
Chitradurga news|nammajana.com|25-03-2025
ನಮ್ಮಜನ.ಕಾಂ, ಚಿತ್ರದುರ್ಗ: ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ (KDP meeting) ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಡಿ.ಸುಧಾಕರ್. ಅವರು ಮಾತನಾಡಿದರು.
ತೀವ್ರ ಅಸಮಾಧಾನ : (KDP meeting)
ಚಿತ್ರದುರ್ಗ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತೀವ್ರ ಅಸಮಧಾನ (KDP meeting) ವ್ಯಕ್ತಪಡಿಸಿದರು.
ಎಸ್.ಸಿ ಹಾಗೂ ಎಸ್.ಟಿ ಜನರು ಹೆಚ್ಚಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿಲ್ಲ. ಅಧಿಕಾರಿಗಳಿಗೆ ಬದ್ದತೆ ಇಲ್ಲದಂತಾಗಿದೆ. ಕಠಿಣ ಪರಿಶ್ರಮ ವಹಿಸಿ ಕೆಲಸ (KDP meeting) ಮಾಡಲು ಇಷ್ಟವಿರದ ಅಧಿಕಾರಿಗಳು ಕಡ್ಡಾಯ ರಜೆಯ ಮೇಲೆ ತೆರಳಿ, ಇಲ್ಲವಾದರೆ ವರ್ಗಾವಣೆ (KDP meeting) ತೆಗೆದುಕೊಂಡು ಜಿಲ್ಲೆಯಿಂದ ನಿರ್ಗಮಿಸಿ ಎಂದು ಸಚಿವ ಡಿ.ಸುಧಾಕರ್ ಖಡಕ್ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಜೂನ್ ಟಾರ್ಗೆಟ್
ಜಿ.ಪಂ ಕೆಡಿಪಿ ಸಭೆಯಲ್ಲಿ ಸಚಿವ ಸುಧಾಕರ್ ಅವರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಜೊತೆಗೆ ಜೂನ್ ತಿಂಗಳಲ್ಲಿ ಎಲ್ಲಾರನ್ನೂ ಬದಲಾಯಿಸುತ್ತೇನೆ ಎಂದು ಹೇಳಿರುವುದು ಅಧಿಕಾರಿ ವರ್ಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೂನ ತಿಂಗಳಲ್ಲಿ ಜನರಲ್ ಟ್ರಾನ್ಸಫರ್ ಸಹ ಇದ್ದು ಮಿನಿಸ್ಟರ್ ಯಾವ ಯಾವ ಇಲಾಖೆ ಅಧಿಕಾರಿಗಳಿಗಳನ್ನು ಎತ್ತಂಗಡಿ ಮಾಡುತ್ಯಾರೆಯೇ ಅಥವಾ ಸುಮ್ಮನೆ ಆಗುತ್ತರಾ ಎಂಬುದು ಜೂನ್, ಜುಲೈ ತಿಂಗಳವರೆಗೆ ಕಾಯಬೇಕಿದೆ.
ಸಭೆಯಲ್ಲಿ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
