Chitradurga Lok Saba Election News 2024 | NammaJana.com | 14-04-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಬಿಜೆಪಿ ಟಿಕೆಟ್ ಫೈಟ್ ಜೋರಾಗಿ ನಡೆದಿತ್ತು. ಒಂದು ರೀತಿ ರಾಜ್ಯದ ಎಲ್ಲಾ ರಾಜಕೀಯ ನಾಯಕರ ಗಮನ ಸೆಳೆಯುವಂತೆ ಮಾಡಿತ್ತು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಧ್ವನಿಯು ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ನಡೆದ ರಾಜಕೀಯ ವಿದ್ಯಮಾನಗಗಳು ಜಿಲ್ಲೆಯ ಜನರ ಗಮಸೆಳೆದಿದ್ದವು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿರುವ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಕ್ಷೇತ್ರ ಎಂದರೆ ತಪ್ಪಗಲಾರದು. ಇಲ್ಲಿನ ರಾಜಕೀಯ ಮತದಾರರ ಒಲವು ವಿಭಿನ್ನ ವಿಶೇಷವಾಗಿದೆ. ಇಲ್ಲಿ ಜಾತಿ ಲೆಕ್ಕಚಾರವು ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರವಾಗಿ ಹೊರ ಹೊಮ್ಮುವ ಮೂಲಕ ಜಿಲ್ಲೆಯ ಜನರ ಗಮನ ಸೆಳೆಯುತ್ತಿದೆ. ಹಾಲಿ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಪುತ್ರ ಎಂ.ಸಿ. ರಘುಚಂದನ್ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರಿಂದ ಹೊಳಲ್ಕೆರೆ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿತ್ತು.
ಅಪ್ಪ, ಮನಗನ ಬಂಡಾಯ; ಬಿ.ಎಸ್.ಯಡಿಯೂರಪ್ಪ ಸಂಧಾನ (Chitradurga Lok Sabha Election 2024)
ಬಿಜೆಪಿ ಟಿಕೆಟ್ ದೊರೆಯುವ ವಿಶ್ವಾಸದಲ್ಲಿ ರಘುಚಂದನ್ ದೈವ ಮೂಲೆಯಿಂದ ಪ್ರಚಾರ ಸಹ ಆರಂಭಿಸುವ ಮೂಲಕ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಟಿಕೆಟ್ ದೊರೆಯದ ಕಾರಣದಿಂದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘು ಚಂದನ್ ಸಾರಿದ ಬಂಡಾಯದ ಪರಿಣಾಮ ಪಕ್ಷದಲ್ಲಿ ನಡೆದ ಬೆಳವಣಿಗೆಗಳು ಬಿಜೆಪಿಗೆ ಮುಜುಗರ ಉಂಟು ಮಾಡಿದ್ದಂತು ಸುಳ್ಳಲ್ಲ.
ಚಂದ್ರಪ್ಪ ಕುಟುಂಬ ಟಿಕೆಟ್ ಕೊಡಿಸಲಿಲ್ಲ ಎಂದು ನೇರವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ನುಡಿದ ಮಾತುಗಳು ಬಿಜೆಪಿಯಲ್ಲಿ ಒಡಕು ಮೂಡಿ ಎರಡು ಬಣಗಳಾಗಿ ಒಬ್ಬರಿಗೊಬ್ಬರು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಪಕ್ಷೇತರ ಅಭ್ಯರ್ಥಿ ಆಗಿ ಸ್ವರ್ಧೆ ಮಾಡಿಯೇ ತೀರುತ್ತೇವೆ ಎಂದು ಘೋಷಿಸಿ ಸ್ವಾಭಿಮಾನಿ ಸಮಾವೇಶ ಸಹ ಮಾಡಿದರು ಈ ಎಲ್ಲಾವನ್ನು ಸೂಕ್ಷ್ಮವಾಗಿ ಗಮನಿಸಿಸ ಬಿಜೆಪಿ ರಾಜ್ಯ ನಾಯಕರು ಎಂಟ್ರಿಯಾಗಿ ಭೇಟಿ ಮಾಡಿದರು ಅಸಮಾಧಾನ ತಣಿಸಲು ಆಗಲಿಲ್ಲ.
