
Chitradurga news|nammajana.com|23-6-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಡಿಆರ್‌ಡಿಓ ಸಂಸ್ಥೆಯಲ್ಲಿ ಏರೋನೆಟಿಕಲ್ ಟೆಸ್ಟ್ ರೇಂಜ್‌ನಿಂದ ಪುಷ್ಪಕ್ ರಾಕೆಟ್ ಉಡಾವಣೆ (ISRO) ಸಹ ಯಶಸ್ವಿಯಾಗಿದೆ.
ರನ್ ವೇನಲ್ಲಿ ಇಂದು ಬೆಳಗ್ಗೆ 7.40ಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು ಎಂದು ಇಸ್ರೋ (ISRO) ಮಾಹಿತಿ ನೀಡಿದೆ. ಸುಮಾರು 4.5 ಕಿಲೋ ಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದರೊಂದಿಗೆ ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಇದನ್ನೂ ಓದಿ: Challakere Letest crime: ಶಿಕ್ಷಕರ ಮನೆಗೆ ನುಗ್ಗಿ ಚಾಕು ತೋರಿಸಿ ಬೆಳ್ಳಿ, ಬಂಗಾರ, ಹಣ ಕದ್ದ ಕಳ್ಳರು
ಅತಿ ಕಡಿಮೆ ವೆಚ್ಚದಲ್ಲಿ ಮರು ಉಪಯೋಗವಾಗುವ ರಾಕೆಟ್‌ಗಳ ಉಡಾವಣೆಯಿಂದ ಹೆಚ್ಚಿನ ಹಣ ಉಳಿತಾಯ ಆಗಲಿದೆ ಎಂಬುದು ಇಸ್ರೋ ಉದ್ದೇಶವಾಗಿದೆ. ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಸಹಾಯದಿಂದ RLV LEX-03 ಉಡಾವಣಾ ವಾಹವನ್ನು ಮೇಲಕ್ಕೆ ಕೊಂಡೊಯ್ದು, 4.5 ಕಿಲೋ ಮೀಟರ್ ಎತ್ತರದಿಂದ ಲ್ಯಾಂಡಿಗ್‌ಗೆ ಬಿಟ್ಟು ಟೆಸ್ಟಿಂಗ್ ನಡೆಸಲಾಯಿತು.
ಇಸ್ರೋ (ISRO) ಮುಖ್ಯಸ್ಥರಿಂದ ಅಭಿನಂದನೆ
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಇಸ್ರೋದ ಅಭೂತಪೂರ್ವ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಸಂಕೀರ್ಣ ಕಾರ್ಯಾಚರಣೆಗಳಲ್ಲಿ ಯಶಸ್ಸಿನ ಸರಣಿಯನ್ನು ಕಾಯ್ದುಕೊಳ್ಳುವಲ್ಲಿ ತಂಡದ ಪ್ರಯತ್ನಕ್ಕೆ ಅಭಿನಂದನೆ ಎಂದು ಹೇಳಿದ್ದಾರೆ.
ರಾಕೆಟ್ (ISRO) ವೈಶಿಷ್ಟ್ಯವೇನು?
ಪುಷ್ಪಕ್ ಗಗನನೌಕೆಯು ಮರುಬಳಕೆ ಮಾಡುವ ಬಾಹ್ಯಾಕಾಶ ವಾಹನವಾಗಿದ್ದು, ಇದನ್ನು ರಾಕೆಟ್ ರೀತಿ ಉಡಾವಣೆ ಮಾಡಲಾಗುತ್ತದೆ. ಉಡಾವಣೆ ಬಳಿಕ ಇದು ಮತ್ತೆ ಲ್ಯಾಂಡ್ ಆಗುತ್ತದೆ ಎಂಬುದು ವಿಶೇಷವಾಗಿದೆ. ಇದು ಪುನಾ ಲ್ಯಾಂಡ್ (ISRO) ಆಗಲು ಇಸ್ರೋ ರೋಬೊಟಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ದೇಶೀಯವಾಗಿಯೇ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ರಾಮಾಯಣದಿಂದ ಸ್ಫೂರ್ತಿಗೊಂಡು ಇದಕ್ಕೆ ಪುಷ್ಪಕ್ ಎಂದು ಹೆಸರಿಡಲಾಗಿದೆ. ಬಾಹ್ಯಾಕಾಶ ಅವಶೇಷಗಳ ಪ್ರಮಾಣ ತಪ್ಪಿಸಲು, ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ಪೂರೈಸಲು ಮರುಬಳಕೆ ರಾಕೆಟ್‌ಗಳು ಮಹತ್ವದ ಪಾತ್ರ ನಿರ್ವಹಿಸಲಿದೆ.