Chitradurga news|nammajana.com|18-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ-ದಾವಣಗೆರೆ ಹೆದ್ದಾರಿ ರಸ್ತೆಯ ಪಕ್ಕದಲ್ಲಿರುವ ಕಾತ್ರಾಳ್ ಕೆರೆ ಕೋಡಿ ಬಿದ್ದು ಮೈ ತುಂಬಿ (Katral Lake) ಹರಿಯುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭರಮಸಾಗರ ಏತ ನೀರಾವರಿ ಯೋಜನೆಯಲ್ಲಿ ಪೈಪ್ ಮೂಲಕ ಕೆರೆ ತುಂಬಿಸುವ ಯೋಜನೆಗೆ ಕಾತ್ರಾಳ್ ಕೆರೆ ಒಳಪಟ್ಟಿದ್ದು. ಅಲ್ಪ ಪ್ರಮಾಣದಲ್ಲಿ (Katral Lake) ಪೈಪ್ ಲೈಮ್ ಮೂಲಕ ನೀರು ಹರಿದರು. ಈ ಬಾರಿ ಉತ್ತಮ ಮಳೆಯಿಂದ ಕಾತ್ರಾಳ್ ಕೆರೆ ತುಂಬಿ ಹರಿಯುತ್ತಿದೆ.

ಇದನ್ನೂ ಓದಿ: ವಾಣಿ ವಿಲಾಸ ಸಾಗರದ ನೀರಿನ ಮಟ್ಟದಲ್ಲಿ ಭರ್ಜರಿ ಹೆಚ್ಚಳ, ಎಷ್ಟಿದೆ ನೀರಿನ ಮಟ್ಟ | Vani Vilasa Sagara Dam
ಲಕ್ಷಾಂತರ ರೈತರಿಗೆ ಆಸರೆಯಾಗಿರುವ ಕಾತ್ರಾಳ್ ಕೆರೆಗೆ ಕಳೆದ ವರ್ಷ ಸಿರಿಗೆರೆ ಶ್ರೀ ಗಳು ನೀರು ಹರಿಸಿ ಬಾಗಿನ ಸಹ ಅರ್ಪಿಸಿದ್ದರು. ಶನಿವಾರ ರಾತ್ರಿಯಿಂದ ಕೆರೆ ತುಂಬಿದ್ದು ಜನರ ಕಣ್ಮನ ಸೆಳೆಯುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಕೋಡಿ ಬಿದ್ದು ಹರಿಯುತ್ತಿರುವ ನೀರನ್ನು ವಿಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಬಾರಿ ಬಾಗಿನ ಅರ್ಪಿಸಿದ್ದ ಸಿರಿಗೆರೆ ಶ್ರೀ ಗಳು ಹೇಳಿದ್ದೇನು:
ಶ್ರೀಗಳು, ಕೆರೆಗಳು ತುಂಬಿದರೆ ಸಂಪತ್ತು ತಾನಾಗಿಯೇ ಹರಿದು ಬರುತ್ತದೆ, ಕೃಷಿಗೆ,ಪಶು, ಪಕ್ಷಿ ಹೀಗೆ ಎಲ್ಲ ರಿಗೂ ನೀರು ಬೇಕು. ಹಿಂದೆ ರಾಜಮಹಾರಾಜರು ಕೆರೆಕಟ್ಟೆಗಳ ಮಹತ್ವವನ್ನು ಅರಿತು ಕೆರೆಗಳ ನಿರ್ಮಾಣಕ್ಕೆ ಒತ್ತು ಕೊಟ್ಟಿದ್ದರು. ಭರಮಣ್ಣ ನಾಯಕರು ಕಟ್ಟಿಸಿದ್ದ ಕೆರೆ ಕೂಡ ತುಂಬಿದೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಗೆ ನೂತನ SP ಆಗಿ ರಂಜಿತ್ ಕುಮಾರ್ ಬಂಡಾರು ನೇಮಕ | Ranjith Kumar Bandaru
ಕಾತ್ರಾಳ್ ಕೆರೆ ಏರಿ ಅಭಿವೃದ್ಧಿಗೆ 2 ಕೋಟಿ ರೂ.ವೆಚ್ಚದ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದ ಶ್ರೀ (Katral Lake) ಗಳು,ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಯ 43 ಕೆರೆಗಳ ಇತಿಹಾಸವನ್ನು ಶಾಸ್ತ್ರೀಯವಾಗಿ ದಾಖಲಿಸುವ ಕೆಲಸವಾಗಬೇಕಿದೆ ಎಂದಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252