
Chitradurga news|nammajana.com|29-12-2024
ನಮ್ಮಜನ.ಕಾಂ, ಚಳ್ಳಕೆರೆ: ಮನುಷ್ಯ ಸಮಾಜದ ಸೂಕ್ಷ್ಮತೆಯಲ್ಲಿ ವಿಶ್ವ ಮಾನವರಾಗಬೇಕೆಂದು ಸಾಹಿತ್ಯದ ಮೂಲಕ ಜಾಗೃತಿ ಹೇಳಿರುವ ಕುವೆಂಪು ಬಸವಾದಿ ಶರಣ ಸಾಲಲ್ಲಿ ನಿಲ್ಲುವ (Kuvempu) ಮೌಲ್ಯತೆ ಇದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಕೊರ್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ ವತಿಯಿಂದ (Kuvempu) ಹಮ್ಮಿಕೊಂಡದ್ದ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಅವರಿಗೆ ವಿದ್ಯಾಗುರುಗಳಾಗಿದ್ದ ತಳುಕಿನ ವೆಂಕಣ್ಣಯ್ಯ ನೆಲೆಯಲ್ಲಿ ಶಿಷ್ಯ ಕುವೆಂಪು ಅವರ ಸಾಹಿತ್ಯ ಕುರಿತು ಮಾತನಾಡುವುದು ಒಂದು ಇತಿಹಾಸ ಅನಿಸುತ್ತದೆ. ಸಮಾಜದ ಮಹನೀಯರ ಜಯಂತಿ ಕಾರ್ಯಕ್ರಮಗಳು ಕೇವಲ ಸಾಂಕೇತಿಕ ಆಗಬಾರದು.
ಬಸವಣ್ಣರ ವಚನ,ಕುವೆಂಪು ಅವರ ಕವನ, ಕನಕದಾಸರ ಕೀರ್ತನೆ, ಡಿ.ವಿ.ಗುಂಡಪ್ಪರ ತತ್ವಗಳನ್ನು ಮನನ ಮಾಡಿಕೊಂಡು ಅಭಿವ್ಯಕ್ತ ಪಡಿಸಬೇಕು. ಸಾಹಿತ್ಯ ವಿಚಾರವನ್ನು ಮನ ಮತ್ತು ಮನೆಗಳಿಗೆ ಕೊಂಡೊಯ್ಯವ ಕೆಲಸ ಆಗಬೇಕು.
ಮನೆಯಲ್ಲಿ ಕವಿಗಳ ಬರಹ ಕುರಿತು ಮಾತನಾಡುವ ಸಂಸ್ಕೃತಿ ಬೆಳೆಯಬೇಕು. ಗಂಡು ಬೆಟ್ಟಿದ ಚಿತ್ರದುರ್ಗ ವೀರ ಶೌರ್ಯವನ್ನು ದುರ್ಗಾಸ್ತಮಾನ ಕೃತಿಯಲ್ಲಿ ತರಾಸು ದಾಖಲೆ (Kuvempu) ಮಾಡಿದ್ದಾರೆ.ಆದರೆ, ಎಷ್ಟು ಮನೆಗಳ ಆ ಕೃತಿ ಕಾಣಲು ಸಾಧ್ಯ. ಇಂತಹ ನಿರ್ಲಕ್ಷ್ಯ ಸಂಬಂಧದಿಂದ ಸ್ಥಳೀಯ ವಿಚಾರ ಸಂಪತ್ತುನಿಂದ ದೂರವಾಗುತ್ತೇವೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಕೆಲ ಭೀಕರ ಕೃತ್ಯಗಳಿಂದ ಕಲುಷಿತವಾಗುತ್ತಿರುವ ಸಮಾಜಕ್ಕೆ ಸಾಹಿತ್ಯ ಚಿಂತನೆ ಅಗತ್ಯ ಇದೆ. ಸರ್ವಜನಾಂಗದ ಶಾಂತಿಯ (Kuvempu) ತೋಟದಂತೆ ಸಮಾಜವನ್ನು ನೋಡಬೇಕಿದೆ ಎಂದು ಬಯಸಿದ ಮಹನೀಯರ ಚಿಂತನೆಯನ್ನು ಅನಾವರಣ ಮಾಡುವ ಜಾಗೃತಿ ಬೆಳೆಯಬೇಕಿದೆ ಎಂದು ಹೇಳಿದರು.
ಬುದ್ದ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಪ್ರಾದೇಶಿಕವಾದ ಜನಜೀವನದ ಸಾಹಿತ್ಯ ರಚನೆಯಲ್ಲಿ ತಳಕು ಮತ್ತು ಬೆಳೆಗೆರೆ ಮನೆತನಗಳ ಸೇವೆ ಅನನ್ಯವಾಗಿದೆ. (Kuvempu) ವಿಶ್ವಮಾನವನಾಗಿ ಹುಟ್ಟುವ ಮಗು, ಅಲ್ಪನಾಗುವ ಪರಿಸ್ಥಿತಿಗೆ ಸಮಾಜದ ವ್ಯವಸ್ಥೆ ಕಾರಣವಾಗುತ್ತಿದೆ. ಕುವೆಂಪು ಬರಹ ಸಮಾನತೆಯ ರೂಪಕವಾಗಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿದರು.
ಇದನ್ನೂ ಓದಿ: ವಿ ವಿ ಸಾಗರ ತುಂಬಲು ಹತ್ತು ದಿನ ಬಾಕಿ | ಎಷ್ಟಿದೆ ಇಂದಿನ ನೀರಿನಮಟ್ಟ | Vani Vilasa Sagara Dam
ಈ ಸಂದರ್ಭದಲ್ಲಿ ಕೆಪಿಸಿಸಿ ಕರುಶಲ ವಿಭಾಗ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕವಯತ್ರಿ ಶಬ್ರಿನ ಮಹಮ್ಮದ್ ಅಲಿ, ಬಿ. ಫರಿದ್ ಖಾನ್, ಬನಶ್ರೀ ಮಂಜುಳಮ್ಮ, ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ,ಗೋಪನಹಳ್ಳಿ ಶಿವಣ್ಣ, ಬೆಳೆಗೆರೆ ಸುರೇಶ್,ಎಚ್. ಲಂಕಪ್ಪ,ಜಾಲಿ ಮಂಜು, ಆರ್. ದ್ಯಾಮರಾಜ್, ಒನಕೆ ಒಬವ್ವ ವೇದಿಕೆ ಅಧ್ಯಕ್ಷ ಮಾರುತಿ, ಎನ್. ಕುಶ, ದುರ್ಗಾವರ ತಿಪ್ಪೇಸ್ವಾಮಿ, ರವಿವರ್ಮ, ಮುತ್ತುರಾಜ್ ಮತ್ತಿತರರಿದ್ದರು.
