
Chitradurga news |Nammajana.com|25-1-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತೀಯ ಗಣಿ ಬ್ಯೂರೋ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಆರ್.ಪ್ರವೀಣ ಚಂದ್ರ ನೇತೃತ್ವದ ಜಾನ್ ಮೈನ್ಸ್ (John Mines) ವತಿಯಿಂದ ಕ್ಷಯ ರೋಗ ನಿವಾರಣೆಗಾಗಿ 100 ದಿನಗಳ ಪ್ರಚಾರ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ವಿಶೇಷವಾಗಿ ಗಣಿಯೋಜನಾ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಪ್ರಚಾರ ಆಂದೋಲವನ್ನು ಬಿರುಸಾಗಿ ನಡೆಸಲು ಮುಂದಾಗಿದ್ದು ಜಿಲ್ಲೆಯ ಅರೋಗ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಗಿರೀಶ್, ನಾಗವೇಣಿ, ಕಾವ್ಯ, ಪ್ರವೀಣ್, ಹಿರಿಯ ಶುಶೂಷಕಿ (John Mines) ಜೀವನಜ್ಯೋತಿ, ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಮಂಜುಳಾ ಇವರ ತಂಡವು ಜಾಗೃತಿ ಮೂಡಿಸಲಿದೆ.

ಇದನ್ನೂ ಓದಿ: Dina Bhavishya | ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ಕ್ಷಯ ಭೀತಿಯಿಂದ ಇರುವ ಜನರಿಗೆ ಸೂಕ್ತ ತಿಳುವಳಿಕೆ ನೀಡಿ, ಅವರಿಗೆ ಔಷಧೋಪಚಾರದ ಮಾಹಿತಿ ನೀಡುವುದು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಅರಿವು ಮೂಡಿಸುವುದು, 100 ದಿನಗಳ ಆಂದೋಲನದ ತಿಳುವಳಿಕೆ ಫಲಕಗಳನ್ನು ಪ್ರದರ್ಶಿಸುವ ಮೂಲಕ ಗ್ರಾಮಾಂತರ ಜನರನ್ನು ಎಚ್ಚರಿಸುವ ಕೆಲಸವನ್ನು ಈ ತಂಡ ಮಾಡಲಿದೆ.
ಈ (John Mines) ಸಂದರ್ಭದಲ್ಲಿ ಸಮೀಪದ ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಗಣಿ ಸಿಬ್ಬಂದಿ ಬಿ. ಮಲ್ಲಿಕಾರ್ಜುನ್ ಪ್ರತಿಜ್ಞಾವಿ ಬೋಧಿಸಿದರು. ಶರತ್ ಕುಮಾರ್ ಹೆಗಡೆ, ಕೆ.ವಿ. ಸುಧೀರ್ ಕೆ.ವಿ, ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು.