Chitradurga news | nammajana.com | 03-08-2025
ನಮ್ಮಜನ.ಕಾಂ, ಚಿತ್ರದುರ್ಗ: ಶತಮಾನಕ್ಕೂ(kadu kayuva mara) ಹೆಚ್ಚು ಇತಿಹಾಸವುಳ್ಳ ಕನ್ನಡದ ಘನ ಕಥಾ ಪರಂಪರೆಯ ಅರಿವಿನ ಜೊತೆಗೆ ಮನಸ್ಸಿಟ್ಟು ಓದಿದವರು ಮಹತ್ವದ ಕೃತಿಗಳನ್ನು ನೀಡಬಲ್ಲರು ಎಂದು ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ಇದನ್ನೂ ಓದಿ: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ

ನಗರದ ಪತ್ರಿಕಾಭವನದ ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಲಂಕೇಶ್ ವಿಚಾರ ವೇದಿಕೆ, ಅಂಬೇಡ್ಕರ್ ವಿಚಾರ ವೇದಿಕೆ, ಮೈತ್ರಿ ಪುಸ್ತಕ ಮನೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಡೇಕುಂಟೆ ಮಂಜುನಾಥ್ ಅವರ “ಕಾಡು ಕಾಯುವ ಮರ” ಕಥಾ ಸಂಕಲನದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಸಾಹಿತ್ಯ ಚಳುವಳಿಗಳಲ್ಲೂ ಬಹಳ ಪ್ರಸಿದ್ಧವಾದ ಪ್ರಾಕಾರ ಇದ್ದರೆ ಅದು ಕಥಾ ಪರಂಪರೆ. ಪ್ರಗತಿಶೀಲರ ನಿರಂಜನ, ಆನಕೃ ಇರಬಹುದು. ನವೋದಯದ ಮಾಸ್ತಿ, ಕುವೆಂಪು ಇರಬಹುದು. ಲಂಕೇಶ್, ಅನಂತಮೂರ್ತಿ ಇರಬಹುದು, ದಲಿತ, ಬಂಡಾಯದ ದೇವನೂರು ಮಹಾದೇವ ಇರಬಹುದು. ಕನ್ನಡದ ಮೊದಲ ಕತೆಗಾರ್ತಿ ಕೊಡಗಿನ ಗೌರಮ್ಮ ಇವರು ಕನ್ನಡದ ಕಥಾ ಸಾಹಿತ್ಯದ ಮೈಲಿಗಲ್ಲುಗಳು. ಇವುಗಳನ್ನು ಹಾದುಹೋದವರು ಸೃಜನಶೀಲ ಬರಹಗಳನ್ನು ನೀಡಬಲ್ಲರು ಎಂದರು.
ಜಡೇಕುಂಟೆ ಮಂಜುನಾಥ್ ಸಾಮಾಜಿಕ ಕಳಕಳಿಯ ಬರಹಗಳನ್ನು ಮುಂದುವೆಸಲಿ: ಟಿ.ರಘುಮೂರ್ತಿ
ಬಯಲುಸೀಮೆ ಚಳ್ಳಕೆರೆಯಲ್ಲಿ ತುಂಬಾ ಜನ ಬರಹಗಾರರು ಇದ್ದಾರೆ. ಗ್ರಾಮೀಣ ಹಿನ್ನೆಲೆಯ ಅನುಭವವನ್ನು ಈ ಕಥಾ ಸಂಕಲನದಲ್ಲಿ ಜಡೇಕುಂಟೆ ಮಂಜುನಾಥ್ ದಾಖಲಿಸಿದ್ದಾರೆ. ಪತ್ರಕರ್ತರಾಗಿ ದೀರ್ಘಕಾಲದ ಒಡನಾಟ ಇದೆ. ಅವರು ಹೀಗೆ ಸಾಮಾಜಿಕ ಕಳಕಳಿಯಿಂದ ತಮ್ಮ ಬರಹಗಳನ್ನು ಮುಂದುವರಿಸಲಿ” ಎಂದರು.
