Chitradurga news|nammajana.com|24-7-2024
ನಮ್ಮಜನ.ಕಾಂ, ಚಳ್ಳಕೆರೆ: ಬಯಲುಸೀಮೆಯ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ತುಂಗಾ ಹಿನ್ನೀರು ಯೋಜನೆ ಕಾಮಗಾರಿ ಅನುಷ್ಠಾನದಲ್ಲಿ ಚಳ್ಳಕೆರೆ ವಿಧಾನಸಭಾ (Legislative session) ಕ್ಷೇತ್ರಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದು, ಈ ಬಗ್ಗೆ ವಿಶೇಷ ಸಮಿತಿ ರಚಿಸಿ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಕ್ಷೇತ್ರದ ಶಾಸಕ, ರಾಜ್ಯ ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ವಿಧಾನಸೌಧದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ನಡೆದ ವಿಧಾನಸೌಧದ ಕಲಾಪದಲ್ಲಿ ಗಮನಸೆಳೆಯುವ ಪ್ರಶ್ನೆಯನ್ನು ಸಚಿವ ಪ್ರಿಯಾಂಕ (Legislative session) ಖರ್ಗೆರವರಲ್ಲಿ ಕೇಳಿದ ಶಾಸಕರು ಸುಮಾರು ೨೬೦೦ ಕೋಟಿ ಯೋಜನೆಯಾಗಿದ್ದು ಕಳೆದ ಎರಡು ವರ್ಷಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಮುಕ್ತಾಯ ಹಂತ ತಲುಪಿದೆ.
ವಿಜಯನಗರ ಜಲ್ಲೆಯ ಕೂಡ್ಲಿಗಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ತುರುವನೂರು, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿಗೆ ಈ ಯೋಜನೆಯಿಂದ (Legislative session) ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಿದಂತಾಗುತ್ತದೆ.ಆದರೆ ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕಾಮಗಾರಿ ಮುಂದುವರೆಸಿದ್ದಾರೆ.
ಈ ಬಗ್ಗೆ ಜಿಲ್ಲಾಪಂಚಾಯಿತಿ ಕೆಡಿಪಿ ಸಭೆಯಲ್ಲಿ ಸಹ ಪ್ರಸ್ತಾಪಿಸಿದ್ದು, ಇತ್ತೀಚೆಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಚಿವರಿಗೂ (Legislative session) ಸಹ ಮಾಹಿತಿ ನೀಡಲಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಮಾಮೂಲಿ ದಾಟಿಯಲ್ಲೇ ಉತ್ತರ ನೀಡಿದ್ದಾರೆ.
ರಸ್ತೆಯ ಕೆಲವೇ ಅಡಿಗಳ ದೂರದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸಿದೆ, ಬೇಕಾದಷ್ಟು ಜಾಗವಿದ್ದರೂ ಸಹ ರಸ್ತೆಯ ಪಕ್ಕಕ್ಕೆ ಪೈಪ್ ಅಳವಡಿಸುವ ಮೂಲಕ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಬದಲಾಗಿ ಇನ್ನೂ ಸ್ವಲ್ಪ ದೂರ (Legislative session) ಕುಡಿಯುವ ನೀರಿನ ಪೈಪ್ ಅಳವಡಿಸಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.ಆದ್ದರಿಂದ ತುರ್ತಾಗಿ ವಿಶೇಷ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಜಿಟಿಟಿಸಿ ಕೋರ್ಸ್ ಗಳಿಗೆ ನೇರ ಪ್ರವೇಶಾತಿ | GTTC Chitradurga
ಸಚಿವ ಪ್ರಿಯಾಂಕಖರ್ಗೆ ಮಾಹಿತಿ ನೀಡಿ, ಚಳ್ಳಕೆರೆ ಮತ್ತು ಪಾವಗಡ ಶಾಸಕರು ಈ ಬಗ್ಗೆ ನನ್ನೊಂದಿಗೆ ನೇರವಾಗಿ ವಿಚಾರವಾಗಿ ಆರೋಪ ಮಾಡಿದ್ಧಾರೆ. ರಸ್ತೆಯ ಪಕ್ಕದಲ್ಲೇ (Legislative session) ಕುಡಿಯುವ ನೀರಿನ ಪೈಪ್ ಅಳವಡಿಕೆಯಿಂದ ತೊಂದರೆಯಾಗುವುದು ಸಹಜ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವ ಭರವಸೆ ನೀಡಿದರು.