ಇದರಿಂದ ಎಚ್ಚೆತ್ತುಕೊಂಡ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ನಿವಾಸಕ್ಕೆ ಬರಲು ಬುಲಾವ್ ನೀಡಿ ಮಾತುಕತೆ ಮೂಲಕ ಬಿಜೆಪಿಯಲ್ಲಿನ ವಾತಾವರಣ ವನ್ನೂ ತಿಳಿಗೊಳಿಸಿದ ನಂತರ ಲೋಕಾ ಚುನಾವಣಾ ಪ್ರಚಾರ ಭರ್ಜರಿಯಾಗಿ ಆರಂಭಿಸಿದ್ದು ಮುನಿಸು ಮರೆತು ಎರಡೂ ಪಕ್ಷಗಳು ಅಖಾಡಕ್ಕೆ ಧುಮುಕ್ಕಿದ್ದಾರೆ.
Read Also: ದೇಶದ ಸುರಕ್ಷತೆಗಾಗಿ ಮತ್ತೊಮ್ಮೆ ಬಿಜೆಪಿ ಅಗತ್ಯ: ಎಸ್.ಕೆ.ಬಸವರಾಜನ್
ಹೊಳಲ್ಕೆರೆಯಲ್ಲಿ ತಣಿಯದ ಮುನಿಸು, ಕಮಲ ಪಡೆಗೆ ಮುಳುವಾಗುವುದೇ?(Chitradurga Lok Sabha Election 2024)
ಬಿಜೆಪಿ ಪಕ್ಷದ ರಾಜ್ಯ ಮುಖಂಡರು ಶಾಸಕ ಚಂದ್ರಪ್ಪ, ರಘುಚಂದನ್‍ರನ್ನು ಖುದ್ದು ಕರೆಸಿ ಮಾತುಕತೆ ನಡೆಸಿದ ನಂತರವೂ ಸಹ ಒಳ ಒಳಗೆ ಸ್ಥಳೀಯವಾಗಿ ಗುಂಪುಗಾರಿಕೆ ರಾಜಕರಾಣ ನಿಂತಿಲ್ಲ. ಈಗ ಹೊಳಲ್ಕೆರೆ ಯಲ್ಲಿ ಚಂದ್ರಪ್ಪ ನೇತೃತ್ವದಲ್ಲಿ ಒಂದು ಗುಂಪು, ಬಿಜೆಪಿ, ಬಿಎಸ್‍ವೈ ನಿಷ್ಟರ ಮತ್ತೊಂದು ಗುಂಪು ಇದ್ದು ಎರಡು ಪ್ರತ್ಯೇಕ ಸಭೆಗಳನ್ನು ಸಹ ಹೊಳಲ್ಕೆರೆಯಲ್ಲಿ ಮಾಡಿದ್ದಾರೆ. ಆದರೆ ಶುಕ್ರವಾರ ವಿಜಯೇಂದ್ರ ಹೊಳಲ್ಕೆರೆ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ.ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದ್ದರು ಸಹ ಈ ಒಗ್ಗಟ್ಟು ಮುಂದುವರೆಯುತ್ತದೆಯೇ ಎಂಬುದು ಕಾದು ನೋಡಬೇಕಿದೆ.
