Chitradurga news|nammajana.com|26-10-2024
ನಮ್ಮಜನ.ಕಾಂ, ಚಳ್ಳಕೆರೆ: ಸುಮಾರು 56 ವರ್ಷಗಳ ನಂತರ ತುಂಬಿ ಕೋಡಿಬಿದ್ದ ಕರೇಕಲ್ ಕೆರೆಗೆ ಗಂಗಾಪೂಜೆ ಮತ್ತು (Karekal kere) ಬಾಗಿನವನ್ನು ಶಾಸಕ, ರಾಜ್ಯ ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ಅವರು, ಈಗಾಗಲೇ ಈ ಕ್ಷೇತ್ರದ ೧೦ಕ್ಕೂ ಹೆಚ್ಚು ಕೆರೆಗಳು ಕೋಡಿಬಿದ್ದಿವೆ. ಕೆರೆ ನೀರಿನಿಂದ ಕೃಷಿ, ಕುಡಿಯುವ ನೀರಿನ ಸಮಸ್ಯೆ ದೂರವಾದಂತಾಗಿದೆ.
ಮಳೆಯಿಂದ ಈ ನಾಡು ಸಮೃದ್ದವಾಗಿ ಬೆಳೆಯಲಿ ಎಂದು ಪ್ರಾರ್ಥಿಸುವೆ. ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಜನರು ಬರಗಾಲವನ್ನು ಎದುರಿಸಿ ಬಸವಳಿದಿದ್ದರು. ಆದರೆ, ದೇವರು ಬಯಲುಸೀಮೆಯ ಮೇಲೆ ಕರುಣೆ ತೋರಿ ಕಳೆದ ಎರಡ್ಮೂರು ವರ್ಷಗಳಿಂದ ಸಮೃದ್ದ ಮಳೆಯನ್ನು (Karekal kere) ಸುರಿಸುತ್ತಿರುವುದು ನಮ್ಮ ಪುಣ್ಯ. ಶಾಸಕನಾಗಿ 12 ವರ್ಷದಲ್ಲಿ ಕಾಲಿಟ್ಟಿದ್ದು, ಇದೇ ಮೊದಲ ಬಾರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನನ್ನಪಾಲಿಗೆ ಬಂದಿದೆ.
ಕ್ಷೇತ್ರದ ಎರಡು ಐತಿಹಾಸಿಕ ಕೆರೆಗಳಾದ ಕರೇಕಲ್ ಕೆರೆ, ಅಜ್ಜಯ್ಯನಗುಡಿ ಕೆರೆಗಳು ಕೋಡಿಬಿದ್ದಿವೆ. ಅದಲ್ಲದೆ, ದೊಡ್ಡೇರಿ, ನಗರಂಗೆರೆ, ನನ್ನಿವಾಳ, ಚಿಕ್ಕಮಧುರೆಯೂ ಸೇರಿದಂತೆ ೧೦ಕ್ಕೂ ಹೆಚ್ಚು ಕೆರೆಗಳು ಕೋಡಿಬಿದ್ದು ಜನರ ಸಂಕಷ್ಟ ನೀಗಿಸುವ ಭರವಸೆ ಇದೆ ಎಂದರು.
ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ (Karekal kere) ಮಾತನಾಡಿ, ಈ ಭಾಗದ ನಗರಸಭಾ ಸದಸ್ಯನಾಗಿ ಆರು ವರ್ಷ ಕಳೆದಿದ್ದು, ಇದೇ ಮೊದಲಬಾರಿಗೆ ಕರೇಕಲ್ ಕೆರೆ ಕೋಡಿಬಿದ್ದಿದೆ.
ತುಂಬಿದ ಗಂಗಾಮಾತೆಗೆ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಎಲ್ಲರ ಸಹಕಾರದಿಂದ ಹಮ್ಮಿಕೊಂಡಿದ್ದು, ಶಾಸಕರು (Karekal kere) ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಗಿನ ಅರ್ಪಿಸಿರುವುದು ಸಂತಸ ತಂದಿದೆ ಎಂದರು.
ಇದನ್ನೂ ಓದಿ: ದಿನ ಭವಿಷ್ಯ,ಯಾರಿಗೆ ಪ್ರೀತಿ ಪ್ರೇಮದ ವಿಚಾರದಲ್ಲಿ ಸಮಸ್ಯೆ, ಯಾವ್ಯಾವ ರಾಶಿಗೆ ಶುಭ? | Dina Bhavishya kannada
ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಕವಿತಾ, ಸುಮಾ, ರಾಘವೇಂದ್ರ, ರಮೇಶ್‌ಗೌಡ, ನಾಮನಿರ್ದೇಶನ ಸದಸ್ಯ ಬಡಗಿಪಾಪಣ್ಣ, ಮುಖಂಡರಾದ ವೀರೇಶ್, ಕೃಷ್ಣಮೂರ್ತಿ, ಪ್ರಹ್ಲಾದ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು