Chitradurga news|nammajana.com|13-6-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಶಸ್ತ್ರಚಿಕಿತ್ಸಕರ ಕಾರ್ಯಾಲಯ, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಚಿತ್ರದುರ್ಗ (Job News Chitradurga) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಸಲ್ಲಿಕೆಗೆ ಅರ್ಜಿ ಆಹ್ವಾನಿಸಲಾಗಿದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಚಿತ್ರದುರ್ಗ ಇಲ್ಲಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಚಿತ್ರದುರ್ಗದಲ್ಲಿ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾಗಿದ್ದು, ಈ ಆಸ್ಪತ್ರೆಯಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಪಡೆಯಲು ವಿವಿಧ ಹುದ್ದೆಗಳಿಗೆ ರೋಸ್ಟರ್ ಮತ್ತು ಮೆರಿಟ್ ಆಧರಿಸಿ ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ ವೇತನ ವಿವರ:
ಶುಶ್ರೂಷಾಧಿಕಾರಿಗಳು 18 ಹುದ್ದೆ. ಸಾಮಾನ್ಯ ಅಭ್ಯರ್ಥಿ 8, ಮಹಿಳಾ ಅಭ್ಯರ್ಥಿ 5, ಗ್ರಾಮೀಣ ಅಭ್ಯರ್ಥಿ 4, ಅಂಗವಿಕಲ ಅಭ್ಯರ್ಥಿ 1 ಸೇರಿ ಒಟ್ಟು 18 ಹುದ್ದೆಗಳು. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಬಿ.ಎಸ್ಸಿ ನರ್ಸಿಂಗ್/ ಜಿ.ಎನ್.ಎಂ ನರ್ಸಿಂಗ್ ವಿದ್ಯಾರ್ಹತೆಯನ್ನು ಕರ್ನಾಟಕ ಸರ್ಕಾರದಿಂದ (Job News Chitradurga) ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು.
ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿಯಾಗಿರಬೇಕು ಹಾಗೂ 2 ವರ್ಷದ ಅನುಭವವಿರಬೇಕು. ಮಾಸಿಕ ಸಂಚಿತ ವೇತನ ರೂ. 16,839ಗಳು. ಅಭ್ಯರ್ಥಿಗಳ ವಯೋಮಿತಿ 45 ವರ್ಷದೊಳಗಿರಬೇಕು.
ಕಿರಿಯ ಪ್ರಯೋಗಾ ‘ಶಾಲಾ ತಂತ್ರಜ್ಞರು 4 ಹುದ್ದೆಗಳು. ಸಾಮಾನ್ಯ ಅಭ್ಯರ್ಥಿ 3, ಮಹಿಳಾ ಅಭ್ಯರ್ಥಿ 1. ಅರ್ಜಿ ಸಲ್ಲಿಸುವವರು ಬಿ.ಎಸ್ಸಿ ಲ್ಯಾಬ್ ಟೆಕ್ನಿಷಿಯನ್/ ಡಿಪ್ಲೋಮಾ ಇನ್ ಲ್ಯಾಬ್ ಟೆಕ್ನಿಷಿಯನ್ ವಿದ್ಯಾರ್ಹತೆ ಹೊಂದಿರಬೇಕು. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು.
ಕರ್ನಾಟಕ ಪ್ಯಾರಮೆಡಿಕಲ್ ಬೋರ್ಡ್ನಲ್ಲಿ ನೋಂದಣಿಯಾಗಿರಬೇಕು ಹಾಗೂ 2 ವರ್ಷದ ಅನುಭವವಿರಬೇಕು. ಮಾಸಿಕ ಸಂಚಿತ ವೇತನ ರೂ. 16,839ಗಳು. ಅಭ್ಯರ್ಥಿಗಳ ವಯೋಮಿತಿ 45 ವರ್ಷದ ಒಳಗೆ ಇರಬೇಕು.
ಫಾರ್ಮಾಸಿಸ್ಟ್ 1 ಹುದ್ದೆ (ಸಾಮಾನ್ಯ ಅಭ್ಯರ್ಥಿ). ವಿದ್ಯಾರ್ಹತೆ ಡಿ. ಫಾರ್ಮಾ/ ಬಿ.ಫಾರ್ಮಾ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು. ಕರ್ನಾಟಕ ಪ್ಯಾರಮೆಡಿಕಲ್ ಬೋರ್ಡ್ನಲ್ಲಿ ನೋಂದಣಿಯಾಗಿರಬೇಕು ಹಾಗೂ 2 ವರ್ಷದ ಅನುಭವವಿರಬೇಕು. ಮಾಸಿಕ ಸಂಚಿತ ವೇತನ ರೂ.16,839ಗಳು. ವಯೋಮಿತಿ 45 ವರ್ಷದ ಒಳಗೆ ಇರಬೇಕು.
ಇದನ್ನೂ ಓದಿ: Dina Bhavishya: ಇಂದಿನ ದಿನ ಭವಿಷ್ಯ 13-6-2024
ಸದರಿ ನೇಮಕಾತಿಯನ್ನು ಮೆರಿಟ್ ಕೋಂ ರೋಸ್ಟ ಆಧಾರದಲ್ಲಿ ಗುತ್ತಿಗೆ ಆಧಾರದ ಮೇಲೆ ಮಾಡಿಕೊಳ್ಳಲಾಗುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು 21/06/2024ರ ಸಂಜೆ 4.30 ರೊಳಗಾಗಿ ಬಯೋಡೆಟಾದಲ್ಲಿ ನಿಗದಿತ ವಿದ್ಯಾರ್ಹತೆಯು ದೃಢೀಕೃತ ದಾಖಲೆಗಳೊಂದಿಗೆ ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ (Job News Chitradurga) ಕಛೇರಿಗೆ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Udyoga mela: ಎಂಟು ಖಾಸಗಿ ಕಂಪನಿಗಳಿಂದ ಚಿತ್ರದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ, ನೇರವಾಗಿ ಆಯ್ಕೆ
ಸದರಿ ನೇಮಕಾತಿಯು ಷರತ್ತು ಮತ್ತು ನಿಬಂಧನೆಗಳಿಗೆ ಹಾಗೂ ಸರ್ಕಾರದಿಂದ ಹಾಗೂ ನಿರ್ದೇಶನಾಲಯದಿಂದ ನೀಡುವ ಸೂಚನೆ ಹಾಗೂ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.