
Chitradurga news |nammajana.com|14-9-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಜ್ಞಾನ ವಿಕಾಸ ಶಾಲೆ ಬಳಿ ಹಾಡು ಹಗಲೇ ಪಿಯುಸಿ (Kidnapping) ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ ನಡೆಸಿದ್ದಾರೆ. 6 ಜನರ ತಂಡದಿಂದ ಅಪ್ರಾಪ್ತ ಮುಸ್ಲಿಂ ಬಾಲಕಿ ಅಪಹರಣಕ್ಕೆ ಯತ್ನ ನಡೆಸಿದ್ದು ವಿಫಲವಾಗಿದೆ.
ಅಗಸನಕಲ್ಲು ನಿವಾಸಿ 17 ವರ್ಷದ ಬಾಲಕಿ ಅಪಹರಣಕ್ಕೆ ಯತ್ನ ನಡೆಸಿದ್ದು ಅಪಹರಣ ವೇಳೆ ಬಾಲಕಿ ಕಿರುಚಿದ್ದರಿಂದ ಬಿಟ್ಟು ಪರಾರಿಯಾಗಿದ್ದಾರೆ.

ಕಾರು, ಬೈಕ್ ನಲ್ಲಿ ಬಂದಿದ್ದ 6 ಜನ ಕಿರಾತಕರಿಂದ ಕಿಡ್ನ್ಯಾಪ್ ಯತ್ನ ಮಾಡಿದ್ದು ಸ್ಥಳೀಯರು ಇಬ್ಬರನ್ನು ಹಿಡಿದು ಥಳಿಸಿ (Kidnapping) ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಾರ್ಥ, ಆನಂದ ಬಂಧಿತ ಬಂದಿತರು ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ. (Kidnapping) ಅಪಹರಣಕ್ಕೆ ತಂದಿದ್ದ ಕಾರು ವಶಕ್ಕೆ ಪಡೆದ ಕೋಟೆ ಪೋಲಿಸ್ ನವರು ವಶಕ್ಕೆ ಪಡೆದಿದ್ದಾರೆ.
ನೊಂದ ಬಾಲಕಿಯಿಂದ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಬೇಟಿ, ಪರಿಶೀಲನೆ ನಡೆಸಿದ್ದು ಆರೋಪಿಗಳನ್ನ ಸ್ಥಳಕ್ಕೆ ಕರೆದೊಯ್ದು ಸ್ಪಾಟ್ ಮಹಜರ್ ಮಾಡಲಾಗಿದೆ.
ಇದನ್ನೂ ಓದಿ: ಪರಿಸರ ಜಾಗೃತಿ ಹಾಗೂ ನೈಸರ್ಗಿಕ ಸಂಪತ್ತು ರಕ್ಷಣೆಗಾಗಿ ಕಡಪದಿಂದ ಗೋವಾಕ್ಕೆ ಸೈಕಲ್ ಜಾಥ | Cycle procession
ಮಹಿಳಾ ಠಾಣೆಗೆ ಬಂದಿತ ಆರೋಪಿಗಳನ್ನ ಮಹಿಳಾ ಠಾಣೆಗೆ ಕರೆತಂದ ಪೊಲೀಸರು ಮಹಿಳಾ ಠಾಣೆಗೆಆಗಮಿಸಿದ ಎಸ್ಪಿ ರಂಜೀತ ಕುಮಾರ್ ಬಂಡಾರು ಅವರು ಸಮ್ಮುಖದಲ್ಲಿ ಆರೋಪಿಳ ತೀವ್ರ ವಿಚಾರಣೆ ನಡೆಸುತ್ತಿದ್ದು ಘಟನೆ ಸಂಬಂಧ ಎಸ್ಪಿ ರಂಜೀತ್ ಕುಮಾರ್ ಬಂಡಾರು ಎಳೆ ಎಳೆಯಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
