
Chitradurga news|nammajana.com|2-05-2025
ನಮ್ಮಜನ.ಕಾಂ, ಚಿತ್ರದುರ್ಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ ಪ್ರಸಕ್ತ (2024-25ನೇ) ಶೈಕ್ಷಣಿಕ ಸಾಲಿನ SSLC ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ (Karnataka SSLC Result 2025) (SSLC Result-2025) ಗಳಿಸಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಕಲಬುರಗಿ ಜಿಲ್ಲೆ ಕೊನೆ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಹಿರಿಯ ಅಧಿಕಾರಿ ಸಮ್ಮುಖದಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ.

ಇಂದು ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಶೇಕಡ.66.14 ಬಂದಿದ್ದು, ರೆಗ್ಯುಲರ್ ಶಿಕ್ಷಣ ಪಡೆದ ಫ್ರೆಶ್ ವಿದ್ಯಾರ್ಥಿಗಳ ಪೈಕಿ ಪಾಸಾದವರ ಸಂಖ್ಯೆ 5,23,075. 22 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿಯೂ ಸಹ ಹೆಣ್ಣುಮಕ್ಕಳೇ ಮೈಲುಗೈ ಸಾಧಿಸಿದ್ದಾರೆ. ಈ ಕೆಳಗಿನಂತೆ ಈ ಬಾರಿಯ (Karnataka SSLC Result 2025)ಟಾಪರ್‌ಗಳ ಲಿಸ್ಟ್ ಅನ್ನು ನೀಡಲಾಗಿದೆ ನೋಡಿ.
ಈ ವರ್ಷದ SSLC ಯಲ್ಲಿ 625 ಕ್ಕೆ 625 ಅಂಕಗಳನ್ನು 22 ವಿದ್ಯಾರ್ಥಿಗಳು ಪಡೆದಿದ್ದಾರೆ. 624 ಅಂಕಗಳನ್ನು 65 ವಿದ್ಯಾರ್ಥಿಗಳು, 623 ಅಂಕಗಳನ್ನು 108 ವಿದ್ಯಾರ್ಥಿಗಳು, 622 ಅಂಕಗಳನ್ನು 189 ವಿದ್ಯಾರ್ಥಿಗಳು ಪಡೆದಿದ್ದಾರೆ. ಒಟ್ಟಾರೆ ಪ್ರಥಮ ಸ್ಥಾನದಲ್ಲಿ ಪಡೆದ ವಿದ್ಯಾರ್ಥಿಗಳು ಸೇರಿದಂತೆ, ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿದೆ.
ಇದನ್ನೂ ಓದಿ: SSLC Result-2025 | ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ, ಯಾರು ಫಸ್ಟ್, ಯಾರು ಲಾಸ್ಟ್
SSLC 2024-25 ಟಾಪರ್‌ಗಳ 22 ವಿದ್ಯಾರ್ಥಿಗಳ ಪಟ್ಟಿ
- ಅಖೀಲ್ ಅಹ್ಮೆದ್ ನದಾಫ್ – ವಿಜಯಪುರ ಜಿಲ್ಲೆ
- ಸಿ .ಭಾವನಾ – ಬೆಂಗಳೂರು ಗ್ರಾಮಾಂತರ ದೇವನಹಳ್ಳಿ.
- ಧನಲಕ್ಷ್ಮೀ ಎಂ – ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ
- ಧನುಷ್ ಎಸ್ – ಮೈಸೂರು ಜಿಲ್ಲೆ
- ದೃತಿ ಜೆ – ಮಂಡ್ಯ ಜಿಲ್ಲೆ
- ಜಾನವಿ ಎಸ್ ಎನ್ – ಬೆಂಗಳೂರು ದಕ್ಷಿಣ ಜಿಲ್ಲೆ
- ಮಧುಸೂದನ್ ರಾಜ್ ಎಸ್ – ಬೆಂಗಳೂರು ಉತ್ತರ ಜಿಲ್ಲೆ
- ಮೊಹಮ್ಮದ್ ಮಸ್ತೂದ್ – ತುಮಕೂರು ಜಿಲ್ಲೆ
- ಮೌಲ್ಯ ಡಿ ರಾಜ್ – ಚಿತ್ರದುರ್ಗ ಜಿಲ್ಲೆ
- ನಮನ ಕೆ – ಶಿವಮೊಗ್ಗ ಜಿಲ್ಲೆ
- ನಮಿತಾ – ಬೆಂಗಳೂರು ದಕ್ಷಿಣ ಜಿಲ್ಲೆ
- ನಂದನ್ ಹೆಚ್ ಒ – ಚಿತ್ರದುರ್ಗ ಜಿಲ್ಲೆ
- ನಿತ್ಯಾ ಕುಲಕರ್ಣಿ – ಶಿವಮೊಗ್ಗ ಜಿಲ್ಲೆ
- ರಂಜಿತಾ ಎ ಸಿ – ಬೆಂಗಳೂರು ಗ್ರಾಮಾಂತರ ಜಿಲ್ಲೆ
- ರೂಪಾ ಚನ್ನಗೌಡ ಪಾಟೀಲ್ – ಬೆಳಗಾವಿ ಜಿಲ್ಲೆ
- ಸಹಿಷ್ಣು ಎನ್ – ಶಿವಮೊಗ್ಗ ಜಿಲ್ಲೆ
- ಶಗುಫ್ತಾ ಅಂಜುಮ್ – ಶಿರಸಿ
- ಸ್ವಸ್ತಿ ಕಾಮತ್ – ಉಡುಪಿ ಜಿಲ್ಲೆ
- ತಾನ್ಯಾ ಆರ್ ಎನ್ – ಮೈಸೂರು ಜಿಲ್ಲೆ
- ಉತ್ಸವ್ ಪಾಟೀಲ್ – ಹಾಸನ
- ಯಶ್ವಿತಾ ರೆಡ್ಡಿ ಕೆ ಬಿ – ಮಧುಗಿರಿ
- ಯುಕ್ತ ಎಸ್ – ಬೆಂಗಳೂರು ದಕ್ಷಿಣ ಜಿಲ್ಲೆ