ಜಾತ್ಯತೀತ ನೆಲೆಗಟ್ಟಿನಲ್ಲಿ ನಾವು ಬದುಕುವಂತೆ ಆಗಬೇಕಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಬರಹಗಾರರ ಸಂಖ್ಯೆ ಕಡಿಮೆಯಾಗಿದೆ. ನಾನು ಸಹ ಕಾರ್ಯಾಂಗದಿಂದ ಸಮಾಜ ಸೇವೆಗಾಗಿ ಬಂದು ಜನರ ಆಶೀರ್ವಾದದಿಂದ 3 ಬಾರಿ ಶಾಸಕನಾಗಿ ಚಳ್ಳಕೆರೆ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದು ಇದಕ್ಕೆ ಜನರ ಅಭಿಮಾನ ಪ್ರೀತಿ ಕಾರಣವಾಗಿದೆ. ಅಂತಹ ನೆಲದಲ್ಲಿ ಜಡೇಕುಂಟೆ ಮಂಜುನಾಥ್ ಉತ್ತಮ ಕ್ರೀಯಾಶೀಲರಾಗಿದ್ದು 2009 ರಿಂದ ಮಂಜುನಾಥ್ ಸಹೋದರನಂತೆ ಜೊತೆಯಾಗಿ ನಮ್ಮೊಂದಿಗಿದ್ದು ಅವರ ಗ್ರಾಮೀಣ ಸೊಗಡಿನ ಪುಸ್ತಕಗಳು ನಿರಂತವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಮಾಸ್ತಿಯವರ ವೆಂಕಟಿಗ ಹೆಂಡತಿ(kadu kayuva mara) ಮರೆಯಲಾಗದ ಕತೆ, ಇದರ ಕಥಾ ಹೂರಣ, ಕತೆಯ ನಿರೂಪಣೆ, ಕತೆಯಲ್ಲಿ ಮಾಡುವ ಪ್ರಯೋಗ ಗಮನಿಸಿದಾಗ ಮಾಸ್ತಿ ಎಂತಹ ಮಾಸ್ಟರ್ ರೈಟರ್ ಎಂಬುದು ಅರಿವಿಗೆ ಬರುತ್ತದೆ. ಲಂಕೇಶರ ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ ಮನಸ್ಸಿನಲ್ಲಿ ಅನೇಕ ತಲ್ಲಣಗಳನ್ನು ಉಂಟು ಮಾಡುವ ಕತೆ. ಅನಂತಮೂರ್ತಿಯವರ ಕಾರ್ತೀಕ, ದೇವನೂರು ಮಹಾದೇವ ಅವರ ಅಮಾಸ, ಬೆಸರಗಹಳ್ಳಿ ರಾಮಣ್ಣ ಅವರ ಗಾಂಧಿಯಂತ ಕತೆಗಳು ನಮ್ಮ ಮನಸ್ಸಿನ ಧಾರಣಾಶಕ್ತಿಯನ್ನು ಹೆಚ್ಚಿಸುವ ಕತೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ
ಸಮೂಹ ವಿವೇಕವನ್ನು ನಿರಾಕರಿಸುವ ಕಾಲಘಟ್ಟದಲ್ಲಿರುವ ನಮಗೆ ಸಮೂಹಗಳನ್ನು ಒಗ್ಗೂಡಿಸುವ ಕ್ರಿಯಾಶೀಲತೆ ನಮಗೆ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಜಡೇಕುಂಟೆ ಮಂಜುನಾಥ್‌ರ ಅಪ್ಪನ ತಪ್ಪಡಿ, ದೇಗುಲದ ಗಂಟೆ ಮೊಳಗಲಿಲ್ಲ ಈ ಕತೆಗಳನ್ನು ಜಾತಿ ವ್ಯವಸ್ಥೆಯ ಬಗ್ಗೆ ಪ್ರತಿರೋಧದ, ಜಿಗುಪ್ಸೆಯ ಮನೋಭಾವ ವ್ಯಕ್ತವಾಗಿದೆ.
