
Chitradurga news|nammajana.com|29-6-2024
ನಮ್ಮಜನ.ಕಾಂ ಚಿತ್ರದುರ್ಗ: ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಸಹೋದರ ಹಾಗೂ ಚಳ್ಳಕೆರೆ ನಗರಸಭೆ ಸದಸ್ಯ ಕೆ.ಸಿ.ನಾಗರಾಜ್ ಅವರು ನಗರಸಭೆ ಸದಸ್ಯತ್ವದ (KC Nagaraj Resignation) ರಾಜೀನಾಮೆ ಪತ್ರವನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಧರ್ಮಪುರ ಕೆರೆಗೆ ಪ್ರಾಯೋಗಿಕವಾಗಿ ಹರಿದ ನೀರು | Water flowed into Dharmapura Lake.

ನಗರಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಸಿ.ನಾಗರಾಜ್ ಅವರು ನಮ್ಮಜನ.ಕಾಂ, ಜೊತೆ ಮಾತನಾಡಿ ನಾನು ಜೆಡಿಎಸ್ ಪಕ್ಷದಿಂದ ನಗರಸಭೆ ಸದಸ್ಯನಾಗಿ ಗೆಲುವು ಸಾಧಿಸಿದ್ದೇನು. ಆದರೆ ಬದಲಾದ ರಾಜಕೀಯದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನನ್ನನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯ (KC Nagaraj Resignation) ಸದಸ್ಯನಾಗಿ ನೇಮಕ ಮಾಡಿತು, ಆದ್ದರಿಂದ ಜೆಡಿಎಸ್ ನಗರಸಭೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಇದರಲ್ಲಿ ಯಾರ ಒತ್ತಡವಿಲ್ಲ ಎಂದು ಕೆ.ಸಿ.ನಾಗರಾಜ್ ಸ್ಪಷ್ಟಪಡಿಸಿದರು.
