Chitradurga news |nammajana.com|27-03-2025
ನಮ್ಮಜನ.ಕಾಂ, ಚಿತ್ರದುರ್ಗ: ದೇಶದಲ್ಲಿ ಐಪಿಎಲ್ (IPL) ಕ್ರಿಕೆಟ್ ಹಿಚ್ಚು ಹೆಚ್ಚುತ್ತಿದ್ದು ಬಿಟ್ಟಿಂಗ್ ದಂಧೆ ಜೋರಾಗಿದೆ. ಇಂತಹ ಪ್ರಕರಣದಲ್ಲಿ ಅನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಐಮಂಗಲ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಅವಿನಾಶ್ ಹಾಗೂ (IPL) ಗೋನೂರು ಮೂಲದ ಹಾಲಿ ಡಿಸಿಸಿ ಬ್ಯಾಂಕ್ ಕಾಲೋನಿಯ ಅಪ್ಪಿ ಅಲಿಯಾಸ್ ಬಿ.ಬಿ.ತಿಪ್ಪೇಸ್ವಾಮಿ ಬಂಧಿತರು.
ಹಿರಿಯೂರು ತಾಲೂಕು ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಗುಯಿಲಾಳ್ ಟೋಲ್ ಪ್ಲಾಜಾ ಬಳಿ ಆನ್ಲೈನ್ ವೆಬ್ಸೈಟ್ ಮೂಲಕ ಹಣವನ್ನು ಅಡವಿಟ್ಟುಕೊಂಡು (IPL) ಸಾರ್ವಜನಿಕರಿಂದಲೂ ಹಣ ಕಟ್ಟಿಸಿಕೊಂಡು ಕಾನೂನು ಬಾಹೀರವಾಗಿ IPL ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದರು.
ಇದನ್ನೂ ಓದಿ: Theft | ಟೀ ಅಂಗಡಿ ಕಳ್ಳತನ, ಸಿಸಿ ಕ್ಯಾಮರದಲ್ಲಿ ಸಿಕ್ಕ ಕಳ್ಳ
ಖಚಿತ ಮಾಹಿತಿ ಮೇರೆಗೆ ಐಮಂಗಲ ಸರ್ಕಲ್ ಇನ್ಸ್ಪೆಕ್ಟರ್ ಎನ್ ಗುಡ್ಡಪ್ಪ. ಐಮಂಗಲ ಠಾಣೆ PSI ಎಂ.ಟಿ.ದೀಪು, ಸಿಬ್ಬಂದಿಗಳಾದ ರವಿ, ಶಿವಕುಮಾರ್, ಪ್ರವೀಣ್ ಕುಮಾರ್, ಕಾಂತರಾಜ್ ಹರ್ಷ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Adike rate Hike | ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ
ಆರೋಪಿತರಿಂದ ಮೂರು ಸಾವಿರ ನಗದು ಹಣ, ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಗಳನ್ನು ಅಮಾನತುಪಡಿಸಿಕೊಂಡಿದ್ದು ಇನ್ನು ಹಲವು ಆರೋಪಿತರು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದ್ದು ಪ್ರಕರಣದ ತನಿಖೆ ಮುಂದುವರೆದಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
