Chitradurga news|nammajana.com|17-8-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಾಡುಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಜನ, ಜಾನುವಾರುಗಳ (Leopard attack)ಮೇಲೆ ಅಕ್ರಮಣ ನಡೆಸುತ್ತಿರುವುದರಿಂದ ಜನರು ಭಯಭೀತರಾಗಿದ್ಧಾರೆ.

ಆದರೆ, ಈ ಘಟನೆ ಮಾಸುವ ಮುನ್ನವೆ ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಹಾಲಿಗೊಂಡನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಎಂಬುವವರು ಮನೆಯ ಪಕ್ಕದಲ್ಲೇ ಕುರಿಗಳನ್ನು ಸಾಕಲು ಕುರಿಹಟ್ಟಿಯನ್ನು ಕಟ್ಟಿಕೊಂಡು ಹತ್ತು ಕುರಿಗಳನ್ನು (Leopard attack) ಜೋಪಾನ ಮಾಡುತ್ತಿದ್ದ ಜೀವನೋಪಾಯಕ್ಕಾಗಿ ಸುಮಾರು ೫೦ ಸಾವಿರ ವೆಚ್ಚದಲ್ಲಿ ೧೦ ಕುರಿಗಳನ್ನು ತಂದು ಜೀವನ ನಿರ್ವಹಿಸುತ್ತಿದ್ದ.
ಗುರುವಾರ ತಡರಾತ್ರಿ ಚಿರತೆಯೊಂದು ಕುರಿಹಟ್ಟಿಗೆ ದಾಳಿ ನಡೆಸಿ ಐದು ಕುರಿಗಳನ್ನು ಕೊಂದಿದ್ದಲ್ಲದೆ, ಐದು ಕುರಿಗಳನ್ನು ಗಾಯಗೊಳಿಸಿ ಪರಾರಿಯಾಗಿದೆ.
ಕುರಿಹಟ್ಟಿಯ ಮೇಲೆ ದಿಢೀರನೆ ದಾಳಿ ನಡೆಸಿ ಕುರಿಗಳ ಮಾರಣಹೋಮ ನಡೆಸಿದ ಚಿರತೆಯನ್ನು ಕೂಡಲೇ (Leopard attack) ಅರಣ್ಯಾಧಿಕಾರಿಗಳು ಸೆರೆಹಿಡಿಯಬೇಕೆಂದು ತಿಪ್ಪೇಸ್ವಾಮಿ ಆಗ್ರಹಿಸಿದ್ಧಾರೆ.
ಜೊತೆಯಲ್ಲೇ ಗ್ರಾಮೀಣ ಭಾಗಗಳಲ್ಲಿ ಈ ದಾಳಿಯಿಂದ ಭಯದ ವಾತಾವರಣ ಉಂಟಾಗಿದ್ದು, ಸಂಜೆ ವೇಳೆ ಜನಜಾನುವಾರುಗಳು ಓಡಾಟ ನಡೆಸುವುದು ಕಷ್ಟವಾಗಿದೆ. (Leopard attack) ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆಗೆ ಕ್ರಮವಹಿಸುವಂತೆ ಮನವಿ ಮಾಡಿದ್ಧಾರೆ.
ಇದನ್ನೂ ಓದಿ: ನೂತನ ಆಯುಷ್ಮಾನ್ ಆರೋಗ್ಯ ಉಪಕೇಂದ್ರ ಹಾಗೂ ವಸತಿ ಗೃಹಗಳ ನಿರ್ಮಾಣ: ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ | KC Virendra Pappi
ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೇವಣ್ಣ ಮಾತನಾಡಿ, ಹಾಲಿಗೊಂಡನಹಳ್ಳಿ ಚಿರತೆದಾಳಿ ಕುರಿತಂತೆ ಮಾಹಿತಿ ಬಂದಿದ್ದು, ಪಶುವೈದ್ಯ ಡಾ.ಶಿವಪ್ರಕಾಶ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಐದು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ಧಾರೆ. ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದ್ಧಾರೆ. ಮೃತಪಟ್ಟ ಐದು ಕುರಿಗಳಿಗೆ ತಲಾ ೫ ಸಾವಿರದಂತೆ ೨೫ ಸಾವಿರ ಹಣ ಇಲಾಖೆಯಿಂದ ನೀಡಲಾಗುವುದು ಎಂದರು.
