Chitradurga News|Nammajana.com| April-19-4-2024
ನಮ್ಮಜನ.ಕಾಂ. ಚಿತ್ರದುರ್ಗ: ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್ ನಲ್ಲಿ ಮೃತ ಯುವತಿ ನೇಹಾಳ ವಿಚಾರದಲ್ಲಿ ನಡೆದಿರುವ ಘಟನೆ ಅತ್ಯಂತ ಕ್ರೂರವಾದ ಘಟನೆಯಾಗಿದ್ದು ಇಡೀ ರಾಜ್ಯದ ವಿದ್ಯಾರ್ಥಿಗಳು ಬೆಚ್ಚಿಬೀಳುಂತೆ ಮಾಡಿದ್ದು ಕಾಂಗ್ರೆಸ್ ನಾಯಕರು ಒಲೈಕೆ ರಾಜಕಾರಣ ನಿಲ್ಲಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ಪಾಲಯ್ಯ ಆಗ್ರಹಿಸಿದ್ದಾರೆ.
ಕಳೆದ ಹಲವು ವರ್ಷಗಳ ಕಾಲ ದಿನ ಕೇರಳ, ಕರಾವಳಿ ಮತ್ತು ಮಲೆನಾಡಿನಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಕಿಚ್ಚು ಇಂದು ಉತ್ತರ ಕರ್ನಾಟಕ ವ್ಯಾಪಿಸಿದೆ. ಈ ಘಟನೆ ಉತ್ತರ ಕರ್ನಾಟಕದ ಶಾಂತಿ, ಸುವ್ಯವಸ್ಥೆಗೆ ಜಿಹಾದ್ ಸಂಘಟನೆಗಳು ಕೊಡಲಿ ಏಟು ನೀಡಿದಂತೆ ಆಗಿದೆ.
ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥೆ ಬಯಸುವ ಪ್ರತಿಯೊಬ್ಬ ಪ್ರಜೆಯು ಈ ಘಟನೆಯನ್ನು ಖಂಡಿಸಬೇಕು. ರಾಜ್ಯಾದ್ತ ಕಾಲೇಜು ಕ್ಯಾಂಪಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಮತ್ತು ಅವರ ಫೋಷಕರಲ್ಲಿ ಆತಂಕ ಸೃಷ್ಟಿಸಿದೆ.
ಪ್ರೀತಿಸುವ ಮನಸ್ಸಿನಲ್ಲಿ ಇಷ್ಟೊಂದು ಕ್ರೌರ್ಯತೆ ಮೂಡಲು ಸಾಧ್ಯವಿಲ್ಲ. ಇದೊಂದು ವ್ಯವಸ್ಥಿತ ಜಾಲವಾಗಿದ್ದು ಆರೋಪಿಯನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು.ರಾಜ್ಯದಲ್ಲಿ ಈ ರೀತಿಯ ವಿದ್ಯಾರ್ಥಿಗಳ ವ್ಯವಸ್ಥಿತ ಜಾಲದ ಕುರಿತು ಜಾಗೃತಿ ಮೂಡಿಸಬೇಕಾಗಿದೆ.
ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ
ಒಂದು ಸಮಾಜದ ಬಗ್ಗೆ ಇರುವ ಮೃದು ಧೋರಣೆ ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದು ರಾಜ್ಯ ಸರ್ಕಾರ ಒಲೈಕೆ ರಾಜಕಾರಣ ಬಿಟ್ಟು ಪ್ರಕರಣದ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.