Chitradurga news|nammajana.com|5-8-2024
ನಮ್ಮಜನ.ಕಾಂ, ಚಿತ್ರದುರ್ಗ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಗರಾಭಿವೃದ್ಧಿ ಇಲಾಖೆಯು ನಗರಸಭೆ, (Local Body Reservation) ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಅಧ್ಯಕ್ಷ – ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ.
61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. 61 ನಗರ ಸಭೆಗಳಲ್ಲಿನ ಅಧ್ಯಕ್ಷ (Local Body Reservation) ಹುದ್ದೆಗಳ ಪೈಕಿ 16ನ್ನು ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ. ಇನ್ನು 15 ಅಧ್ಯಕ್ಷ ಹುದ್ದೆಗಳನ್ನು ಸಾಮಾನ್ಯ ಮಹಿಳೆಯರಿಗೆ ಮೀಸಲು ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಮೂರು ನಗರಸಭೆ, ಎರಡು ಪಟ್ಟಣ ಪಂಚಾಯಿತಿ ಹಾಗೂ ಎರಡು ಪುರಸಭೆಗಳಿಗೆ ಮೀಸಲಾತಿ ಪ್ರಕಟಿಸಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಳ ಅಧ್ಯಕ್ಷ, ಉಪಾಧ್ಯಕ್ಷರ ಮೊದಲನೇ ಎರಡುವರೇ ವರ್ಷದ ಅವಧಿ ಮುಗಿದಿದ್ದು, ಎರಡನೇ ಅವಧಿಗೆ ಮೀಸಲಾತಿಗಾಗಿ ಸದಸ್ಯರು (Local Body Reservation) ಸುಮಾರು ಒಂದೂವರೆ ವರ್ಷದಿಂದ ಹಲವು ಹೋರಟಗಳ ಮಾಡುವ ಮೂಲಕ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು.
ಚಿತ್ರದುರ್ಗ ನಗರಸಭೆ (Local Body Reservation)
- ಅಧ್ಯಕ್ಷ ಸ್ಥಾನ: ಸಾಮಾನ್ಯ ಮಹಿಳೆ,
- ಉಪಾಧ್ಯಕ್ಷ: ಸ್ಥಾನ ಬಿಸಿಎ ಮಹಿಳೆಗೆ
ಚಳ್ಳಕೆರೆ ನಗರಸಭೆ
- ಅಧ್ಯಕ್ಷ ಸ್ಥಾನ: ಬಿಸಿಎಂ ಬಿ ಮಹಿಳೆ
- ಉಪಾಧ್ಯಕ್ಷ ಸ್ಥಾನ: ಪರಿಶಿಷ್ಟ ಪಂಗಡ(ಎಸ್‌ಟಿ) ಮಹಿಳೆ.
ಹಿರಿಯೂರು ನಗರಸಭೆ (Local Body Reservation)
- ಅಧ್ಯಕ್ಷ ಸ್ಥಾನ ಬಿಸಿಎ,
- ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಎಸ್ಸಿ) ಮಹಿಳೆ
ಪುರಸಭೆ ಮೀಸಲಾತಿ ವಿವರ:(Local Body Reservation)
ಹೊಸದುರ್ಗ ಪುರಸಭೆ
- ಅಧ್ಯಕ್ಷ ಸ್ಥಾನ: ಪರಿಶಿಷ್ಟ ಪಂಗಡ(ಎಸ್ಟಿ),
- ಉಪಾಧ್ಯಕ್ಷ ಸ್ಥಾನ: ಬಿಸಿಎ ಮಹಿಳೆ.
ಹೊಳಲ್ಕೆರೆ ಪುರಸಭೆ
- ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಎಸ್ಸಿ),
- ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ
ಇದನ್ನೂ ಓದಿ:Holalkere Taluk: ಹೊಳಲ್ಕೆರೆ ತಾಲ್ಲೂಕು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಪಟ್ಟಣ ಪಂಚಾಯಿತಿ ಮೀಸಲಾತಿ ವಿವರ:(Local Body Reservation)
ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ
- ಅಧ್ಯಕ್ಷ ಸ್ಥಾನ: ಸಾಮಾನ್ಯ ಮಹಿಳೆಗೆ,
- ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ
- ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಎಸ್ಸಿ)
- ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