Chitradurga News | Nammajana.com | 09-07-2025
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಕೆಎಸ್‌ಆರ್‌ಟಿಸಿ(KSRTC) ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮನ್ನೇಕೋಟೆಯ ಜಿ.ಪರಮೇಶ್ವರ(36) ಖಾಸಗಿ ಜಮೀನಿನ ಹೊಂಗೆ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ಇದನ್ನೂ ಓದಿ: ಜುಲೈ 12ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಜಿಲ್ಲಾ ಪ್ರವಾಸ
ಜುಲೈ 7ರ ಸೋಮವಾರ ಚಳ್ಳಕೆರೆಗೆ ಬಂದವನು ಊರಿಗೆ ವಾಪಾಸ್ ಹೋಗಿರಲಿಲ್ಲ. ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದಿದೆ.
ಮೃತ ಪತ್ನಿ ರಕ್ಷಿತ(KSRTC) ಈ ಬಗ್ಗೆ ದೂರು ನೀಡಿದ್ದು, ನನ್ನ ಗಂಡನ ಸಾವಿನಲ್ಲಿ ಅನುಮಾನವಿದ್ದು, ಪಿಎಸ್‌ಐ ಧರೆಪ್ಪಬಾಳಪ್ಪ ದೊಡ್ಡಮನಿ ಪ್ರಕರಣ ದಾಖಲಿಸಿದ್ಧಾರೆ.
ಇದನ್ನೂ ಓದಿ: ಚಿತ್ರದುರ್ಗ | ಕರ್ತವ್ಯ ಲೋಪ ಇಬ್ಬರು PDO ಅಮಾನತು
ಘಟನಾ ಸ್ಥಳಕ್ಕೆ ಠಾಣಾ ಇನ್ಸ್ಪೆಕ್ಟರ್ ಕೆ.ಕುಮಾರ್, ಕೆಎಸ್‌ಆರ್‌ಟಿಸಿ ಡಿಸಿ ವೆಂಕಟೇಶ್, ಡಿಟಿಒ ಬಸವರಾಜು, ನಾಗರಾಜೇಗೌಡ, ನಿರಂಜನ್‌ಮೂರ್ತಿ, ಪ್ರಭಾರ ಡಿಪೋ ಮ್ಯಾನೇಜರ್ ಶಶಿಧರ ಮುಂತಾದವರು ಭೇಟಿ ನೀಡಿದ್ದರು.
