
Chitradurga news|Nammajana.com|21-1-2025
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಕ್ಕೆ ಗೌರವಧನ ಆಧಾರದ ಮೇಲೆ ವಿವಿಧ (JOB NEWS) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. 18-45 ವರ್ಷಗಳ (JOB NEWS) ವಯೋಮಿತಿಯಲ್ಲಿರುವ ಅರ್ಹ ಅಭ್ಯರ್ಥಿಗಳು ಫೆ.6 ರ ಒಳಗೆ ಅರ್ಜಿ ಸಲ್ಲಿಸಬಹುದು.ಸಲ್ಲಿಸಬಹುದು

ಫಿಸಿಯೋಥೆರಪಿಸ್ಟ್/ಆಕ್ಯುಪೇಷನಲ್ ಥೆರಪಿಸ್ಟ್, ಪಿ&ಓ ಕೃತಕಾಂಗ ಜೋಡಣೆ ಅಭಿಯಂತರ, ಪ್ರಾಥೋಟಿಸ್ಟ್ & ಆರ್ಥೋಟಿಸ್ಟ್ (ಪಿ & ಓ), ಸ್ಪೀಚ್ ಥರೆಪಿಸ್ಟ್ & (JOB NEWS) ಆಡಿಯಾಲಿಜಿಸ್ಟ್, ಮೊಬಿಲಿಟಿ ಇನ್ಸಟ್ರಕ್ಟರ್, ಇಯರ್ ಮೋಲ್ಡ್ ಟೆಕ್ನಿಷಿಯನ್ ತಲಾ ಒಂದು ಹುದ್ದೆಗಳು ಖಾಲಿಯಿವೆ.
ಇದನ್ನೂ ಓದಿ: Sri Ahobala TVS | ಶ್ರೀ ಅಹೋಬಲ ಟಿವಿಎಸ್ ಗೆ ಯಶಸ್ವಿ ಮೂರು ವರ್ಷಗಳ ಸಂಭ್ರಮ
ಈ ಹುದ್ದೆಗಳಿಗೆ ಸಂವಾದಿಯಾಗಿ ಅರ್ಹ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರದೊಂದಿಗೆ (JOB NEWS)
ಅರ್ಜಿಯನ್ನು ಸಿದ್ದಪಿಡಿಸಿ, ಮೊಬೈಲ್ ಸಂಖ್ಯೆ ನಮೂದಿಸಿ, ಅಗತ್ಯ ದಾಖಲೆಗಳೊಂದಿಗೆ ಕಾರ್ಯದರ್ಶಿಗಳು, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ , ಲೋಕಾಯುಕ್ತ ಕಚೇರಿ ಆವರಣ ಬಿ.ಡಿ.ರಸ್ತೆ ಚಿತ್ರದುರ್ಗ-577501 ಇಲ್ಲಿಗೆ ಸಲ್ಲಿಸತಕ್ಕದ್ದು.
ವಿದ್ಯಾರ್ಹತೆ, ಅನುಭವ ಹಾಗೂ ಮಾಸಿಕ ವೇತನದ ಕುರಿತು (JOB NEWS) ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08914-220085, ಮೊಬೈಲ್ ಸಂಖ್ಯೆ 9448038400 ಕರೆ ಮಾಡಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