ತಾರತಮ್ಯ ಭಾವದ ಬಗ್ಗೆ ಸಿಟ್ಟು, ಇದು ನಾಶ ಆಗಬೇಕು ಎನ್ನುವ ಇಚ್ಛೆ ಇದೆ. ಪ್ರಜಾಪ್ರಭುತ್ವವನ್ನು ಪ್ರೀತಿಸುವ, ಜಾತ್ಯಾತೀತವಾಗಿರಬೇಕು ಎಂದು ಬಯಸುವ, ಸಂವಿಧಾನವನ್ನು ಗೌರವಿಸುವವರಿಗೆ ಈ ಜಾತಿಯತೆ ಹೋಗಬೇಕು ಎನ್ನುವ ಮೂಲಭೂತ ಬಯಕೆ ಇರಬೇಕು. ಇಂತಹವರು ಮಾತ್ರ ಎಲ್ಲರಿಗೂ ತಟ್ಟುವ ಬರಹಗಳನ್ನು ನೀಡಬಲ್ಲರು. ಸಮೂಹವನ್ನು ಸ್ಪರ್ಶಿಸಬಲ್ಲರು. ಜಡೇಕುಂಟೆ ಮಂಜುನಾಥ್‌ರ ಕತೆಗಳನ್ನು ಈ ನೆಲೆಯಲ್ಲಿ ಗಮನಿಸಬಹುದಾಗಿದೆ ಎಂದರು.
ಕಥಾ ಸಂಕಲನ ಲೋಕಾರ್ಪಣೆ(kadu kayuva mara) ಮಾಡಿ ಮಾತನಾಡಿದ ಪತ್ರಕರ್ತ ಜಿ.ಎನ್.ಮೋಹನ್” ಇಂದು ಏನು ಬರೆಯಬೇಕು ಎಂಬುದಕ್ಕಿಂತ ಹೇಗೆ ಬರೆಯಬೇಕು ಎಂಬುದೇ ಮುಖ್ಯವಾಗಿದೆ. ಈ ಪ್ರಕ್ರಿಯೆ ಬದಲಾಗಬೇಕು. ಪತ್ರಕರ್ತರು ಕತೆಗಾರರಾದಾಗ ಕತೆಗಳ ಸ್ವರೂಪ, ಸಾಮಾಜಿಕತೆ ಮತ್ತು ಪರಿಭಾಷೆ ಹೆಚ್ಚು ತೀವ್ರವಾಗುತ್ತದೆ. ಜಡೇಕುಂಟೆ ಮಂಜುನಾಥ್‌ರವರ ಕಥಾಲೋಕ ತುಂಬಾ ವಿಶಿಷ್ಟವಾದದ್ದು. ಆರಂಭದಿಂದಲೂ ಅವರ ಬರಹಗಳನ್ನು ಗಮನಿಸಿದ್ದೇನೆ. ಅವರಿಂದ ಕನ್ನಡದ ಬರಹ ಪರಂಪರೆಗೆ ಇನ್ನಷ್ಟು ಮೌಲಿಕ ಕೊಡುಗೆ ನಿರೀಕ್ಷಿಸಬಹುದು” ಎಂದರು.
ಇದನ್ನೂ ಓದಿ: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಲೇಖಕಿ ಪಿ.ಭಾರತೀದೇವಿ ಕಥಾ ಸಂಕಲನದ ಕುರಿತು ಮಾತನಾಡಿ”ಜಡೇಕುಂಟೆ ಮಂಜುನಾಥ್ ನಿಸ್ಸಂದೇಹವಾಗಿ ಸಮರ್ಥ ಕತೆಗಾರ. ಅವರ ಕತೆಗಳಲ್ಲಿ ಕಟ್ಟಿಕೊಡುವ ಸಾಮಾಜಿಕ ಪರಿಸರ, ಭಾಷೆ, ರೂಪಕಗಳು ಅನನ್ಯವಾದವುಗಳು. ಇಲ್ಲಿನ ಕತೆಗಳು ಸ್ಥಿತ್ಯಂತರವನ್ನು ಬಯಸುವ ಕತೆಗಳಾಗಿದ್ದು, ಬಯಲುಸೀಮೆಯ ಪ್ರಾದೇಶಿಕ ಸೊಗಡನ್ನು ಕತೆಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಶಕ್ತವಾದ ಸ್ತ್ರೀ ಪಾತ್ರಗಳನ್ನು ಸೃಜಿಸಿದ್ದಾರೆ. ಹಾಗೆಯೇ ಕೆಲವು ಕತೆಗಳನ್ನು ಇನ್ನಷ್ಟು ಬೆಳೆಸುವ ಸಾಧ್ಯತೆಗಳಿದ್ದವು” ಎಂದು ವಿಶ್ಲೇಷಿಸಿದರು.
