Chitradurga news|nammajana.com|23-10-2024
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ಐತಿಹಾಸಿಕ ಕರೇಕಲ್ ಕೆರೆಯು ಕಳೆದ 56 ವರ್ಷಗಳ ನಂತರ ತುಂಬಿರುವ ಕರೇಕಲ್ ಕೆರೆ ಕೋಡಿ ಬೀಳುವ ಸಾಧ್ಯತೆಗಿಂದ ಕೆರೆ ಹೊಡೆಯುವ (Lake Eri Porha) ಬೀತಿಯನ್ನೇ ಹೆಚ್ಚು ಮಾಡಿದೆ.
ಕೆರೆ ಈಗಾಗಲೇ ಸಂಪೂರ್ಣ ಭರ್ತಿಯಾಗಿದ್ದು, ಕೆರೆಯ ಏರಿಯಲ್ಲಿ ಎರಡು ಕಡೆ ರಂಧ್ರ ಉಂಟಾಗಿ ಕೆರೆಯ ನೀರು ರಂಧ್ರದ ಮೂಲಕ ರಭಸವಾಗಿ ಹರಿಯುತ್ತಿದೆ. ಕೆರೆ ಏರಿಗೆ ದಕ್ಕೆಯಾಗಲಿದೆ ಎಂಬ ಭೀತಿಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಕೋಟ್ಯಾಂತರ ವೆಚ್ಚದಲ್ಲಿ ಕೆರೆ ಏರಿಯನ್ನು ದುರಸ್ಥಿ ಮಾಡಲಾಗಿದ್ದು, ಪ್ರಸ್ತುತ ಈ ವರ್ಷದ ಮಳೆಯಿಂದ ಕರೇಕಲ್ ಕೆರೆ ತುಂಬಿ ಕೋಡಿಬೀಳುವ ಹಂತದಲ್ಲಿದ್ದು ಕೋಡಿಯ ಸ್ಥಳವನ್ನು ಎತ್ತರಗೊಳಿಸಿದ (Lake Eri Porha) ಹಿನ್ನೆಲೆಯಲ್ಲಿ ಕೋಡಿ ನೀರು ಹರಿಯಲು ತೊಂದರೆ ಉಂಟಾಗಿ ಕೆರೆ ಏರಿಯ ಮೇಲೆ ನೀರು ಹರಿಯುವ ಸಂಭವ ಉಂಟಾಗಿ ಇದು ಅಪಾಯವನ್ನು ಉಂಟು ಮಾಡಲಿದೆ.
ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಕೋಡಿ ನೀರು ಹರಿಯುವ ಸ್ಥಳವನ್ನು ಡ್ರಿಲಿಂಗ್ ಸಹಾಯದಿಂದ ಮೂರು ಅಡಿಯಷ್ಟು ಆಳತೆಗೆದು ನೀರುನ್ನು ಹರಿಬಿಡವ ಸಾಹಸಕ್ಕೆ ಕೈಹಾಕಿದೆ.
ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ:
ಕರೇಕಲ್ ಕೆರೆ ರಂಧ್ರ ಹಾಗೂ ಕೋಡಿಯ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ (Lake Eri Porha) ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Adike Rate: ಚನ್ನಗಿರಿ ಅಡಿಕೆ ರೇಟ್ | ಎಲ್ಲೆಲ್ಲಿ ಎಷ್ಟಿದೆ ಇಂದಿನ ಅಡಿಕೆ ಧಾರಣೆ
ಸಣ್ಣನೀರಾವರಿ ಇಲಾಖೆ ಅಧಿಕಾರಿ ಅಣ್ಣಪ್ಪ, ತಹಶೀಲ್ದಾರ್ ರೇಹಾನ್‌ಪಾಷ, ಪೌರಾಯುಕ್ತ ಜಗರೆಡ್ಡಿ, ನಗರಸಭೆ ಎಇಇ ಕೆ.ವಿನಯ್, ನಗರಸಭಾ ಸದಸ್ಯ ಮಲ್ಲಿಕಾರ್ಜುನ್, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮಲೆಕ್ಕಿಗ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252