ಅಹಿಂದ ಮತಗಳ ಸಂಗ್ರಹಕ್ಕೆ ಕೈ ಪಡೆ ಹರಸಾಹಸ (Chitradurga Lok Sabha Election 2024)
ಬಿಜೆಪಿ ಪಕ್ಷದ ಇಂತಹ ಬೆಳವಣಿಗೆಗಳಿಗೆ ಭಿನ್ನವಾಗಿ ಹೊಳಲ್ಕೆರೆ ಕಾಂಗ್ರೆಸ್‍ನಲ್ಲಿ ಉತ್ಸಾಹದ ವಾತಾವರಣ ಕಾಣುತ್ತಿದ್ದು ಕಳೆದ ಐದು ದಿನಗಳಿಂದ ಮಾಜಿ ಸಚಿವ ಹೆಚ್.ಆಂಜನೇಯರ ನೇತೃತ್ವದಲ್ಲಿ ನಿರಂತರವಾಗಿ ಹಳ್ಳಿಗಳಿಗೆ ತೆರಳಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ವೇಗ ನೀಡಿದ್ದು ಭರ್ಜರಿ ಕ್ಯಾಂಪ್ಯನ್ ಆರಂಭಿಸಿದ್ದಾರೆ. ಈಗಾಗಲೇ ತಾಳ್ಯ, ಎಚ್.ಡಿ. ಪುರ, ಚಿಕ್ಕಜಾಜೂರು, ಭರಮಸಾಗರ ಹೋಬಳಿಗಳಲ್ಲಿ ಪ್ರಚಾರ ನಡೆಸಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಮತಗಳು ಸೇರಿದಂತೆ ಕಾಂಗ್ರೆಸ್‍ಗೆ ಶಕ್ತಿ ತುಂಬುವಂತಹ ಅಹಿಂದ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಆಂಜನೇಯ ಹರಸಾಹಸ ಪಡುತ್ತಿದ್ದು ದೊಡ್ಡ ಸವಾಲಾಗಿದೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ
ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದವರಿಗಿಂತ ಬಿಜೆಪಿಗೆ ಈ ತೊಂದರೆ ಇಲ್ಲ. ಬಿಜೆಪಿಯ ಭದ್ರ ಕೋಟೆ ಎಂಬ ಖ್ಯಾತಿ ಮೂಲಕ ಬಿಂಬಿತವಾಗಿರುವ ಹೊಳಲ್ಕೆರೆಯಲ್ಲಿ ಪ್ರಬಲ ಲಿಂಗಾಯಿತ ಸಮುದಾಯದ ಮತ ಬ್ಯಾಂಕ್ ಗಟ್ಟಿಯಾಗಿದೆ. ಇದೇ ಕಾರಣಕ್ಕೆ ಕಳೆದ ಮೂರು ಲೋಕಸಭೆ ಚುನಾವಣೆಯಲ್ಲೂ ಒಂದು ಚುನಾವಣೆಗಿಂತ ಮತ್ತೊಂದು ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಲೀಡ್ ಪಡೆಯುತ್ತಲೇ ಬಂದಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಮುಂದೆ ಬಿಜೆಪಿ ಪ್ರಾಬಲ್ಯ ಕುಗ್ಗುತ್ತಾ? ಸಂಪ್ರಾದಾಯಕ ಮತ ಪಡೆದು ಓಟ ಮುಂದುವರೆಸುತ್ತಾ? ಎಂಬುದರ ಜೊತೆಗೆ ಈ ಬಾರಿಯಾದರೂ ಕಾಂಗ್ರೆಸ್ ತನ್ನ ಶಕ್ತಿ ವೃದ್ಧಿಸಿಕೊಂಡು ಪ್ರಾಬಲ್ಯ ಸಾಧಿಸಲಿದೆಯಾ? ಎಂಬುದು ಚುನಾವಣೆ ಮುಗಿದು ಫಲಿತಾಂಶದ ನಂತರ ಎಲ್ಲಾ ಲೆಕ್ಕಚಾರಗಳು ನಡೆಯುತ್ತಿರುತ್ತವೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2013 ರಲ್ಲಿ ಕಾಂಗ್ರೆಸ್‍ನ ಹೆಚ್. ಆಂಜನೇಯ ತರುವಾಯ 2018 , 2023 ನಿರಂತರವಾಗಿ ಬಿಜೆಪಿಯ ಎಂ. ಚಂದ್ರಪ್ಪ ಗೆಲುವಿಗೆ ನಗೆ ಬೀರುತ್ತಾ ಬಂದಿದ್ದಾರೆ. 