Chitradurga news|nammajana.com|18-11-2024
ನಮ್ಮಜನ.ಕಾಂ, ಚಳ್ಳಕೆರೆ: ನೂರಾರು ಜಾತಿ, ಸಮುದಾಯಗಳ ಮಧ್ಯೆ ತಲೆದೋರಿದ್ದ ನಿಂದನೆ, ಅಪಮಾನ ಮುಂತಾದ ಸಮಸ್ಯೆಗಳಿಗೆ ತಮ್ಮದೇಯಾದ ಕೀರ್ತಿನೆಗಳ ಮೂಲಕ (Kanakadasa Jayanti) ಪರಿರ್ವನೆಯನ್ನು ತಂದ ಕೀರ್ತಿ ಕನಕದಾಸರದ್ದು. ಕನಕದಾಸರ ಕೀರ್ತಿನೆಗಳಲ್ಲಿ ಬದುಕಿನ ಮೌಲ್ಯಗಳ ಬಗ್ಗೆ ಒತ್ತಿಹೇಳಿದ್ದು, ಇದು ಎಲ್ಲಾ ಸಮುದಾಯಗಳ ಪರಿವರ್ತನೆಗೆ ನಾಂದಿಯಾಯಿತು. ಲೋಕದ ಡೊಂಕನ್ನು ತಿದ್ದುವ ಕನಕದಾಸರ ಸಂಕಲ್ಪಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಸೋಮವಾರ ಕುರುಬರ ವಿದ್ಯಾರ್ಥಿನಿಲಯ ಆವರಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ, ಕುರುಬ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ೫೩೭ನೇ ಕನಕಜಯಂತ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾದವರಲ್ಲ, ಅವರ ಕೀರ್ತಿನೆಗಳಲ್ಲಿ ಬದುಕಿನ ಬದಲಾವಣೆಯ ಅರ್ಥಗಳು ಅಡಗಿದ್ದವು. ಕನಕದಾಸರ ಆದರ್ಶಗಳು ಎಲ್ಲರಿಗೂ ಸ್ಪೂರ್ತಿಯಾಗಿವೆ. ಚಳ್ಳಕೆರೆ ನಗರದಲ್ಲಿ ಕನಕಭವನ ನಿರ್ಮಾಣ ಕಾರ್ಯ ತಾತ್ಕಾಲಿಕವಾಗಿ (Kanakadasa Jayanti) ಸ್ಥಗಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಅನುದಾನ ನೀಡಿ ಪೂರೈಸುವ ಭರವಸೆ ನೀಡಿದರು.
ಕನಕದಾಸರ ಬಗ್ಗೆ ಇಂದು ನಾಡಿನೆಲ್ಲೆಡೆ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಕನಕದಾಸರ ಭಕ್ತಿಯ ಬಗ್ಗೆಯೂ ಸಹ ಇಂದಿಗೂ ಎಲ್ಲರೂ ಚಕಿತರಾಗುವಂತಾಗಿದೆ. ಕಾರಣ, ಉಡುಪಿಯಲ್ಲಿ ಶ್ರೀಕೃಷ್ಣ ದರ್ಶನಕ್ಕೆ ವಿರೋಧ ವ್ಯಕ್ತವಾದಾಗ ತಮ್ಮದೇ ಹಾಡಿನ ಮೂಲಕ ಕೃಷ್ಣನ ದರ್ಶನ ಮಾಡಿದ ಭಕ್ತಶ್ರೇಷ್ಠ ಕನಕದಾಸರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕುರುಬ ಸಮುದಾಯದ ಸರ್ವತೋಮುಖ (Kanakadasa Jayanti) ಅಭಿವೃದ್ದಿಗಾಗಿ ಶ್ರಮಿಸುವ ಭರವಸೆ ನೀಡಿದರು.
ಸಹಕಾರ ರತ್ನ ಪ್ರಶಸ್ತಿ ವಿಜೇತ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ಮಲ್ಲೇಶಪ್ಪ, ಸಮುದಾಯದ ಭೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಇಒ ಎಚ್.ಶಶಿಧರ, ಭಕ್ತಕನಕದಾಸರು ಈ ನಾಡುಕಂಡ ಅಪ್ರತಿಮ ಭಕ್ತಶ್ರೇಷ್ಠರು ಎಂದರು.
ಕಾರ್ಯಕ್ರಮದಲ್ಲಿ ಕನಕಶ್ರೀಪ್ರಶಸ್ತಿಗೆ ಭಾಜನರಾದ ಆರ್.ಅನುಸೂಯಮ್ಮಮಲ್ಲೇಶಪ್ಪ, ಬಿ.ಎಸ್.ಮಾಳಮ್ಮಬಸವರಾಜು, ಇಂದಿರಾಲೋಕೇಶ್, ಸುಜಾತ, ಮಂಜುಳಾಶಿವಲಿಂಗಪ್ಪರವರನ್ನು ಸನ್ಮಾನಿಸಲಾಯಿತು. ಕನಕ ಪ್ರತಿಮೆ ನಿರ್ಮಾಣಕ್ಕೆ ದಾನ ನೀಡಿದ ದಾನಿಗಳನ್ನು ಶಾಸಕರು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರ ಪ್ರಮುಖ (Kanakadasa Jayanti) ಬೀದಿಗಳಲ್ಲಿ ಕನಕರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.
ಇದನ್ನೂ ಓದಿ: ಕೋಟೆ ಬಳಿ ಒತ್ತುವರಿ ಆಗಿಲ್ಲ, ಜಮೀನಿನ ದಾಖಲೆ ಬಿಡುಗಡೆ ಮಾಡಿದ ರಾಮಮೂರ್ತಿ | Fort encroachment case
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್‌ಪಾಷ, ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ವೀರಭದ್ರಯ್ಯ, ನಾಮಿನಿ ಸದಸ್ಯರಾದ ಅನ್ವರ್‌ಮಾಸ್ಟರ್, ಬಡಗಿಪಾಪಣ್ಣ, ನೇತಾಜಿಪ್ರಸನ್ನ, ವೀರಭದ್ರಪ್ಪ, ಕಂದಿಕೆರೆಸುರೇಶ್‌ಬಾಬು, ಸೂರನಹಳ್ಳಿಜಗದೀಶ್, ಬಿ.ಮಲ್ಲಿಕಾರ್ಜುನಪ್ಪ, ಶಶಿಕಲಾಸುರೇಶ್‌ಬಾಬು, ಕನಕನೌಕರರ ಸಂಘದ ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಸದಾಶಿವಯ್ಯ, ಯುವಘಟಕದ ಭೀಮಣ್ಣ, ಬಸವರಾಜು, ಎಸ್.ಲಕ್ಷö್ಮಣ್, ಬಿಇಒ ಕೆ.ಎಸ್.ಸುರೇಶ್, ಎಸ್ಟಿ ಕಲ್ಯಾಣಾಧಿಕಾರಿ ಶಿವರಾಜ್, ಬಿಸಿಎಂ ಅಧಿಕಾರಿ ರಮೇಶ್, ಡಿ.ಮಹಲಿಂಗಪ್ಪ, ಟಿ.ಮಲ್ಲೇಶಪ್ಪ ಮುಂತಾದವರು ಭಾಗವಹಿಸಿದ್ದರು.