
Chitradurga news|nammajana.com|19-12-2024
ನಮ್ಮಜನ.ಕಾಂ, ಹೊಳಲ್ಕೆರೆ: ತಾಲೂಕಿನ ಐತಿಹಾಸಿಕ ಹಿನ್ನೆಲೆ (Kartika) ಹೊಂದಿರುವ ಶ್ರೀಗುರು ಕರಿಸಿದ್ದೇಶ್ವರಸ್ವಾಮಿ ಕಡೇ ಕಾರ್ತಿಕ ಲಕ್ಷ ದೀಪೋತ್ಸವ, ಬಾಳೆಹಣ್ಣಿನ ಪರಿಷೆ ಮಂಗಳವಾರ ಬೆಳಗಿನ ಜಾವ ಅದ್ದೂರಿಯಾಗಿ ಜರುಗಿತು.
ರಾಮಗಿರಿ ಕಾರ್ತಿಕ ಲಕ್ಷ ದೀಪೋತ್ಸವದ ಕೇಂದ್ರ ಬಿಂದುವೇ ಬಾಳೆ ರಾಶಿ ಹಾಕುವುದು. ಮೂರು ದೇವರನ್ನು ಕದಲಿ (Kartika) ಮಂಟಪದಲ್ಲಿ ಪ್ರತಿಷ್ಠಾಪಿಸಿ, ನಂತರ ಭಕ್ತರಿಗೆ ಬಾಳೆಹಣ್ಣಿನ ರಾಶಿ ಹಾಕುವಂತೆ ಅನುವು ಮಾಡಿಕೊಡಲಾಯಿತು. ಹರಕೆ ತೀರಿಸಲು ಭಕ್ತರು ಬಾಳೆಗೊನೆ ಖರೀದಿಸಿ ತಂದು ರಾಶಿಗೆ ಪಾಕಿದರು.

150-200 ರೂ.ಗೆ ಒಂದರಂತೆ ಗೊನೆಯನ್ನು ಭಕ್ತರು ಖರೀದಿಸಿ, ತಂದು ಬಾಳೆಹಣ್ಣಿನ ರಾಶಿಗೆ ಹಾಕುವ ಮೂಲಕ ಹರಕೆ ತೀರಿಸುವರು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು (Kartika) ಬಾಳೆಗೊನೆಗಳನ್ನು ರಾಶಿ ಹಾಕಲಾಗಿತ್ತು. ರಾಶಿ ಇಪ್ಪತ್ತು ಅಡಿ ಎತ್ತರಕ್ಕೇರಿತ್ತು. ನಂತರ ಮೂರು ದೇವರ ಅರ್ಚಕರು ವಿಶೇಷ ಪೂಜೆ ನೆರವೇರಿಸಿ, ಆಗಮಿಸಿದಂತ ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು.
ಪ್ರಸಾದ ಪಡೆಯಲು ಭಕ್ತರು ಬೆಳಗ್ಗೆ 3 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮೂರು ದೇವರುಗಳ ಹೂವಿನ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಕರಡೆ ವಾದ್ಯ, ವೀರಗಾಸೆ ತಂಡ, ಕೋಲಾಟ, ಭಜನಾ ಮಂಡಳಿಗಳು ಸೇರಿದಂತೆ ನಾನಾ ಕಲಾ ತಂಡಗಳು (Kartika) ಭಾಗವಹಿಸಿದ್ದವು. ದೇವಾಲಯ ಸಮಿತಿ, ಕಂದಾಯ ಇಲಾಖೆ, ಗ್ರಾಪಂ ಹಾಗೂ ಗ್ರಾಮಸ್ಥರು ಭಕ್ತರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿದ್ದರು. ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿತ್ತು.
ಕಂಗೊಳಿಸಿದ ಅಲಂಕಾರ
ಬೆಟ್ಟದ ತುಂಬೆಲ್ಲ ವಿದ್ಯುತ್ ದೀಪಾಲಂಕಾರ ಝಗಮ ಗಿಸುತ್ತಿತ್ತು. ಶ್ರೀಕರಿಸಿದ್ದೇಶ್ವರಸ್ವಾಮಿ, ಶ್ರೀವೀರಭದ್ರೇಶ್ವರ ಸ್ವಾಮಿ, ಉದ್ಭವಲಿಂಗುವಿಗೆ ನಾನಾ ಪುಷ್ಪಗಳಿಂದ ಮಾಡಿದ ವಿಶೇಷ ಅಲಂಕಾರ ಕಂಗೊಳಿಸಿತು. ಚಳಿ ಲೆಕ್ಕಿಸದೆ ಲಕ್ಷಕ್ಕೂ ಅಧಿಕ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ, ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಆಗಮಿಸುವ ಭಕ್ತರು ವಿಶೇಷವಾಗಿ ಬಟ್ಟೆಯಲ್ಲಿ ತಯಾರಿಸಿದ ದೀಪಗಳನ್ನು ಹಚ್ಚುವ ಮೂಲಕ ಹರಕೆ ತೀರಿಸಿದರು. ಸೋಮವಾರ ತಡರಾತ್ರಿ ಶ್ರೀಕರಿಸಿದ್ದೇಶ್ವರಸ್ವಾಮಿ, ಆಂಜನೇಯಸ್ವಾಮಿ, ಕರಿಯಮ್ಮ ದೇವಿ ಪಲ್ಲಕ್ಕಿ (Kartika) ಉತ್ಸವದೊಂದಿಗೆ ಬೆಟ್ಟದಿಂದ ಕೆಳಗೆ ಕರೆತರಲಾಯಿತು.
ಇದನ್ನೂ ಓದಿ: ಡ್ರೋನ್ ಆಧಾರಿತ ಫೋಟೋಗ್ರಫಿ ತರಬೇತಿಗೆ ಅರ್ಜಿ ಹಾಕಲು ಮತ್ತೊಂದು ಅವಕಾಶ | Drone videography
ಉತ್ಸವದೊಂದಿಗೆ ಕಲ್ಲೇಶ್ವರಸ್ವಾಮಿ ದೇವಾಲಯ ಮುಂಭಾಗದ ಗದ್ದುಗೆಯಲ್ಲಿ ಸ್ವಾಮಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
