Chitradurga News | Nammajana.com | 09-07-2025
ನಮ್ಮಜನ.ಕಾಂ, ಚಿತ್ರದುರ್ಗ: ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು Lower division cleark (LDC), junior secretariat assistant (JSA), Data entry operator (DEO) ಮತ್ತು Data entry operator Grade ‘A’ ಹುದ್ದೆ(Job)ಗಳ ನೇಮಕಾತಿಗಾಗಿ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 18 ಅರ್ಜಿ ಸಲ್ಲಿಸಲು ಕೊನೆಯ ದಿನ.
ಇದನ್ನೂ ಓದಿ: ಹಾವು ಕಚ್ಚಿ ರೈತ ಸಂಘದ ಉಪಾಧ್ಯಕ್ಷ ಸಾವು

ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಪರೀಕ್ಷೆಯಲ್ಲಿ ಪಿ.ಯು.ಸಿ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯೋಮಿತಿ 18 ರಿಂದ 27 ವರ್ಷದೊಳಗಿರಬೇಕು.
ಎಸ್.ಸಿ/ಎಸ್.ಟಿ/ಒ.ಬಿ.ಸಿ/ಇ.ಎಸ್.ಎಮ್ ಇತರ ನಿರ್ದಿಷ್ಟ ವರ್ಗಗಳಿಗೆ ವಯೋಮಿತಿ(Job) ಸಡಿಲಿಕೆ ಇರುತ್ತದೆ. ಪರೀಕ್ಷೆಯ ಸಂಭವನೀಯ ದಿನಾಂಕ ಸೆಪ್ಟೆಂಬರ್-2025 ಆಗಿದ್ದು, ನಿಖರ ದಿನಾಂಕವನ್ನು ಎಸ್‍ಎಸ್‍ಸಿ ವೆಬ್‍ಸೈಟ್ ಮೂಲಕ ತಿಳಿಸಲಾಗುವುದು.
ಇದನ್ನೂ ಓದಿ: ರಾತ್ರೋರಾತ್ರಿ ಎರಡು ಎಕರೆ ಅಡಿಕೆ ತೋಟ ಕಡಿದ ಕಿಡಿಗೇಡಿಗಳು
ಹೆಚ್ಚಿನ ಮಾಹಿತಿಗಾಗಿ ಎಸ್‍ಎಸ್‍ಸಿ ವೆಬ್‍ಸೈಟ್ www.ssckkr.kar.nic.in/https://ssc.nic.in ಗೆ ಭೇಟಿ ನೀಡಬಹುದು ಹಾಗೂ ಸಿಬ್ಬಂದಿ ನೇಮಕಾತಿ ಆಯೋಗದ ದೂರವಾಣಿ ಸಂಖ್ಯೆ 080-25502520 ಅಥವಾ ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ 9945587060, 7022459064 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252