Chitradurga news|Nammajana.com|28-8-2025
ನಮ್ಮಜನ.ಕಾಂ, ಚಿತ್ರದುರ್ಗ: ಆನ್ಲೈನ್ ಬೆಟ್ಟಿಂಗ್ ಮತ್ತು (K.C.Veerendra) ಅಕ್ರಮ ಹಣವರ್ಗಾವಣೆ ಆರೋಪದಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಲಾಕ್ ಆಗಿದ್ದಾರೆ. 5 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳು ಇದೀಗ ಕಸ್ಟಡಿ ಅವಧಿ ಅಂತ್ಯವಾದ ಬಳಿಕ ಕೋರ್ಟ್ಗೆ ಹಾಜರು ಪಡೆಸಿದ್ದ ಇಡಿ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ವಿಚಾರಣೆಗಾಗಿ ಮತ್ತೆ ಆರು ದಿನ ವಿಸ್ತರಣೆಗೆ ಅವಕಾಶ ನೀಡಿದೆ.

ಕಳೆದ ಐದು ದಿನಗಳ ಕಾಲ ವಿಚಾರಣೆ ನಡೆಸಿದ ಇಡಿ ಇಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಕೋರ್ಟ್ ಗೆ ಹಾಜರು ಪಡಿಸಿತ್ತು. ಆದರೆ ವಿಚಾರಣೆ ಬಾಕಿ ಇರುವ ಕಾರಣ ಇಡಿ ಪರ (K.C.Veerendra) ವಕೀಲರು ಕೋರ್ಟ್ ಮೊರೆ ಹೋಗಿದ್ದರಿಂದ ಕೆ.ಸಿ.ವೀರೇಂದ್ರ ಅವರು ಇನ್ನೂ ಆರು ದಿನ ಇಡಿ ವಶದಲ್ಲಿರಲಿದ್ದಾರೆ.
