Chitradurga News | Nammajana.com | 10-07-2025
ನಮ್ಮಜನ.ಕಾಂ, ಚಳ್ಳಕೆರೆ: ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಆವರಣದಲ್ಲಿ ಜು.11 ರಿಂದ 13ರವರೆಗೆ ಪ್ರೊ ಮಾದರಿಯ 25 ವರ್ಷದೊಳಗಿನ ಪುರುಷರ ಹೊನಲು ಬೆಳಕಿನ ಕಬಡ್ಡಿ (Kabbadi) ಪಂದ್ಯಾವಳಿ ಆಯೋಜಿಸಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗ | ಕರ್ತವ್ಯ ಲೋಪ ಇಬ್ಬರು PDO ಅಮಾನತು
ಸದ್ಗುರು ಕಬೀರಾನಂದ ಆಶ್ರಮದ ಶ್ರೀಶಿವಲಿಂಗಾನಂದ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ಟಿ.ರಘುಮೂರ್ತಿ, ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಕೀಲ ಫಾತ್ಯರಾಜನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ್, ಅಹೋಬಲ ಟಿವಿಎಸ್ ಶೋರೂಂ ಮಾಲೀಕ ಅರುಣ್‌ಕುಮಾರ್, ತಾಪಂ ಮಾಜಿ ಸದಸ್ಯ ಸುರೇಶ್ ನಾಯ್ಕ, ಮತ್ತಿತರರು ಭಾಗವಹಿಸುವರು.
ಲೀಗ್ ಕಮ್ ನಾಕ್ -ಔಟ್ ಮಾದರಿಯಲ್ಲಿ ಒಟ್ಟು 18 ಪಂದ್ಯಗಳು ನಡೆಯುತ್ತವೆ. ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ 15 ಕ್ರೀಡಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿಜೇತರಿಗೆ ಪ್ರಥಮ 50 ಸಾವಿರ, ದ್ವಿತೀಯ 30 ಸಾವಿರ, ತೃತೀಯ 20 ಸಾವಿರ, ಚತುರ್ಥ 10 ಸಾವಿರ, ಐದನೇ ಮತ್ತು ಆರನೇ ಬಹುಮಾನ ತಲಾ 5 ಸಾವಿರ ಮತ್ತು ಪಾರಿತೋಷಕ, ಉತ್ತಮ ಹಿಡಿತಗಾರ, ಉತ್ತಮ(Kabbadi) ದಾಳಿಗಾರ ಮತ್ತು ಪಂದ್ಯಾವಳಿಯ ಸರ್ವೋತ್ತಮ ಆಟಗಾರನಿಗೆ ಸೈಕಲ್ ನೀಡಲಾಗುವುದು. 2 ಸಾವಿರ ಮಂದಿ ಕುಳಿತು ವೀಕ್ಷಣೆ ಮಾಡುವ ಗ್ಯಾಲರಿ, ಮಹಿಳೆಯರಿಗೆ ಪ್ರತ್ಯೇಕವಾಗಿ ಕುಳಿತು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕ ಪಿ.ಸಿ.ಮುರುಗೇಶ್ ತಿಳಿಸಿದ್ದಾರೆ.