2018 ರಲ್ಲಿ ಶಾಸಕ ಚಂದ್ರಪ್ಪ 38,940 ಮತಗಳ ಲೀಡ್ ಪಡೆದಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 5,706 ಮತಗಳ ಅಲ್ಪ ಲೀಡ್ ಗೆಲುವು ಸಾಧಿಸಿದ್ದರು.ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆಗಿರುವ ಲೀಡ್ ವ್ಯತ್ಯಾಸ ಮುಂದುವರೆದು ಕಾಂಗ್ರೆಸ್ ಗೆ ವರವಾಗಲಿದೆಯಾ ಅಥವಾ ಹಳೆ ಲೀಡ್ ನೀಡಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮರಳಿ ಪ್ರಾಬಲ್ಯ ಸಾಧಿಸುತ್ತಾ ಎಂಬುದು ಕಾದು ನೋಡಬೇಕಿದೆ..
ಹೊಳಲ್ಕೆರೆ ಕ್ಷೇತ್ರದ ಅಂಕಿ, ಅಂಶ
ಎರಡು ಲೋಕಸಭಾ ಚುನಾವಣೆ ಲೀಡ್ ಬಿಜೆಪಿ ಲೀಡ್
- 2014ರ ಲೋಕಸ‘ ಚುನಾವಣೆ ಯಲ್ಲಿ 13,659 ಮತಗಳ ಲೀಡ್
- 2019 ರ ಚುನಾವಣೆಯಲ್ಲಿ 38,082 ಮತಗಳ ಲೀಡ್
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 2023 ರ ಫಲಿತಾಂಶ
- ಎಂ.ಚಂದ್ರಪ್ಪ ಬಿಜೆಪಿ 87,987
- ಎಚ್.ಆಂಜನೇಯ ಕಾಂಗ್ರೆಸ್ 82,281
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 2019 ರ ಫಲಿತಾಂಶ
- ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ 59,398
- ಎ.ನಾರಾಯಣಸ್ವಾಮಿ ಬಿಜೆಪಿ 97,480
ಮೈನಸ್ ಪ್ಲಸ್
- ಮೋದಿ ಅಲೆ ಮತ್ತು ಲಿಂಗಾಯತ ಸಮುದಾಯ ಮತಗಳು ಬಿಜೆಪಿಗೆ ಪ್ಲಸ್
- ಚಂದ್ರಪ್ಪ ಮತ್ತು ಪುತ್ರರ ಸಂಧಾನ ಪ್ಲಸ್
- ದಲಿತ ಮತ್ತು ಅಹಿಂದ, ಹಿಂದುಳಿತ ಮತಗಳು ಕಾಂಗ್ರೆಸ್ ಗೆ ಪ್ಲಸ್
- ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ಗೆ ಪ್ಲಸ್
- ಮಾಜಿ ಸಚಿವ ಹೆಚ್.ಆಂಜನೇಯ ಹೊಳಲ್ಕೆರೆ ಕ್ಷೇತ್ರಕ್ಕೆ ಕಡಿಮೆ ಗಮನ ಹರಿಸುತ್ತಿರುವುದು ಮೈನಸ್
- ಬಿಜೆಪಿಯ ಬಣ ರಾಜಕೀಯ ಬಿಜೆಪಿಗೆ ಮೈನಸ್
English Summary: Chitradurga Lok Sabha Election 2024, Lok Sabha Election 2024, Lokfight 2024, Holalkere Constituency, BN Chandrappa, Govinda Karjola, BJP, Congress, Nammajana.com, Chitradurga News, Kannada News, Chitradurga Political News,