್ಯಾಯ ಸಮ್ಮತವಲ್ಲದ ಶೇಖಡವಾರನ್ನು ಸಚಿವ ಶಿವರಾಜತಂಗಡಗಿ ಭೋವಿ ಬಂಜಾರ ಕೊರಮ ಕೊರಚ ಸುದಾಯಗಳ ಧ್ವನಿಯಾಗಿ ಶೇಖಡ 5% ರಷ್ಟು ಮಾಡಿರುವುದು ಅಭಿನಂದನಾರ್ಹ. ಆದರೆ ಈ ಗುಂಪಿಗೆ ಅಲೆಮಾರಿಗಳನ್ನು ಸೇರಿಸಿದಾಗ ಶೇಖಡ 6% ಹೆಚ್ಚಿಸಬೇಕಾದದು ಜವಾಬ್ದಾರಿ ಸ್ಥಾನದಲ್ಲಿದ್ದವರ ಕರ್ತವ್ಯವಾಗಿತ್ತು. ದನಿಯಿಲ್ಲದವರ ದನಿಯಾಗಿ ಸಂಪುಟ ಕಾರ್ಯ ನಿರ್ವಹಿಸಬೇಕಿತ್ತು.
ಪರಿಶಿಷ್ಚ ಜಾತಿಯ ಸಿ ಗುಂಪಿನಲ್ಲಿರುವ ಭೋವಿ ಬಂಜಾರ, ಕೋರಮ, ಕೊರಚ, ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ
ಹೀಗಾಗಿ ಭೋವಿ ಬಂಜಾರ ಕೊರಮ(Internal Reservation) ಕೊರಚ ಜಾತಿಗಳು ಶೇಖಡ 5% ಮತ್ತು ಅಲೆಮಾರಿಗಳು 1% ಜನಸಂಖ್ಯೆ ಇರುವುದರಿಂದ, 6 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ 8 ಲಕ್ಷಜನಸಂಖ್ಯೆ ಅರ್ಥಾತ್ ಶೇ 18% ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ. ಜನಸಂಖ್ಯಾ ಅನುಗುಣವಾಗಿ ಶೇಖಡ 17% ಬದಲು ಶೇಖಡ 18% ಹೆಚ್ಚಿಸಬೇಕು.
ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಹಿನ್ನಲೆ ಚಿತ್ರದುರ್ಗದಲ್ಲಿ ಆಗಸ್ಟ್ 24ರಂದು ಸಂಭ್ರಮೋತ್ಸವ | ಹೆಚ್.ಆಂಜನೇಯ
ಪರಿಶಿಷ್ಟ ಜಾತಿ ಜನಸಂಖ್ಯಾವಾರು ಶೇಖಡ 18% ಹೆಚ್ಚಿಸಿ ಪರಿಶಿಷ್ಚಜಾತಿಯ ಸಿ ಗುಂಪಿನಲ್ಲಿರುವ ಭೋವಿ ಬಂಜಾರ ಕೋರಮ ಕೊರಚ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ, ಅವಶ್ಯಕತೆ ಹಾಗೂ ಬೇಡಿಕೆ ಬಂದಲ್ಲಿ ಬರುವ ದಿನಗಳಲ್ಲಿ SC-C ಗುಂಪಿನಲ್ಲಿ ಜನಸಂಖ್ಯಾವಾರು ಪ್ರತ್ಯೆಕ ಗುಂಪು ರಚಿಸಲು ಅವಕಾಶ ಕಲ್ಪಿಸಿ.
ನ್ಯಾ.ನಾಗಮೋಹನ ದಾಸ ವರದಿಯಲ್ಲಿ ನೀಡಿರುವ ಸಮೀಕ್ಷೆ ವರದಿ ಪ್ರಕಾರ ಭೋವಿ ಬಂಜಾರ ಕೊರಮ ಕೊರಚ ಅಲೆಮಾರಿ ಸಮುದಾಯಗಳೇ ಹೆಚ್ಚಿನ ಮೀಸಲಾತಿ ವಂಚಿತ ಸಮುದಾಯಗಳು ಎಂದು ಗುರುತಿಸಿದೆ. ಈ ಕಾರಣದಿಂದ ಮೀಸಲಾತಿ ಬಿಂದುಗಳು ರಚಿಸುವಾಗ ಮೊದಲನೇ ಆದ್ಯತೆ ಈ ಗುಂಪಿಗೆ ನೀಡಬೇಕು.
ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆಯನ್ನು ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿಕೊಂಡು, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚಿಸಲು ಕರ್ನಾಟಕ ಸರ್ಕಾರವು ತೀರ್ಮಾನಿಸಿದ್ದು ಸ್ವಾಗತಿಸುತ್ತೇವೆ.
ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ | ಚಿತ್ರದುರ್ಗ ಸೇರಿ ಹಲವೆಡೆ ಪವರ್ ಕಟ್
ಇದೇ ಸಂದರ್ಭದಲ್ಲಿ ಒಳಮೀಸಲಾತಿ ಪರ-ವಿರೋಧ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಕರ್ನಾಟಕ ಸರ್ಕಾರವು ತೀರ್ಮಾನಿಸಿದ್ದು ಸ್ವಾಗತಿಸುತ್ತೇವೆ.
ಕರ್ನಾಟಕ ಸರ್ಕಾರವು ಈಗ(Internal Reservation) ಕೈಗೊಂಡಿರುವ ತೀರ್ಮಾನದಲ್ಲಿ ಯಾವುದಾದರೂ ಮಾರ್ಪಾಡುಗಳ ಅಗತ್ಯತೆ ಕಂಡುಬಂದರೆ ಅವುಗಳನ್ನು ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ-ಅ0ಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಬದ್ಧವಾಗಿದೆ ಎಂಬುದನ್ನು ಸ್ವಾಗತಿಸುತ್ತೇವೆ.