ಎಸ್ಪಿ ರಂಜಿತ್ ಕುಮಾರ್ ಬಂಡಾರು,(kadu kayuva mara) ವ್ಯಂಗ್ಯ ಚಿತ್ರ ಕಲಾವಿದ ಬಿ.ಜಿ. ಗುಜ್ಜಾರಪ್ಪ, ಉಪನ್ಯಾಸಕ ಆರ್. ಮಂಜುನಾಥ್ ಕೂಡ್ಲಿಗಿ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ, ಅಧ್ಯಕ್ಷತೆ ವಹಿಸಿದ್ದ ಬಿ.ದಿನೇಶ್ ಗೌಡಗೆರೆ ಮಾತನಾಡಿದರು. ನವೀನ್ ಮಸ್ಕಲ್ ನಿರೂಪಿಸಿದರು. ವಿನಾಯಕ ತೊಡರನಾಳ್ ಸ್ವಾಗತಿಸಿದರು. ಸಿ.ರಾಜಶೇಖರ್ ಅತಿಥಿಗಳನ್ನು ಪರಿಚಯಿಸಿದರು. ದರ್ಶನ್ ಇಂಗಳದಾಳ್ ವಂದಿಸಿದರು. ವೀರೇಶ್ ಅಪ್ಪು, ಡಿ.ಒ. ಮುರಾರ್ಜಿ, ಲೆಫ್ಟಿನೆಂಟ್ ಸ.ರಾ.ಲೇಪಾಕ್ಷ ಇದ್ದರು.
ಇದನ್ನೂ ಓದಿ: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
‘ಕಾಡು ಕಾಯುವ ಮರ’ ಪುಸ್ತಕ ನನ್ನ ಸ್ನೇಹಿತರಿಗೆ ಅರ್ಪಣೆ: ಜಡೇಕುಂಟೆ ಮಂಜುನಾಥ್
ಈ ಕಾಡು ಕಾಯುವ ಮರ ಪುಸ್ತಕವನ್ನು ನಾನು ನನ್ನ ಇಬ್ಬರು ಸ್ನೇಹಿತರಿಗೆ ಅರ್ಪಿಸುತ್ತೇನೆ. ಶಿಕ್ಷಕರಾದರು ಎಲ್ಲಾವನ್ನು ಒಳಗೊಳ್ಳುವಿಕೆ ನನ್ನ ಸ್ನೇಹಿತರ ಸ್ನೇಹ ನನ್ನ ಪುಸ್ತಕ ಬರೆಯಲು ಪ್ರೇರೆಪಿಸಿತು. ಪುಸ್ತಕವನ್ನು ಬಿಡುಗಡೆ ಮಾಡಲು ನನ್ನ ಆತ್ಮೀಯರಾದ ಬೆಸರಗಹಳ್ಳಿ ರಾಮಣ್ಣ ಅವರ ಸುಪುತ್ರ ರವಿಕಾಂತೇಗೌಡ ಅವರಿಂದ ಪುಸ್ತಕ ಬಿಡುಗಡೆಗೊಳಿಸಿರುವುದು ನನಗೆ ಸಂತಸವನ್ನು ಹಿಮ್ಮಡಿಗೊಳಿಸಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252